Aishwarya Rangarajan: ಗಾಯಕಿ ಐಶ್ವರ್ಯಾ ರಂಗರಾಜನ್ ಈಗ ನಾಯಕಿ
Team Udayavani, Oct 18, 2023, 5:31 PM IST
ಸಂಗೀತ ಲೋಕ ಮತ್ತು ಕನ್ನಡ ಕಿರುತೆರೆಯಲ್ಲಿ ಗಾಯಕಿ ಯಾಗಿ ಮತ್ತು ನಟಿಯಾಗಿ ಗುರುತಿಸಿಕೊಂಡಿದ್ದ ಐಶ್ವರ್ಯಾ ರಂಗರಾಜನ್ ಈಗ “ಮನ್ ರೇ’ ಎಂಬ ಸಿನಿಮಾದ ಮೂಲಕ ನಾಯಕ ನಟಿಯಾಗಿ ಹಿರಿತೆರೆಗೆ ಅಡಿಯಿಡುತ್ತಿದ್ದಾರೆ.
“ಮನ್ ರೇ’ ಸಿನಿಮಾದಲ್ಲಿ ಅಜಯ್ ರಾಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಅಜಯ್ ರಾಜ್‌ಗೆ ಜೋಡಿಯಾಗಲಿ ರುವ ಐಶ್ವರ್ಯಾ ರಂಗರಾಜನ್ ಸಿನಿಮಾದಲ್ಲಿ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಸದ್ದಿಲ್ಲದೆ “ಮನ್ ರೇ’ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ “ಮನ್ ರೇ’ ಸಿನಿಮಾದ ಫಸ್ಟ್‌ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. “ಮನ್ ರೇ’ ಔಟ್ ಆ್ಯಂಡ್ ಔಟ್ ಸೈಕಾಲಜಿಕಲ್ ಥ್ರಿಲ್ಲರ್ ಶೈಲಿಯ ಸಿನಿಮಾವಾಗಿದ್ದು, ಮನಸ್ಸಿನ ಎಕ್ಸ್ ರೇ ಎಂಬುದನ್ನು ಕ್ಯಾಚಿಯಾಗಿ “ಮನ್ ರೇ’ ಎಂದು ಟೈಟಲ್ ಆಗಿ ಸಿನಿಮಾಕ್ಕೆ ಇಡಲಾಗಿದೆ.
ಭ್ರಮಲೋಕದಲ್ಲಿ ಬದುಕುವ ಹುಡುಗನೊಬ್ಬನ ಜೊತೆ ವಾಸ್ತವದಲ್ಲಿರುವವರು ಏನೇನು ಸಮಸ್ಯೆ ಎದುರಿಸುತ್ತಾರೆ ಎಂಬುದರ ಸುತ್ತ “ಮನ್ ರೇ’ ಸಿನಿಮಾದ ಕಥೆ ನಡೆಯುತ್ತದೆ. ಸುಮಾರು 8-9 ವರ್ಷಗಳಿಂದ ಮನಸ್ಸಿನಲ್ಲಿದ್ದ ಕಥೆ ಈಗ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಜಾಗೃತ ಮತ್ತು ಅರೆ ಜಾಗೃತ ಮನಸ್ಸಿನ ಸುತ್ತ ಸಿನಿಮಾ ಸಾಗುತ್ತದೆ ಎಂದು “ಮನ್ ರೇ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಗುರು ಸಾವನ್ ವಿವರಣೆ ಕೊಡುತ್ತಾರೆ.
“ಭೂಮಿಕಾ ಕ್ರಿಯೇಶನ್ಸ್’ ಬ್ಯಾನರಿನಲ್ಲಿ ರಾಜಣ್ಣ, ತಿಲಕ್ ರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ “ಮನ್ ರೇ’ ಸಿನಿಮಾದಲ್ಲಿ ಅಜಯ್ ರಾಜ್, ಐಶ್ವರ್ಯಾ ರಂಗರಾಜನ್ ಅವರೊಂದಿಗೆ ಪ್ರಮೋದ್ ಶೆಟ್ಟಿ, ರಜಿನಿ, ಅಮಿತ್, ಸೂರ್ಯ ಸಿದ್ದಾರ್ಥ್, ಶಮಾ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. “ಮನ್ ರೇ’ ಸಿನಿಮಾದ ಹಾಡುಗಳಿಗೆ ಅನಿರುದ್ಧ್ ಶಾಸ್ತ್ರೀ ಸಂಗೀತ ಸಂಯೋಜಿಸುತ್ತದ್ದಾರೆ. ಚಿತ್ರಕ್ಕೆ ಆದಿ ಛಾಯಾಗ್ರಹಣವಿದೆ. ಇದೇ ನವೆಂಬರ್ ತಿಂಗಳಿನಿಂದ “ಮನ್ ರೇ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಮೂಡಿಗೆರೆ, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ “ಮನ್ ರೇ’ ಸಿನಿಮಾದ ಚಿತ್ರೀಕರಣ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.