ಇದು ನಕ್ಕು ನಗಿಸುವ ಪಯಣ: ವೈಜಯಂತಿ ಪಾತ್ರದಲ್ಲಿ ಶ್ವೇತಾ ಮಿಂಚು
Team Udayavani, Apr 21, 2023, 3:55 PM IST
ನಟಿ ಶ್ವೇತಾ ಶ್ರೀವಾತ್ಸವ್ “ಸಿಂಪಲ್ಲಾಗೊಂದ ಲವ್ ಸ್ಟೋರಿ’ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ. ಕಳೆದ 5-6 ವರ್ಷಗಳಿಂದ ಮಗಳು, ಸಂಸಾರ ಎಂದು ಸಿನಿಮಾ ರಂಗದಿಂದ ದೂರವಿದ್ದ ನಟಿ ಇತ್ತೀಚೆಗೆ ಚಿತ್ರರಂಗದಲ್ಲಿ ಬಿಝಿಯಾಗುತ್ತಿದ್ದಾರೆ. ನವರಸನಾಯಕ ಜಗ್ಗೇಶ್ ಅಭಿನಯದ, ನಿರ್ದೇಶಕ ಸಂತೋಷ ಆನಂದ್ ರಾಮ್ ಹಾಗೂ ವಿಜಯ ಕಿರಗಂದೂರು ಕಾಂಬಿನೇಶನ್‌ನ ಚಿತ್ರ “ರಾಘವೇಂದ್ರ ಸ್ಟೋರ್’ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, “ಉದಯವಾಣಿ’ಯೊಂದಿಗೆ ತಮ್ಮ ನೂತನ ಚಿತ್ರದ ಕುರಿತು ಮಾತನಾಡಿದ್ದಾರೆ
ದೊಡ್ಡ ಗ್ಯಾಪ್‌ನ ನಂತರ, ದೊಡ್ಡ ಮಟ್ಟದಲ್ಲಿ ಚಿತ್ರರಂಗಕ್ಕೆ ಮರಳುತ್ತಿದ್ದೀರಿ ಏನಂತೀರಿ?
ಮಗಳು ಹುಟ್ಟಿದ ನಂತರ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ನಾನು, ಮಗಳ ಪಾಲನೆಯಲ್ಲಿ ಬಿಝಿಯಾಗಿದ್ದೆ. ಆಗಷ್ಟೇ ಮತ್ತೆ ಚಿತ್ರರಂಗಕ್ಕೆ ಮರಳಬೇಕು ಅನ್ನುವಾಗ ಈ ಅವಕಾಶ ಬಂತು. ಈ ಥರದ ಅವಕಾಶ, ಇಷ್ಟು ದೊಡ್ಡ ಬ್ಯಾನರ್, ಉತ್ತಮ ಚಿತ್ರತಂಡ ನನಗೆ ಸಿಗುತ್ತೆ ಎಂದು ಎಣಿಸಿರಲಿಲ್ಲ. ಅದರಲ್ಲೂ ಒಂದು ಉತ್ತಮ ಕಥೆ ಜೊತೆ ಮರಳುತ್ತಿರುವುದು ಸಂತೋಷ.
ನಿಮ್ಮ ಪಾತ್ರದ ಬಗ್ಗೆ ಹೇಳಿ?
ಚಿತ್ರದಲ್ಲಿ ವೈಜಯಂತಿ ಎನ್ನುವ ಪಾತ್ರದಲ್ಲಿ ಕಾಣಿಕೊಳ್ಳಲಿದ್ದೇನೆ. ವೈಜಯಂತಿ ಓರ್ವ ಸಂಗೀತಗಾರ್ತಿ. ಜಗ್ಗೇಶ್ ಅವರ ಹೆಂಡತಿ ಪಾತ್ರದಲ್ಲಿ, ಅಪ್ಪಟ ಗೃಹಿಣಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ನನಗೆ ಪ್ರಾಮುಖ್ಯತೆ ಇದೆ. ನವರಸಗಳನ್ನು ತೋರ್ಪಡಿಸುವ ಅವಕಾಶ ಇಲ್ಲಿತ್ತು. ಚಿತ್ರದಲ್ಲಿ ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಕಾಮಿಡಿ, ಎಮೋಷನ್ಸ್, ರೊಮ್ಯಾನ್ಸ್, ಗ್ಲಾಮರ್ ಎಲ್ಲವೂ ಇದೆ.
