ಕೂತು ಕನ್ನಡ ಸಿನಿಮಾ ನೋಡಿ, ಅವುಗಳ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಿ
ಕನ್ನಡ ಸಿನಿಮಾಕ್ಕೆ ಬೈಯ್ಯೋರಿಗೆ ಬೆಂಡೆತ್ತಿದ ದರ್ಶನ್
Team Udayavani, Feb 5, 2020, 7:04 AM IST
“ಬೇರೆ ಭಾಷೆ ಸಿನಿಮಾಗಳನ್ನ ನೋಡಿರ್ತಾರೆ, ನಮ್ಮ ಸಿನಿಮಾಗಳನ್ನು ನೋಡಲ್ಲ. ಎದುರಿಗೆ ಸಿಕ್ಕಾಗ “ಏನ್ ದರ್ಶನ್ ನಮ್ಮ ಕನ್ನಡದಲ್ಲಿ ಇಂತಹ ಸಿನಿಮಾಗಳು ಬರಲ್ಲ’ ಅಂತಾರೆ. ಸ್ವಲ್ಪ ಕೂತು ಇಂತಹ ಸಿನಿಮಾ ನೋಡ್ರಯ್ಯಾ. ಅವಾಗ ಗೊತ್ತಾಗುತ್ತೆ. ಏನ್ ಸಿನಿಮಾ ಅಂಥ’ – ಹೀಗೆ ಸದ್ಯ ಬರುತ್ತಿರುವ ಕನ್ನಡ ಚಿತ್ರಗಳನ್ನು ನೋಡದೆಯೇ ಅದರ ಬಗ್ಗೆ ಮಾತನಾಡುವವರ ಬಗ್ಗೆ ಮಾತಿನಲ್ಲೇ ಚಾಟಿ ಬೀಸಿದವರು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಹೌದು, ಇದೇ ಶುಕ್ರವಾರ ಪ್ರಜ್ವಲ್ ದೇವರಾಜ್ ಅಭಿನಯದ “ಜಂಟಲ್ ಮೆನ್’ ಚಿತ್ರ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ನಡೆದ “ಜಂಟಲ್ ಮೆನ್’ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದರ್ಶನ್, ವೇದಿಕೆ ಮೇಲೆ ಮಾತನಾಡುತ್ತ ಕನ್ನಡ ಚಿತ್ರರಂಗದ ಬಗ್ಗೆ, ಇತ್ತೀಚೆಗೆ ಬರುತ್ತಿರುವ ಕನ್ನಡ ಚಿತ್ರಗಳ ಬಗ್ಗೆ ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹೊರಹಾಕಿದರು.
ಮೊದಲಿಗೆ ಸಂಚಾರಿ ವಿಜಯ್ ಅವರ ಬಗ್ಗೆ ಪ್ರಸ್ತಾಪಿಸುತ್ತ ಮಾತು ಶುರು ಮಾಡಿದ ದರ್ಶನ್, “ದಯವಿಟ್ಟು ಕನ್ನಡಿಗರು ಸ್ವಲ್ಪ ಎದ್ದೇಳಿ ಎಂದು ಕೇಳಿಕೊಳ್ಳುತ್ತೇನೆ. ಸಂಚಾರಿ ವಿಜಯ್ ಅವರು ಬಹಳ ದೊಡ್ಡ ನಟರು. “ನಾನು ಅವನಲ್ಲ ಅವಳು’ ಸಿನಿಮಾ ನೋಡಿದೆ, ಅವರ ಮೇಲೆ ಫಿದಾ ಆಗ್ಬಿಟ್ಟೆ. ಒಳ್ಳೆಯ ಪ್ರಯತ್ನ ಇತ್ತು. ಅದೇ ಬೇರೆ ಭಾಷೆಯಲ್ಲಿ ಆಗಿದ್ರೆ ಚಪ್ಪಾಳೆ ಹೊಡೆದು, ದುಡ್ಡು ಕೊಟ್ಟು ಕಳುಹಿಸುತ್ತಿದ್ವಿ. ಇದು ನಿಜವಾಗಲು ಅಸಹ್ಯ ಅನಿಸುತ್ತೆ.
ನಾವು ಕನ್ನಡಿಗರು ಎಂದು ಹೇಳಲು ಹೆಮ್ಮೆ ಆಗುತ್ತೆ. ಆದರೆ, ಈ ಕಡೆ ಆ ಕಡೆ ನೋಡ್ಕೊಂಡು ನಮ್ಮವರನ್ನು ಬಿಟ್ಟು ಬಿಡ್ತೀವಿ’ ಎಂದು ಬೇಸರದ ಮಾತನ್ನಾಡಿದರು. “ಒಬ್ಬ ತಂತ್ರಜ್ಞ ಒಂದು ಸಿನಿಮಾ ನಿರ್ಮಾಣ ಮಾಡ್ತಾರೆ ಅಂದ್ರೆ ನಿಜಕ್ಕೂ ಗ್ರೇಟ್. ಒಬ್ಬ ನಿರ್ದೇಶಕ ಆಗಿದ್ದವರು ನಿರ್ಮಾಪಕರಾಗಿ ಬೇರೆ ತಂತ್ರಜ್ಞರ ಜೊತೆ ಸಿನಿಮಾ ಮಾಡುವುದು ಉತ್ತಮ ಬೆಳವಣಿಗೆ. ಯಾಕಂದ್ರೆ ನಾನು ಒಬ್ಬ ತಂತ್ರಜ್ಞ.
ಕನ್ನಡಿಗರು ಇಂತಹ ಸಿನಿಮಾಗಳನ್ನ ಬೆಂಬಲಿಸಿ’ ಎಂದು ಮನವಿ ಮಾಡಿದರು. ಒಟ್ಟಾರೆ ದರ್ಶನ್ ಆಡಿರುವ ಈ ಮಾತುಗಳ ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಶೇರ್ ಆಗುತ್ತಿದ್ದು, ದರ್ಶನ್ ಮಾತುಗಳ ಬಗ್ಗೆ ಚಿತ್ರರಂಗ ಮತ್ತು ಕನ್ನಡ ಪ್ರೇಕ್ಷಕರು ಯೋಚಿಸುವಂತೆ ಮಾಡಿದೆ ಎಂದು ದರ್ಶನ್ ಅಭಿಮಾನಿಗಳು ಕಾಮೆಂಟ್ಸ್ ಮಾಡುತ್ತಿದ್ದಾರೆ.
ಅಂದಹಾಗೆ, ಪ್ರಜ್ವಲ್ ದೇವರಾಜ್ ನಟನೆಯ ‘ಜಂಟಲ್ ಮೆನ್’ ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗುತ್ತಿದೆ. “ಜಂಟಲ್ ಮೆನ್’ ಚಿತ್ರದಲ್ಲಿ ನಟ ಸಂಚಾರಿ ವಿಜಯ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಮೊದಲಿನಿಂದಲೂ ಜೊತೆಯಾಗಿ ನಿಂತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಆಡಿಯೋ ಬಿಡುಗಡೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ರಂಗು ತುಂಬಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Crime: ಕತ್ತು ಬಿಗಿದು ಇಬ್ಬರು ಮಕ್ಕಳನ್ನು ಕೊಂದ ಅಮ್ಮ!
IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.