ಸಿಂಧಿ ಹುಡುಗ-ಕೂರ್ಗ್ ಬೆಡಗಿ ಢುಂ ಢುಂ ಢುಂ
Team Udayavani, Feb 7, 2017, 11:49 AM IST
ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯಗೆ ಮದುವೆ ಸಂಭ್ರಮ. ಫೆ.10 -11ರಂದು ನಿಧಿ ಮದುವೆ ವಿರಾಜಪೇಟೆಯಲ್ಲಿ ನಡೆಯಲಿದೆ. ಮುಂಬೈ ಮೂಲದ ಲವೇಶ್ ಜೊತೆ ನಿಧಿ ಮದುವೆ ನಡೆಯಲಿದ್ದು, ಸ್ಯಾಂಡಲ್‌ವುಡ್, ಬಾಲಿವುಡ್ ಮಂದಿ ಭಾಗವಹಿಸುತ್ತಿದ್ದಾರೆ. ಮದುವೆ ಮೂಡ್‌ನಲ್ಲಿರುವ ನಿಧಿ ಇಲ್ಲಿ ಪ್ರಶ್ನೆಗಳಿಗೆ ಉತ್ತರವಾಗಿದ್ದಾರೆ …
* ಮದುವೆ ಹುಡುಗಿ ಏನ್ಮಾಡ್ತಿದ್ದೀರಿ?
– ಖುಷಿಯಾಗಿದ್ದೇನೆ. ಮದುವೆ ತಯಾರಿ ನಡೆಯುತ್ತಿದೆ. ಸ್ನೇಹಿತರನ್ನು, ಸಂಬಂಧಿಕರನ್ನು ಕರೆಯೋದರಲ್ಲಿ ಬಿಝಿ. ಮದುವೆ ದಿನ ಹತ್ತಿರ ಬರುತ್ತಿರುವಂತೆ ಸಿದ್ಧತೆಗಳ ಟೆನÒನ್ ಜಾಸ್ತಿಯಾಗುತ್ತಿದೆ.
* ಮದುವೆ ಎಲ್ಲಿ ನಡೆಯುತ್ತಿದೆ?
– ಎರಡು ದಿನ ವಿರಾಜಪೇಟೆಯಲ್ಲಿ ಮದುವೆ ನಡೆಯುತ್ತಿದೆ. ಎರಡು ದಿನದಲ್ಲಿ ನಾಲ್ಕು ಕಾರ್ಯಕ್ರಮಗಳಿವೆ. ಅದರ ಪೂರ್ವತಯಾರಿಯಲ್ಲಿ ಬಿಝಿಯಾಗಿದ್ದೇವೆ.
* ಕೂರ್ಗ್ ಸಂಪ್ರದಾಯದಂತೆ ಮದುವೆ ನಡೆಯುತ್ತಾ?
– ಇಲ್ಲ, ನಾನು ಮದುವೆಯಾಗುತ್ತಿರೋದು ಸಿಂಧಿ ಹುಡುಗನನ್ನು. ಹಾಗಾಗಿ ನಾರ್ತ್ ಇಂಡಿಯನ್ ಸ್ಟೈಲ್‌ನಲ್ಲಿ ಮದುವೆ ನಡೆಯುತ್ತದೆ. ರಿಸೆಪ್ಷನ್ ಮಾತ್ರ ಕೂರ್ಗ್ ಸ್ಟೈಲ್‌ನಲ್ಲಿ ನಡೆಯಲಿದೆ.
* ಕೂರ್ಗ್‌ನಲ್ಲಿ ಮದುವೆ ಇಡಲು ಕಾರಣ?