ಜಗ್ಗೇಶ್ ಜೊತೆಗೆ ಅಭಿನಯಿಸಿದ ಅನುಭವ ?
ಜಗ್ಗೇಶ್ ಸರ್ ಒಂದು ಲಿವಿಂಗ್ ಲೆಜೆಂಡ್. ಸೆಟ್‌ನಲ್ಲಿ ಕಾಮಿಡಿ ಮಾಡ್ತಾ ಕೆಲಸ ಮಾಡ್ತಾರೆ. ಅವರ ಸೆನ್ಸ್ ಆಫ್ ಹ್ಯೂಮರ್ ಸಖತ್ ಇಷ್ಟ. ಎಲ್ಲರೂ ಅವರನ್ನು ಇಷ್ಟಪಡ್ತಾರೆ. ನನ್ನ ಮಗಳು ಸಹ ಶೂಟಿಂಗ್‌ಗೆ ಬರುತ್ತಿದ್ದಳು. ಅವಳನ್ನೂ ಸಹ ಅಷ್ಟೇ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಜಗ್ಗೇಶ್ ಅವರ ಜೀವನ, ಆಧ್ಯಾತ್ಮದ ಕುರಿತು ಮಾತನಾಡುವ ಬಗೆ, ಕಥೆ ಹೇಳುವ ಬಗೆ ನನಗೆ ತುಂಬಾ ಇಷ್ಟ. ಅವರ ಕೆಲಸ ಮಾಡುವ ಪರಿ ನಮಗೂ ಒಂದು ಸ್ಫೂರ್ತಿ.
“ರಾಘವೇಂದ್ರ ಸ್ಟೋರ್ ‘ನ ಸಾರಾಂಶ ?
ಒಂದು ವಿಭಿನ್ನವಾದ ಚಿತ್ರ ರಾಘವೇಂದ್ರ ಸ್ಟೋರ್ . ಒಂದು ಸೂಕ್ಷ್ಮ ವಿಷಯವನ್ನು ನಕ್ಕು ನಗಿಸುವ ರೀತಿಯಲ್ಲಿ ಹೇಳುವುದು ಸುಲಭದ ಕೆಲಸವಲ್ಲ. ಆ ಕೆಲಸವನ್ನು ಈ ಚಿತ್ರ ಮಾಡುತ್ತಿದೆ. ಎಲ್ಲಾ ವರ್ಗದ ಪ್ರೇಕ್ಷಕರು ಕುಳಿತು ನೋಡುವಂತ ಚಿತ್ರ. ಪ್ರತಿಯೊಂದು ಸಂಸಾರದಲ್ಲೂ ನಡೆಯುವ ಕಥೆಯಾದ್ದರಿಂದ, ಎಲ್ಲಾ ಸಾಮಾನ್ಯ ಜನರಿಗೂ ಚಿತ್ರ ತುಂಬಾ ಹತ್ತಿರವಾಗುತ್ತದೆ.
ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ಸಿಕ್ಕ ಅವಕಾಶದ ಬಗ್ಗೆ ಏನು ಹೇಳ್ತಿರಾ?
ಆಗಷ್ಟೇ ಕೆ.ಜಿ.ಎಫ್ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿ ಎಲ್ಲೆಡೆ ಮನೆಮಾತಾಗಿತ್ತು. ಹೊಂಬಾಳೆ ಫಿಲಂಸ್ ನಿಂದ ಯೋಗಿ ಹಾಗೂ ಸಂತೋಷ ಅವರು ಕರೆ ಮಾಡಿದಾಗ ಆಶ್ಚರ್ಯ, ಸಂತೋಷ ಎಲ್ಲವೂ ಆಗಿತ್ತು. ನನ್ನ ಮಗಳ ಅದೃಷ್ಟವೋ ಏನೋ ಮತ್ತೆ ಚಿತ್ರರಂಗಕ್ಕೆ ಮರಳಬೇಕು ಎನ್ನುವಾಗ ಹೊಂಬಾಳೆಯಂಥಹ ಚಿತ್ರ ಸಂಸ್ಥೆ ನನಗೆ ಅವಕಾಶ ನೀಡಿದ್ದು, ಇದು ನಿಜಕ್ಕೂ ನನ್ನ ಪಾಲಿನ ಅದೃಷ್ಟ.
ವಾಣಿ ಭಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.