“ಶುಭಾ’ ಯೋಗಸೂತ್ರ
Team Udayavani, Feb 13, 2019, 5:35 AM IST
ನಟಿ ಶುಭಾಪೂಂಜಾ ಮತ್ತೆ ಸುದ್ದಿಯಾಗಿದ್ದಾರೆ. ಹಾಗಂತ, ಅವರು ಹೊಸ ಚಿತ್ರ ಒಪ್ಪಿಕೊಂಡಿಲ್ಲ. ಆಗಾಗ ಒಂದಷ್ಟು ವಿಭಿನ್ನ ಶೈಲಿಯಲ್ಲಿ ಫೋಟೋಗಳಿಗೆ ಫೋಸ್ ಕೊಡುವ ಮೂಲಕ ಪಡ್ಡೆಗಳನ್ನು ಖುಷಿಪಡಿಸುತ್ತಿದ್ದರು. ಈಗ ಮತ್ತೂಮ್ಮೆ ಅಂಥದ್ದೇ ಶೈಲಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಹರಿಬಿಟ್ಟಿದ್ದಾರೆ. ಅವರು ಹೀಗೆ ಸಖತ್ ಹಾಟ್ ಲುಕ್‌ನಲ್ಲಿ ಫೋಟೋ ತೆಗೆಸಿಕೊಂಡಿರುವುದರಲ್ಲಿ ವಿಶೇಷ ಅರ್ಥವಿದೆ.
ಅಂದಹಾಗೆ, ಶುಭಾಪೂಂಜಾ ಅವರನ್ನು ಈ ಶೈಲಿಯಲ್ಲಿ ಕಾಣಿಸಿಕೊಳ್ಳುವಂತೆ ಹೇಳಿದ್ದು, ಮೇಕಪ್ ಡಿಸೈನರ್ ಮಂಗಳ ಬನಸುದೆ. ಹೌದು, “ಪ್ರೇಮಿಗಳ ದಿನ’ಕ್ಕಾಗಿ ಮಾಡಿದ ವಿಶೇಷ ಫೋಟೋ ಇದು. ಮಂಗಳ ಬನಸುದೆ ಮೇಕಪ್ ಡಿಸೈನರ್ ಆಗಿದ್ದಾರೆ. ಈಗ ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಎಂಬಂತೆ, ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ ಮಂಗಳ ಬನಸುದೆ. ಶುಭಾಪೂಂಜಾ ಈ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲು ಕಾರಣವಿದೆ.
ಅದೇನೆಂದರೆ, ಕಳೆದ ವರ್ಷ “ಪ್ರೇಮಿಗಳ ದಿನ’ ಆಚರಣೆ ಬೇಡ ಎಂಬ ದೊಡ್ಡ ಗಲಾಟೆಯೇ ನಡೆದಿತ್ತು. ಯಾಕೆಂದರೆ, ಅದು ನಮ್ಮ ಸಂಸ್ಕೃತಿಯಲ್ಲ ಎಂಬ ಕಾರಣಕ್ಕೆ. ಆದರೆ, ಪ್ರೀತಿ ಅನ್ನುವುದು ಎಲ್ಲೆಡೆ ಇರುವಂಥದ್ದು. ನಾವು ನಮ್ಮದೇ ರೀತಿಯಲ್ಲಿ ಪ್ರೀತಿಯ ದಿನವನ್ನು ಆಚರಿಸಬೇಕೆಂಬ ಕಾರಣಕ್ಕೆ ಅವರು ಪ್ರೇಮಿಗಳಿಗೊಂದು ಸಂದೇಶ ಕೊಡುವ ನಿಟ್ಟಿನಲ್ಲಿ, “ಕಾಮಸೂತ್ರ’ದ ಜೊತೆಗೆ ಯೋಗ ಸೇರಿಸಿಕೊಂಡು “ಯೋಗಸೂತ್ರ’ ಎಂಬ ಹೊಸ ಕಾನ್ಸೆಪ್ಟ್ನೊಂದಿಗೆ ಪ್ರೀತಿಯ ದಿನ ಆಚರಣೆಗೆ ಸಜ್ಜಾಗಿರುವ ಯುವ ಪ್ರೇಮಿಗಳಿಗೆ ಕೊಡುಗೆಯಾಗಿ ಈ ಫೋಟೋಶೂಟ್ ಮಾಡಿಸಿದ್ದಾರೆ.
ಈ ಫೋಟೋಗೆ ಸ್ಫೂರ್ತಿ ಶಿಲ್ಪಕಲೆಗಳು. ಶಿಲಾಬಾಲಿಕೆ ರೂಪದಲ್ಲೇ ಫೋಟೋ ಶೂಟ್ ನಡೆಸಿದ್ದು, ಅದು ಪ್ರೇಮಿಗಳ ದಿನಕ್ಕಾಗಿ ನಮ್ಮ ದೇಸಿ ಸಂಸ್ಕೃತಿಯಲ್ಲೇ ಆಚರಣೆ ನಡೆಸುವವರಿಗಾಗಿ “ಯೋಗಸೂತ್ರ’ದ ಸಂದೇಶವಿದು ಎಂಬುದು ಶುಭ ಮಾತು. ನಂದಿಬೆಟ್ಟದಲ್ಲಿ ಇಡೀ ಒಂದು ದಿನ ಫೋಟೋ ಶೂಟ್ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chhattisgarh; 4 ವರ್ಷದ ಬಾಲಕಿ ಮೇಲೆ 10,13 ವರ್ಷದ ಹುಡುಗರಿಬ್ಬರಿಂದ ಲೈಂಗಿ*ಕ ದೌರ್ಜನ್ಯ
ಕೆಎ-11-1977: ಇದು ವಾಹನ ಸಂಖ್ಯೆಯಲ್ಲ, ಸಿನಿಮಾ ಟೈಟಲ್
ಯಲ್ಲಾಪುರ: ನೀರಿನ ಟ್ಯಾಂಕ್‌ನಲ್ಲಿ ಕೊಳೆತ ಹಾವು; ಜನರಲ್ಲಿ ಆತಂಕ
Brahmin welfare panel; 4 ಮಕ್ಕಳು ಪಡೆದು 1 ಲಕ್ಷ ರೂ. ಬಹುಮಾನ ಗೆಲ್ಲಿ!
Champions Trophy: ದ.ಆಫ್ರಿಕಾ ತಂಡ ಪ್ರಕಟ; ಇಬ್ಬರು ಸ್ಟಾರ್ ವೇಗಿಗಳಿಗಿಲ್ಲ ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.