– ಅವರಿಗೆ ಮುಂಬೈ, ಗೋವಾ ಎಲ್ಲಾ ನೋಡಿ ಬೋರಾಗಿತ್ತು. ಆದರೆ, ಕೂರ್ಗ್ ನೋಡಿರಲಿಲ್ಲ. ಕೂರ್ಗ್ ಬಗ್ಗೆ ತುಂಬಾ ಕೇಳಿದ್ದರು. ಹಾಗಾಗಿ, ಕೂರ್ಗ್‌ನಲ್ಲಿ ಮದುವೆ ಇಡಿ ಎಂದು ಅವರೇ ಹೇಳಿದರು.
* ಸಿಂಧಿ ಹುಡುಗನ ಜೊತೆಗಿನ ನಿಮ್ಮ ಲವ್‌ಸ್ಟೋರಿ ಬಗ್ಗೆ ಹೇಳಿ?
– ಲವ್ ಅನ್ನೋದಕ್ಕಿಂತ ಇದು ಲವ್ ಕಂ ಅರೆಂಜ್ ಮ್ಯಾರೇಜ್. ಕಾಮನ್ ಫ್ರೆಂಡ್ ಒಬ್ಬರ ಮೂಲಕ ಲವೇಶ್ ಪರಿಚಯವಾಯಿತು. ಅವರು ನನ್ನನ್ನು ಮುಂಚೆಯೇ ಯಾವುದೋ ಕಾರ್ಯಕ್ರಮದಲ್ಲಿ ನೋಡಿದ್ದರಂತೆ. ಆದರೆ ಅಪ್ರೋಚ್ ಮಾಡೋದು ಹೇಗೆ ಎಂದು ಆಲೋಚಿಸುತ್ತಿದ್ದರು. ಆಗ ಕಾಮನ್ ಫ್ರೆಂಡ್ ಮೂಲಕ ಪರಿಚಯವಾಗಿ ಪ್ರಫೋಸ್ ಮಾಡಿದರು. ಕೂಡಲೇ ಎರಡು ಕುಟುಂಬಗಳು ಭೇಟಿಯಾಗಿ ಮಾತುಕತೆ ನಡೆಸಿದೆವು. ಈಗ ಮದುವೆ ಹಂತಕ್ಕೆ ಬಂದಿದೆ.
* ಲವೇಶ್ ಏನ್ಮಾಡ್ತಿದ್ದಾರೆ?
– ಅವರದು ಟೆಕ್ಸ್‌ಟೈಲ್ ಬಿಝಿನೆಸ್. ಜೊತೆಗೆ ಚಿತ್ರರಂಗದಲ್ಲೂ ಆಸಕ್ತಿ ಇದೆ.
* ಮದುವೆ ನಂತರ ಆ್ಯಕ್ಟಿಂಗ್ ಮಾಡ್ತೀರಾ?
– ಖಂಡಿತಾ ಮಾಡುತ್ತೇನೆ. ಅವರದು ಯಾವುದೇ ಅಭ್ಯಂತರವಿಲ್ಲ. ನಿನಗೇನು ಇಷ್ಟವೋ ಅದನ್ನು ಮಾಡಿಕೊಂಡಿರು ಎಂದಿದ್ದಾರೆ. ಮುಂದೆ ಪ್ರೊಡಕ್ಷನ್ ಹೌಸ್ ಮಾಡುವ ಆಲೋಚನೆಯೂ ಇದೆ.
* ನಿಮ್ಮ ಬಾಲಿವುಡ್ ಜರ್ನಿ ಬಗ್ಗೆ ಹೇಳಿ?
– ಬಾಲಿವುಡ್ ಜರ್ನಿ ಚೆನ್ನಾಗಿ ನಡೆಯುತ್ತಿದೆ. ಇಲ್ಲಿವರೆಗೆ 5 ಸಿನಿಮಾಗಳಲ್ಲಿ ನಟಿಸಿದ್ದೇನೆ. ಒಂದು ಸಿನಿಮಾದಲ್ಲಿ ಐಟಂ ಸಾಂಗ್ ಮಾಡಿದ್ದು, ಅದನ್ನು ಬಾಲಿವುಡ್‌ನ ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ನೃತ್ಯ ನಿರ್ದೇಶನ ಮಾಡಿದ್ದಾರೆ. “ಶೀಲಾ ಕೀ ಜವಾನಿ’ ಸ್ಟೈಲ್‌ನಲ್ಲೇ ಮೂಡಿಬಂದಿದೆ.
