ಯಜಮಾನ ಚಿತ್ರಕ್ಕೆ ‘ಸೈಮಾ’ ಪ್ರಶಸ್ತಿಗಳ ಗೊಂಚಲು |ಈ ಯಶಸ್ಸಿಗೆ ಅಭಿಮಾನಿಗಳೇ ಕಾರಣ ಎಂದ ದರ್ಶನ್
Team Udayavani, Sep 19, 2021, 2:10 PM IST
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಿರುವ ಯಜಮಾನ ಚಿತ್ರ ‘ಸೈಮಾ 2019’ನಲ್ಲಿ ಪ್ರಶಸ್ತಿಗಳ ರಾಶಿಯನ್ನೇ ಬಾಚಿಕೊಂಡಿದೆ.
‘ಯಜಮಾನ’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಟ ದರ್ಶನ್‌ಗೆ ನೀಡಲಾಗಿದೆ. ಡಿ ಬಾಸ್ ಕಾರ್ಯಕ್ರಮಕ್ಕೆ ಗೈರಾಗಿದ್ದ ಕಾರಣ ನಿರ್ಮಾಪಕಿ ಶೈಲನಾ ನಾಗ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೆ ಸಿನಿಮಾಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ಈ ಸಿನಿಮಾ ಸಂಗೀತ ನಿರ್ದೇಶಕ ಹರಿಕೃಷ್ಣ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಯನ್ನು ‘ಯಜಮಾನ’ ಸಿನಿಮಾಕ್ಕಾಗಿ ಸಾಧುಕೋಕಿಲ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಸಿನಿಮಾ ಪ್ರಶಸ್ತಿಯು ‘ಯಜಮಾನ’ ಪಾಲಾಗಿದೆ. ನಟ ದೇವರಾಜ್‌ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯು ‘ಯಜಮಾನ’ ಸಿನಿಮಾಕ್ಕಾಗಿ ದೊರಕಿದೆ.
‘ಯಜಮಾನ’ ಚಿತ್ರದ ಅಭೂತಪೂರ್ವ ಯಶಸ್ಸು ಹಾಗೂ ಸಿಗುತ್ತಿರುವ ಮನ್ನಣೆಗೆ ನಮ್ಮ ಸೆಲೆಬ್ರಿಟಿಗಳೇ ಮುಖ್ಯ ಕಾರಣ. ನಮ್ಮ ತಂಡ ನಿಮ್ಮ ಪ್ರೀತಿ ಅಭಿಮಾನಕ್ಕೆ ಸದಾ ಚಿರಋಣಿ. #SIIMA ಆಯೋಜಕರಿಗೂ ನಮ್ಮ ತಂಡದಿಂದ ಹೃದಯಪೂರ್ವಕ ಧನ್ಯವಾದಗಳು @shylajanag @harimonium @bsuresha @siima pic.twitter.com/UMrOi7dOqD
— Darshan Thoogudeepa (@dasadarshan) September 19, 2021
ಇನ್ನು ಯಜಮಾನ ಚಿತ್ರಕ್ಕೆ ಇಷ್ಟೆಲ್ಲ ಪ್ರಶಸ್ತಿಗಳು ಹರಿದು ಬಂದಿರುವುದಕ್ಕೆ ದರ್ಶನ್ ಅವರು ಖುಷಿಗೊಂಡಿದ್ದಾರೆ. ಈ ಸಾಧನೆಗೆ ಅಭಿಮಾನಿಗಳೆ ಕಾರಣ ಎಂದು ಅವರು ಟ್ವೀಟ್ ಮಾಡಿದ್ದಾರೆ. “ಯಜಮಾನ ಚಿತ್ರದ ಅಭೂತಪೂರ್ವ ಯಶಸ್ಸು ಹಾಗೂ ಸಿಗುತ್ತಿರುವ ಮನ್ನಣೆಗೆ ನಮ್ಮ ಸೆಲೆಬ್ರಿಟಿಗಳೇ ಮುಖ್ಯ ಕಾರಣ. ನಮ್ಮ ತಂಡ ನಿಮ್ಮ ಪ್ರೀತಿ ಅಭಿಮಾನಕ್ಕೆ ಸದಾ ಚಿರಋಣಿ. SIIMA ಆಯೋಜಕರಿಗೂ ನಮ್ಮ ತಂಡದಿಂದ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ ದಚ್ಚು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.