ಸಿರಿ ಲಂಬೋದರ ವಿವಾಹದಲ್ಲಿ ಕಾಮಿಡಿ ಕಿಕ್
Team Udayavani, Feb 17, 2023, 2:47 PM IST
ಸೌರಭ್ ಕುಲಕರ್ಣಿ ನಿರ್ದೇಶನದ “ಸಿರಿ ಲಂಬೋದರ ವಿವಾಹ’ ಚಿತ್ರ ಇಂದು ತೆರೆಕಾಣುತ್ತಿದೆ. ಸೌರಭ್ ಈ ಹಿಂದೆ ಒಂದಿಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ್ದು, ಈಗ ಇದೇ ಮೊದಲ ಬಾರಿಗೆ “ಎಸ್‌ಎಲ್‌ವಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಇಂದು ತೆರೆಗೆ ಬರುತ್ತಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, “ಎಸ್.ಎಲ್.ವಿ’ ಎಂದರೆ “ಸಿರಿ ಲಂಬೋದರ ವಿವಾಹ’ ಎಂದರ್ಥ. ಹಾಗೆಂದಾಕ್ಷಣ, ಅದು ನಾಯಕ-ನಾಯಕಿಯ ಹೆಸರು ಎಂದೆನಿಸಬಹುದು. ಇಲ್ಲಿ ಸಿರಿ, ಲಂಬೋದರ ಎಂಬುದು ನಾಯಕ-ನಾಯಕಿಯ ಹೆಸರಲ್ಲ. ಇಬ್ಬರು ರಾಜಕಾರಣಿಗಳ ಮಕ್ಕಳು. ವೆಡ್ಡಿಂಗ್ ಪ್ಲಾನರ್ ಗಳಾಗಿರುವ ನಾಯಕ-ನಾಯಕಿ, ಸಿರಿ ಮತ್ತು ಲಂಬೋದರರ ಮದುವೆ ಮಾಡಿಸುವುದಕ್ಕೆ ಮುಂದಾಗುತ್ತಾರೆ. ಈ ಜರ್ನಿಯಲ್ಲಿ ನಡೆಯುವ ಒಂದಿಷ್ಟು ರೋಚಕ, ಹಾಸ್ಯಮಯ ಮತ್ತು ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಹೈಲೈಟ್’ ಎನ್ನುತ್ತಾರೆ ಸೌರಭ್.
ಚಿತ್ರವನ್ನು ಸೌರಭ್ ಮತ್ತು ತಂಡ ಈಗಾಗಲೇ ದುಬೈ, ಅಬುಧಾಬಿ, ಮಸ್ಕತ್ ಮತ್ತು ಸೊಹಾರ್ನಲ್ಲಿ ಪ್ರದರ್ಶಿಸಿ ಬಂದಿದ್ದಾರೆ. ಅಲ್ಲಿ ಚಿತ್ರದ ಬಗ್ಗೆ ಎಲ್ಲರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದವಂತೆ. “ಮೊದಲು ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಭಯವಿತ್ತು. ಸಣ್ಣ ಮಕ್ಕಳಿಂದ ಹಿರಿಯರವರೆಗೆ ಎಲ್ಲ ವಯಸ್ಸಿನವರೂ ಸಿನಿಮಾ ನೋಡಿ ಮೆಚ್ಚಿಕೊಂಡರು. ಅದನ್ನು ನೋಡಿದ ಮೇಲೆ ಭಯ ಕಡಿಮೆ ಆಯ್ತು. ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರ. ಇದರಲ್ಲಿ ಕಾಮಿಡಿ, ಸಸ್ಪೆನ್ಸ್, ಹಾಡು, ಡ್ಯಾನ್ಸ್ ಎಲ್ಲವೂ ಇದೆ. ಚಿತ್ರ ನೋಡಿದವರೆಲ್ಲ ಇದೊಂದು ಪೈಸಾ ವಸೂಲ್ ಚಿತ್ರ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲೂ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.
ಚಿತ್ರದಲ್ಲಿ ಅಂಜನ್ ಭಾರದ್ವಾಜ್, ದಿಶಾ ರಮೇಶ್, ರಾಜೇಶ್ ನಟರಂಗ, ಸುಂದರ್ ವೀಣಾ, ಪಿ.ಡಿ. ಸತೀಶ್ ಚಂದ್ರ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.