ತ್ರಿವಿಧ ದಾಸೋಹಿಗೆ ಚಿತ್ರರಂಗ ಕಂಬನಿ
Team Udayavani, Jan 22, 2019, 6:00 AM IST
ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಇಹಲೋಕ ತ್ಯಜಿಸಿರುವುದು ಬಹಳ ನೋವಿನ ಸಂಗತಿ. ಇಷ್ಟು ದಿನ ಭಕ್ತರ ದರ್ಶನಕ್ಕೆ ಅವರಿದ್ದರು, ಈಗ ದೈಹಿಕವಾಗಿ ನಮ್ಮನ್ನು ಅಗಲಿದರೂ ಎಲ್ಲರ ಮನೆ ಮನಗಳಲ್ಲಿ ಅವರು ಭದ್ರವಾಗಿ ನೆಲೆಸಿದ್ದಾರೆ.
-ದರ್ಶನ್, ನಟ
ತ್ರಿವಿಧ ದಾಸೋಹಿ ಶತಮಾನದ ಯುಗಪುರುಷ ಶ್ರೀ ಶಿವಕುಮಾರ ಸ್ವಾಮಿಗಳು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತ ನಲ್ಲಿ ಪ್ರಾರ್ಥಿಸೋಣ..
-ಸುದೀಪ್, ನಟ
ಜಾತಿ ಧರ್ಮ ಭೇದವಿಲ್ಲದೆ ಲಕ್ಷಾಂತರ ಜನಕ್ಕೆ ವಿದ್ಯಾಭ್ಯಾಸ ಕೊಟ್ಟಿರುವಂತಹ ನಡೆದಾಡುವ ದೇವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಆಶೀರ್ವಾದ ಎಲ್ಲರ ಮೇಲೂ ಇರಲಿ..
-ಪುನೀತ್, ನಟ
ಬೇಡುವ ಕೈಗಳಿಗಿಂತ, ದುಡಿಯುವ ಕೈಗಳು ಮೇಲು ಎಂಬುದನ್ನು ತೋರಿಸಿಕೊಟ್ಟು ಒಬ್ಬ ಮನುಷ್ಯ ಹೇಗೆ ಸಾರ್ಥಕ್ಯವಾಗಿ ಬದುಕಬೇಕೆಂಬುದಕ್ಕೆ ಜೀವಂತ ನಿದರ್ಶನವಾದವರು ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳು. ನಡೆದಾಡುವ ದೇವರು ಕಾಣದ ದೇವರೊಂದಿಗೆ ಐಕ್ಯರಾಗಿದ್ದಾರೆ. ಹೋಗಿ ಬನ್ನಿ ಬುದ್ಧಿ .. ಮತ್ತೆ ಬನ್ನಿ
-ಯಶ್, ನಟ
ಕಾಯಕಯೋಗಿ ಶತಾಯುಷಿ, ನಮ್ಮ ನಡುವಿನ ದೇವರು ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಕ್ತಿಪೂರ್ವಕ ಶ್ರದ್ಧಾಂಜಲಿ. ಮತ್ತೆ ಇದೇ ನಮ್ಮಪುಣ್ಯ ಭೂಮಿಯಲ್ಲಿ ಹುಟ್ಟಿ ಬನ್ನಿ..
-ಉಪೇಂದ್ರ, ನಟ
ನಿಮ್ಮ ಆತ್ಮ ಶಿವನಲ್ಲಿ ಲೀನವಾಗಲಿ..
ನಿಮ್ಮ ಆಶೀರ್ವಾದ ಪಡೆದ ನಾವು ಧನ್ಯ..
ಓಂ ನಮಃ ಶಿವಾಯಃ..ಓಂ ಶಾಂತಿ..
-ಜಗ್ಗೇಶ್, ನಟ
ಶ್ರೀ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ.
ಓಂ ಶಾಂತಿ,ಶಾಂತಿ,ಶಾಂತಿಃ
-ಗಣೇಶ್, ನಟ
ನಮ್ಮ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಲಿಂಗೈಕ
-ಶ್ರೀಮುರಳಿ, ನಟ
ಬಯಲು ಬಯಲನೇ ಬಿತ್ತಿ
ಬಯಲು ಬಯಲನೇ ಬೆಳೆದು
ಬಯಲು ಬಯಲಾಗಿ ಬಯಯಲಾಯಿತ್ತಯ್ಯ
-ಧನಂಜಯ್, ನಟ
ತ್ರಿವಿಧ ದಾಸೋಹಿ ಶತಮಾನದ ಯುಗಪುರುಷ ಕಾಯಕಯೋಗಿ, ಶತಾಯುಷಿ, ನಮ್ಮ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಇಂದು ಇಹಲೋಕ ತ್ಯಜಿಸಿದ್ದಾರೆ,ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ. ಇಹಲೋಕ ಯಾತ್ರೆ ಮುಗಿಸಿ ದೇವಲೋಕಕ್ಕೆ ಹೊರಟ ದೇವರು.
-ಪಾರುಲ್ ಯಾದವ್, ನಟಿ
ಬದುಕಿದರೇ ಹೀಗೆ ಸಾರ್ಥಕವೆನ್ನುವಂತೆ ಬದುಕಬೇಕು, ಬದುಕಿಗೊಂದು ಅರ್ಥ ಬರುವಂತೆ. ಲಕ್ಷಾಂತರ ಮಕ್ಕಳಿಗೆ ವಿದ್ಯೆ ಅನ್ನ ನೀಡಿದ ಮಹಾನ್ ವ್ಯಕ್ತಿ ನೀವು. ಹೋಗಿ ಬನ್ನಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.
-ಸತೀಶ್, ನಟ
ಮತ್ತೆ ಹುಟ್ಟಿ ಬನ್ನಿ
-ಶರಣ್, ನಟ
ಭಕ್ತರ ಮನೆ ಮನದಲ್ಲಿ ನೆಲಸಿರುವ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ|| ಶಿವಕುಮಾರ್ ಮಹಾಸ್ವಾಮಿ ದೇವರಿಗೆ ಎಂದಿಗೂ ಸಾವಿಲ್ಲ. ಭಕ್ತಿ ಪೂರ್ವಕವಾಗಿ ನಮಿಸೋಣ.
-ಪ್ರೇಮ್, ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.