‘ಸೇನಾಪುರ’ದಲ್ಲಿ ನಟಿಸಲಿರುವ ಸೋಜುಗಾದ ಸೂಜುಮಲ್ಲಿಗೆ ಗಾಯಕಿ ಅನನ್ಯ ಭಟ್
ನಿರ್ದೇಶಕ ಗುರು ಸವನ್ ಆ್ಯಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಈ ಹೊಸ ಸಿನಿಮಾಕ್ಕೆ ‘ಸೇನಾಪುರ’ ಎಂಬ ಹೆಸರಿಡಲಾಗಿದೆ.
Team Udayavani, Jan 2, 2021, 9:30 PM IST
ಬೆಂಗಳೂರು: ‘ಮಾದೇವ ಮಾದೇವ’ ಎನ್ನುತ್ತಾ ‘ಸೋಜುಗಾದ ಸೂಜುಮಲ್ಲಿಗೆ’ ಹಾಡನ್ನು ಹೇಳಿ ಸಂಗೀತ ಪ್ರಿಯರನ್ನು ಬೇರೊಂದು ಲೋಕಕ್ಕೆ ಕರೆದೊಯ್ದ ಗಾಯಕಿ ಅನನ್ಯ ಭಟ್ ಇದೀಗ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿ ಪ್ರಿಯರ ಮನತಣಿಸಲು ಮುಂದಾಗಿದ್ದಾರೆ. ಇದು ಅವರ ಮೂರನೇ ಸಿನಿಮಾವಾಗಿದೆ.
ನಿರ್ದೇಶಕ ಗುರು ಸವನ್ ಆ್ಯಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಈ ಹೊಸ ಸಿನಿಮಾಕ್ಕೆ ‘ಸೇನಾಪುರ’ ಎಂಬ ಹೆಸರಿಡಲಾಗಿದೆ. ಉಳ್ಳವರು ಹಾಗೂ ಶೋಷಿತರ ನಡುವಿನ ಹೋರಾಟದ ಕಥಾ ಹಂದರವನ್ನು ಒಳಗೊಂಡಿರುವ ನೈಜ ಕಥೆಯನ್ನು ಆಧರಿಸಿರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಅನನ್ಯ ಹೋರಾಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ ಹಲವಾರು ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಬಂದಿದ್ದವು. ಆದರೆ ಕಥೆಗೆ ಹಾಗೂ ಪಾತ್ರಕ್ಕೆ ಪ್ರಾಮುಖ್ಯತೆ ಇರಬೇಕು ಎಂದು ಬಯಸಿದ್ದೆ. ಆದರೆ ಈ ಸಿನಿಮಾದ ಕಥೆ ನನಗೆ ತುಂಬಾ ಹಿಡಿಸಿತು. ಕಾರಣ ಇದು ಬಡಜನರ ಮೇಲೆ ಸಿರಿವಂತರ ದಬ್ಬಾಳಿಕೆಯ ಎಳೆಯನ್ನು ಹೊಂದಿರುವ ಕಥೆ ಎಂದಿದ್ದಾರೆ.
ಇದನ್ನೂ ಓದಿ:ಕೇವಲ ದೆಹಲಿ ಮಾತ್ರವಲ್ಲ ಇಡೀ ದೇಶಾದ್ಯಂತ ಕೋವಿಡ್ 19 ಲಸಿಕೆ ಉಚಿತ: ಸಚಿವ ಹರ್ಷ್ ವರ್ಧನ್
ಹಿಂದಿನಿಂದಲೂ ರಂಗಭೂಮಿ ಕಲಾವಿದೆಯಾಗಿರುವ ನನಗೆ ಗ್ಲಾಮರ್ ಪಾತ್ರಗಳನ್ನೇ ಮಾಡಬೇಕು ಎಂಬ ಆಸೆ ಇಲ್ಲ ಎಂದಿರುವ ಅನನ್ಯ, ಬುಡಕಟ್ಟು ಚಿತ್ರಣವಿರುವ ಈ ಸಿನಿಮಾದಲ್ಲಿ ನಟಿಸಲು ನನಗೆ ತುಂಬಾ ಸಂತೋಷವಿದೆ ಎಂದಿದ್ದಾರೆ.
ಮೂಲತಃ ಕುಂದಾಪುರದವರಾಗಿರುವ ನಿರ್ದೇಶಕ ಗುರು ಸವನ್ ಅವರಿಗೆ ಇದು ಮೊದಲ ಸಿನಿಮಾ ಆಗಿದ್ದು, ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ, ನಾನು ನೂರಾರು ವರ್ಷಗಳ ಹಿಂದೆ ನಡೆದ ಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದೇನೆ. ಈ ಕಥೆಯಲ್ಲಿ ಅಂದಿನ ಮ್ಯಾಂಗನೀಸ್ ಅದಿರು ಸಾಗಾಣೆ ನಡೆಯುತ್ತಿದ್ದ ಸಮಯದಲ್ಲಿ ಬಡವರು, ಕಾರ್ಮಿಕರು ಅನುಭವಿಸಿರುವ ಸಮಸ್ಯೆಗಳು ಹಾಗೂ ಸಿರಿವಂತರ ದಬ್ಬಾಳಿಕೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.