ಮೌನ ಮುರಿದ ರಶ್ಮಿಕಾ
Team Udayavani, Sep 19, 2018, 11:54 AM IST
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿಗೆ ಗ್ರಾಸವಾದ ನಟಿ ಯಾರೆಂದರೆ ಎಲ್ಲರು ರಶ್ಮಿಕಾ ಮಂದಣ್ಣರತ್ತ ಬೆರಳು ತೋರಿಸುತ್ತಾರೆ. ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಸುದ್ದಿ ಹೊರಬಂದ ನಂತರವಂತೂ ರಶ್ಮಿಕಾ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಹೆಚ್ಚೇ ಸುದ್ದಿಯಾದರು ಎಂದರೆ ತಪ್ಪಲ್ಲ. ಅದರಲ್ಲೂ ರಶ್ಮಿಕಾ ಕನ್ನಡದ “ವ್ರತ್ರ’ ಚಿತ್ರದಿಂದ ಹೊರಬಂದ ನಂತರವಂತೂ ಟ್ರೋಲ್ ಮಾಡುವವರ ಸಂಖ್ಯೆ ಹಾಗೂ ಟ್ರೋಲ್ ರೀತಿ ಬದಲಾಗಿದ್ದು ಸುಳ್ಳಲ್ಲ.
ಇಷ್ಟು ದಿನ ಎಲ್ಲವನ್ನು ದೂರದಿಂದಲೇ ಗಮನಿಸಿಕೊಂಡಿದ್ದ ರಶ್ಮಿಕಾ ಮೊದಲ ಬಾರಿಗೆ ಟ್ವೀಟರ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಜೊತೆಗೆ ನಾನಾ ಕಥೆಗಳಿಂದ, ಟ್ರೋಲ್‌ಗಳಿಂದ ತಮಗಾಗಿರುವ ಬೇಸರದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಈ ಹಿಂದೆ ರಕ್ಷಿತ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಈಗ ರಶ್ಮಿಕಾ ಸರದಿ. ಅಷ್ಟಕ್ಕೂ ರಶ್ಮಿಕಾ ಅವರು ಏನು ಹೇಳಿದ್ದಾರೆಂಬುದನ್ನು ಅವರ ಮಾತಲ್ಲೇ ಓದಿ;
“ತುಂಬಾ ದಿನಗಳಿಂದ ನಾನು ಮೌನವಾಗಿದ್ದೆ. ಆದರೆ, ನನ್ನ ಬಗ್ಗೆ ಬರುತ್ತಿದ್ದ ಕಥೆ, ಲೇಖನ ಹಾಗೂ ಟ್ರೋಲ್‌ಗಳನ್ನೆಲ್ಲಾ ಗಮನಿಸುತ್ತಿದ್ದೆ. ನನ್ನನ್ನು ಚಿತ್ರಿಸಿದ ರೀತಿಯಿಂದ ನಾನು ತುಂಬಾನೇ ಡಿಸ್ಟರ್ಬ್ ಆಗಿದ್ದೇನೆ. ಹಾಗಂತ ನಾನಿಲ್ಲಿ ಯಾರನ್ನೂ ದೂಷಿಸುವುದಿಲ್ಲ. ಏಕೆಂದರೆ ನೀವೆಲ್ಲಾ ಇದನ್ನೇ ನಂಬಿದ್ದೀರಿ. ಆ ಬಗ್ಗೆ ನಾನು ಸ್ಪಷ್ಟನೆ ಕೊಡಲು ನಾನಿಲ್ಲಿ ಬಂದಿಲ್ಲ.
ಆದರೆ ಒಂದು ಮಾತು ಹೇಳಲಿಚ್ಛಿಸುತ್ತೇನೆ, ರಕ್ಷಿತ್‌ಗಾಗಲೀ, ನನಗಾಗಲೀ ಅಥವಾ ಚಿತ್ರರಂಗದ ಇನ್ಯಾರಿಗಾಗಲೀ ಈ ತರಹದ ಪರಿಸ್ಥಿತಿ ಬರಬಾರದು. ನಾಣ್ಯಕ್ಕೆ ಹೇಗೆ ಎರಡು ಮುಖವಿರುತ್ತೋ ಅದೇ ರೀತಿ ಪ್ರತಿ ಕಥೆಗಳಿಗೂ … ಕೊನೆಗೊಂದು ಮಾತು ಹೇಳುತ್ತೇನೆ, ನಾನು ಮುಂದೆಯೂ ಕನ್ನಡ ಸಿನಿಮಾ ಮಾಡುತ್ತೇನೆ … ನಾನಿಲ್ಲಿ ನೆಲೆ ನಿಲ್ಲಲು ಬಂದಿರೋಳು…. ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.