ಶುಭಾ ಪೂಂಜ ಈಗ ಪತ್ರಕರ್ತೆ
ಹೊಸಬರ ರೈಮ್ಸ್ ಚಿತ್ರದಲ್ಲಿ ನಟನೆ
Team Udayavani, Oct 31, 2019, 3:03 AM IST
ಇತ್ತೀಚೆಗಷ್ಟೇ “ಖಾಲಿದೋಸೆ ಕಲ್ಪನ’ ಚಿತ್ರವನ್ನು ಒಪ್ಪಿಕೊಂಡಿದ್ದ ಶುಭಾಪೂಂಜ, ಇದೀಗ ಮತ್ತೂಂದು ಹೊಸಬರ ಚಿತ್ರದಲ್ಲಿ ಕಾಣಿಸಿಕೊಳ್ಳಲು ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಹೌದು, ಬಹುತೇಕ ಹೊಸಬರೇ ಸೇರಿ ಮಾಡುತ್ತಿರುವ “ರೈಮ್ಸ್’ ಚಿತ್ರದಲ್ಲಿ ಶುಭಾಪೂಂಜ ವಿಶೇಷ ಪಾತ್ರದ ಮೂಲಕ ಗಮನಸೆಳೆಯಲು ಹೊರಟಿದ್ದಾರೆ. ಇದುವರೆಗೆ ಪಕ್ಕಾ ಗ್ಲಾಮರಸ್ ಆಗಿ ಮಿಂಚಿದ್ದ ಶುಭಾಪೂಂಜಾ ಈಗ ಮೊದಲ ಬಾರಿಗೆ ಪತ್ರಕರ್ತೆಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಕ್ರೈಮ್ ಥ್ರಿಲ್ಲರ್ ಜಾನರ್ ಆಗಿರುವ ಈ ಚಿತ್ರಕ್ಕೆ ಅಜಿತ್‌ಕುಮಾರ್ ಜೆ. ನಿರ್ದೇಶಕರು. ಅವರಿಗೆ ಇದು ಮೊದಲ ಸಿನಿಮಾ. ಒಂದು ಕೊಲೆಯ ತನಿಖೆ ಸುತ್ತ ನಡೆಯುವ ಕಥೆ ಇದು. ಚಿತ್ರದಲ್ಲಿ ಯಾವುದೇ ಸಾಂಗ್ಸ್ , ಫೈಟ್ಸ್ ಕೂಡ ಇಲ್ಲ. ಶುಭಾಪೂಂಜ ಅವರು ಪತ್ರಕರ್ತೆಯಾಗಿ ಒಂದು ಕೊಲೆಯ ತನಿಖೆಯ ಹಿಂದೆ ಬೀಳುತ್ತಾರೆ. ಅದು ಹೇಗೆ ಬಯಲಿಗೆ ತರುತ್ತಾರೆ ಎಂಬ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ. ಇಡೀ ಚಿತ್ರದುದ್ದಕ್ಕೂ ಪತ್ರಕರ್ತೆಯ ಪಾತ್ರ ಹೈಲೈಟ್ ಆಗಿದ್ದು, ಆ ಕುರಿತು ಸ್ವತಃ ಶುಭ ಹೇಳುವುದಿಷ್ಟು.
“ಚಿತ್ರದಲ್ಲಿ ನಾನು ಮೊದಲ ಸಲ ಪತ್ರಕರ್ತೆ ಪಾತ್ರ ಮಾಡುತ್ತಿದ್ದೇನೆ. ಅದೊಂದು ಚಾಲೆಂಜಿಂಗ್ ಪಾತ್ರ. ಯಾಕೆಂದರೆ, ಒಂದು ಕೊಲೆಯ ರಹಸ್ಯವನ್ನು ಪೊಲೀಸ್ ಅಧಿಕಾರಿ ತನಿಖೆ ಮೂಲಕ ಬಿಚ್ಚಿಡುತ್ತಾರೆ. ಆದರೆ, ನಾನೂ ಸಹ ಪತ್ರಕರ್ತೆಯಾಗಿ ಆ ರಹಸ್ಯವನ್ನು ಬಿಚ್ಚಿಡಲು ಹೋರಾಡುತ್ತೇನೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು’ ಎನ್ನುವ ಅವರು, ನಾಯಕ ನಟನಿಗೆ ಇರುಷ್ಟೇ ತೂಕ ಆ ಪತ್ರಕರ್ತೆ ಪಾತ್ರದಲ್ಲೂ ಇದೆ.
ಮೊದಲ ಸಲ ರಿಪೋರ್ಟರ್ ಪಾತ್ರ ಮಾಡುತ್ತಿರುವುದಕ್ಕೆ ಖುಷಿ ಇದೆ’ ಎನ್ನುತ್ತಾರೆ ಅವರು. ನವೆಂಬರ್ 9 ರಂದು ಚಿತ್ರಕ್ಕೆ ಮುಹೂರ್ತ ನಡೆಯಲಿದ್ದು, 14 ರಿಂದ ಚಿತ್ರೀಕರಣ ನಡೆಯಲಿದೆ. ಚಿತ್ರವನ್ನು ಜ್ಞಾನಶೇಖರ್ ಹಾಗು ರಮೇಶ್ ಆರ್ಯ ನಿರ್ಮಿಸುತ್ತಿದ್ದಾರೆ. ಅಜಿತ್ ಜಯರಾಜ್ ಚಿತ್ರದ ಹೀರೋ. ಅವರೊಂದಿಗೆ ಸುಷ್ಮಾ ನಾಯರ್ ಇತರರು ನಟಿಸುತ್ತಿದ್ದಾರೆ. ಶಕ್ತಿ ಚಿತ್ರಕ್ಕೆ ಸಂಗೀತ ನೀಡಿದರೆ, ಅರ್ಜುನ್ ಅಕೋಟ್ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.