* ಸ್ಯಾಂಡಲ್‌ವುಡ್‌ನಿಂದ ಹೋದ ನಟಿಯರಿಗೆ ಅವಕಾಶ ಹೇಗಿದೆ?
– ಅವಕಾಶ ಅನ್ನೋದಕ್ಕಿಂತ ನಾವು ಅಲ್ಲಿ ಮತ್ತೆ ಜೀರೋದಿಂದ ಕೆರಿಯರ್ ಆರಂಭಿಸಬೇಕಾಗುತ್ತದೆ. ಇಲ್ಲಾದರೆ ಸ್ಟಾರ್‌ಡಮ್ ಇರುತ್ತೆ, ಜನ ಗುರುತಿಸುತ್ತಾರೆ. ಆದರೆ ಅಲ್ಲಿ ಹೊಸದಾಗಿ ಮತ್ತೆ ಆಡಿಷನ್ ಕೊಟ್ಟು ಅವಕಾಶ ಪಡೆಯಬೇಕಾಗುತ್ತದೆ. “ನಾನು ಅವಾರ್ಡ್ ಪಡೆದಿದ್ದೇನೆ. ಅಲ್ಲಿ ಸ್ಟಾರ್, ನಾನ್ಯಾಕೆ ಆಡಿಷನ್ ಕೊಡಲಿ’ ಎಂದರೆ ಅಲ್ಲಿ ಅವಕಾಶ ಗಿಟ್ಟಿಸಿಕೊಳ್ಳೋದು ಕಷ್ಟ.
* ನಿಧಿ ಸುಬ್ಬಯ್ಯ ಕನ್ನಡದ ಅವಕಾಶಗಳನ್ನು ರಿಜೆಕ್ಟ್ ಮಾಡುತ್ತಿದ್ದರು ಎಂಬ ಮಾತು ಕೇಳಿಬಂದಿತ್ತು?
– ಆ ಸುದ್ದಿ ಹೇಗೆ ಹಬ್ಬಿತ್ತೋ ಗೊತ್ತಿಲ್ಲ. ನಿಜಕ್ಕೂ ಆ ಸಮಯದಲ್ಲಿ ನಾನು ಬಿಝಿ ಇದ್ದೆ. ಡೇಟ್ಸ್ ಇರಲಿಲ್ಲ ಎಂಬ ಕಾರಣಕ್ಕೆ ಮೂರು ಸಿನಿಮಾಗಳನ್ನು ಬಿಟ್ಟಿದ್ದೆ. ಆದರೆ ನಿಧಿ ಸುಬ್ಬಯ್ಯ ಕನ್ನಡ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎಂದು ಸುದ್ದಿ ಹಬ್ಬಿಸಲಾಗಿತ್ತು.
* ನಿಮ್ಮ 5ಜಿ ಚಿತ್ರ ಬಿಡುಗಡೆಗೆ ರೆಡಿಯಾಗಿದೆಯಲ್ಲ?
– ಹೌದು, ಅದನ್ನು ನನ್ನ ಮದುವೆಗೆ ಗಿಫ್ಟ್ ಎನ್ನಬಹುದು. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಹೊಸ ಬಗೆಯ ಪಾತ್ರ. ಗಾಂಧಿನಗರದ ಸಿದ್ಧಸೂತ್ರಗಳನ್ನು ಬಿಟ್ಟು ಮಾಡಿದ ಸಿನಿಮಾವದು. ಇಲ್ಲಿ ನಾನು ಪತ್ರಕರ್ತೆಯ ಪಾತ್ರ ಮಾಡಿದ್ದೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.