ಒಂದೇ ಬ್ಯಾನರ್, 12 ಸಿನಿಮಾ!
Team Udayavani, Mar 10, 2021, 12:29 PM IST
ಒಂದು ಬ್ಯಾನರ್ನಲ್ಲಿ ಒಂದು ಸಿನಿಮಾ ಮಾಡಿ ಅದನ್ನು ಬಿಡುಗಡೆ ಮಾಡೋದೇ ಸವಾಲಿನ ಕೆಲಸ. ಅಂತಹದ್ದರಲ್ಲಿ ಇಲ್ಲೊಬ್ಬರು ಬರೋಬ್ಬರಿ 12 ಸಿನಿಮಾಗಳನ್ನು ತಮ್ಮ ಬ್ಯಾನರ್ನಲ್ಲಿ ನಿರ್ಮಿಸಲು ಮುಂದಾಗಿದ್ದಾರೆ. ಅಜಯ್ ಕುಮಾರ್ ಎನ್ನುವವರು ಈ “ಸಾಹಸ’ಕ್ಕೆ ಕೈ ಹಾಕಿದ್ದಾರೆ.
ಈ 12 ಸಿನಿಮಾಗಳ ಮುಹೂರ್ತ ಮಾ.19ಕ್ಕೆ ನಡೆಯಲಿದೆ. ಈ ಹನ್ನೆರಡು ಚಿತ್ರಗಳಲ್ಲಿ 7 ಕಮರ್ಷಿಯಲ್ ಚಿತ್ರಗಳಾದರೆ, ಒಂದು ಕಲಾತ್ಮಕ, ಮೂರು ಮಕ್ಕಳ ಸಿನಿಮಾ ಮತ್ತು ಒಂದು ಕೊಂಕಣಿ ಚಿತ್ರವನ್ನು ನಿರ್ಮಿಸುವ ಉದ್ದೇಶ ಚಿತ್ರತಂಡದ್ದು. ಅಂದಹಾಗೆ, ಚಿತ್ರದ ಹನ್ನೆರಡು ಕಥೆಗಳನ್ನು ಕೂಡಾ ಅಜಯ್ ಅವರೇ ಬರೆದಿದ್ದಾರಂತೆ. ಅವರ ಪ್ರತಿಭೆ ಅಷ್ಟಕ್ಕೇ ಸೀಮಿತವಾಗುವುದಿಲ್ಲ,ಮೂರು ಸಿನಿಮಾಗಳ ನಿರ್ದೇಶನದ ಜವಾಬ್ದಾರಿಯನ್ನೂ ಕೂಡಾ ಅವರು ತಮ್ಮ ಹೆಗಲಿಗೇರಿಸಿಒಂದೇ ಬ್ಯಾನರ್, 12 ಸಿನಿಮಾ! ಕೊಂಡಿದ್ದಾರೆ.
ಇದನ್ನೂ ಓದಿ : ಬೆಚ್ಚಿ ಬೀಳಿಸಿದ ಕೃಷ್ಣ ಟಾಕೀಸ್
ಉಳಿದಂತೆ ಹೊಸ ನಿರ್ದೇಶಕರುಗಳಿಗೆ ಅವಕಾಶ ನೀಡಲಿದ್ದಾರಂತೆ. ಚಿತ್ರಕ್ಕಾಗಿ ಈಗಾಗಲೇ ಆಡಿಷನ್ ನಡೆಸಿದ್ದು, ಸುಮಾರು 220 ಕಲಾವಿದರನ್ನು ಆಯ್ಕೆ ಮಾಡಿಯೂ ಆಗಿದೆಯಂತೆ. ಚಿತ್ರದ ಟೈಟಲ್ಗಳನ್ನು ಕೂಡಾ ಅನೌನ್ಸ್ ಮಾಡಿದ್ದಾರೆ. “ಲವ್ ಯೂ ಚಿನ್ನ, “ಆಂಡಾಯ್ಡ ಪೋನ್, “ಮಂದಾರ’, “ರಕ್ತಾಕ್ಷಿ’, “ದೇವರ ಮಕ್ಕಳು’, ಪ್ರೇಮಂ ಶರಣಂ ಗಚ್ಛಾಮಿ’, “ಡ್ರಗ್ ಪೆಡ್ಲರ್, “ಲಾಕ್ಡೌನ್ ವ್ಯಾಕ್ಸಿನ್’, “ಠಕ್ಕ’, “ಸಂಧ್ಯಾರಾಗ’, ಶ್ರೀರಾಮ ಸಿದ್ಧಿ’ ಎಂದು ಈ ಚಿತ್ರಗಳಿಗೆ ಹೆಸರಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.