ಈ ವಾರ ಆರು ಚಿತ್ರಗಳು ತೆರೆಗೆ: ಗಟ್ಟಿ ನಿಲ್ಲೋರ್ಯಾರು?
Team Udayavani, Feb 18, 2020, 7:00 AM IST
ಕನ್ನಡ ಚಿತ್ರರಂಗದಲ್ಲೀಗ ಸಿನಿಮಾ ಬಿಡುಗಡೆಯ ಪರ್ವ ಎನ್ನಬಹುದು. ಹೌದು, ಕಳೆದ ಮೂರು ವಾರಗಳಿಂದಲೂ ಸೂಕ್ಷ್ಮವಾಗಿ ಗಮನಿಸಿದರೆ, ಒಂಬತ್ತು, ಹತ್ತು, ಹನ್ನೊಂದು ಚಿತ್ರಗಳು ಬಿಡುಗಡೆಯಾಗುವ ಮೂಲಕ ದಾಖಲೆ ಬರೆದಿವೆ. ಈ ಪೈಕಿ ಒಳ್ಳೆಯ ಕಂಟೆಂಟ್ ಸಿನಿಮಾಗಳೂ ಬಂದಿವೆ. ಆದರೆ, ಚಿತ್ರಮಂದಿರ ಉಳಿಸಿಕೊಳ್ಳೋಕೆ ಹೊಸಬರು ಪರದಾಡುತ್ತಿರುವುದಂತೂ ನಿಜ. ಆದರೆ, ಈ ವಾರವೂ ಕೂಡ ಆರು ಚಿತ್ರಗಳು ಬಿಡುಗಡೆಯಾಗುತ್ತಿವೆ.
ಹೌದು, ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ, ಚಿತ್ರಮಂದಿರಗಳಿಲ್ಲದೆ ಹೊಸಬರು ಪರದಾಡುತ್ತಿರುವ ವಿಷಯ ಗೊತ್ತಿದ್ದರೂ, ಈ ವಾರವೂ ಸಹ ಆರು ಚಿತ್ರಗಳು ಬಿಡುಗಡೆಯಾಗಲಿವೆ ಎನ್ನಲಾಗುತ್ತಿದೆ. ಅಂದಹಾಗೆ, “ದುನಿಯಾ’ ಸೂರಿ ನಿರ್ದೇಶನದ “ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಬಿಡುಗಡೆಯಾಗುತ್ತಿದೆ. ಧನಂಜಯ್ ಇಲ್ಲಿ ವಿಶೇಷ ಆಕರ್ಷಣೆ.
ಇನ್ನು, ರಮೇಶ್ ಅರವಿಂದ್ ಅಭಿನಯದ ಆಕಾಶ್ ಶ್ರೀವಾತ್ಸವ್ ನಿರ್ದೇಶನದ “ಶಿವಾಜಿ ಸೂರತ್ಕಲ್’ ಕೂಡ ಬಿಡುಗಡೆ ಆಗುತ್ತಿದೆ. ಉಳಿದಂತೆ ತುಂಬಾ ದಿನಗಳಿಂದಲೂ ಸದ್ದು ಮಾಡದೇ ಇದ್ದ “ಆದ್ಯ’ ಕೂಡ ದಿಢೀರನೆ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ ಚಿರಂಜೀವಿ ಸರ್ಜಾ ಹೀರೋ. ಇನ್ನು ಇವುಗಳ ಜೊತೆ ಮಯೂರಿ ಅಭಿನಯದ “ಮೌನಂ’ ಹಾಗು “ಜ್ಞಾನಗಂಗೆ’ ಚಿತ್ರವೂ ಸೇರಿದೆ. “ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಎಂಬ ಚಿತ್ರ ಕೂಡ ಬಿಡುಗಡೆ ಆಗುತ್ತಿದೆ.
ಅಂದಹಾಗೆ, ಇವುಗಳು ಸದ್ಯಕ್ಕೆ ಬಿಡುಗಡೆ ಆಗಲಿವೆ ಎಂಬ ಸುದ್ದಿ ಪಕ್ಕಾ. ಆದರೆ, ಇನ್ನೆರೆಡು ದಿನಗಳಲ್ಲಿ ಬಿಡುಗಡೆ ಸಿನಿಮಾಗಳ ಸಂಖ್ಯೆ ಹೆಚ್ಚಲೂಬಹುದು. ಅಥವಾ ಹೀಗಿರುವ ಸಿನಿಮಾಗಳ ಸಂಖ್ಯೆ ಕಡಿಮೆಯಾಗಲೂಬಹುದು. ಸದ್ಯಕ್ಕೆ ಆರು ಸಿನಿಮಾ ಬರುತ್ತಿವೆ. ಈ ಪೈಕಿ ಗಟ್ಟಿಯಾಗಿ ನಿಲ್ಲೋರ್ಯಾರು ಎಂಬುದನ್ನು ಕಾದು ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.