ನಗ್ರಪ್ಪೋ ನಗ್ರಿ!
Team Udayavani, Feb 9, 2017, 11:17 AM IST
“ಮಂಜ ಎನ್ನುವ ಹೆಸರು ನನ್ನ ಉಸಿರಿನಲ್ಲೇ ಬೆರತಿದೆ …’ ಹಾಗಂತ ಬಲವಾಗಿ ನಂಬಿದ್ದಾರೆ ಜಗ್ಗೇಶ್. ಇಂಥದ್ದೊಂದು ಮಾತು ಬರುವುದಕ್ಕೂ ಕಾರಣವಿದೆ. ಇದಕ್ಕೂ ಮುನ್ನ ಜಗ್ಗೇಶ್, “ಎದ್ದೇಳು ಮಂಜುನಾಥ’ ಮತ್ತು “ಮಂಜುನಾಥ ಬಿ.ಎ, ಎಲ್.ಎಲ್.ಬಿ’ ಚಿತ್ರಗಳಲ್ಲಿ ನಟಿಸಿದ್ದರು. ಈಗ ಅವರು ಮೂರನೆಯ ಬಾರಿಗೆ ಮಂಜನ ಅವತಾರವನ್ನು ಎತ್ತಿದ್ದಾರೆ. ಈ ಚಿತ್ರಕ್ಕೂ ಮತ್ತು ಆ ಎರಡು ಚಿತ್ರಗಳಿಗೂ ಯಾವುದೇ ಸಂಬಂಧ ಇಲ್ಲ.
“ಎದ್ದೇಳು ಮಂಜುನಾಥ’ ಚಿತ್ರದಲ್ಲಿ ಪರಮ ಸೋಮಾರಿಯಾಗಿ ಮತ್ತು “ಮಂಜುನಾಥ ಬಿ.ಎ, ಎಲ್.ಎಲ್.ಬಿ’ಯಲ್ಲಿ ಲಾಯರ್ ಆಗಿ ಕಾಣಿಸಿಕೊಂಡು ಹೋಗಿದ್ದ ಜಗ್ಗೇಶ್, ಈಗ “ಮೇಲುಕೋಟೆ ಮಂಜ’ ಚಿತ್ರದಲ್ಲಿ ಎಲ್ಲರನ್ನೂ ಯಾಮಾರಿಸುವ ಮತ್ತು ಸಾಲ ಮಾಡುವುದಕ್ಕೆ ನೂರೆಂಟು ಸುಳ್ಳುಗಳನ್ನು ಹೇಳುವ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ನಾಳೆ (ಫೆಬ್ರವರಿ 10) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಜಗ್ಗೇಶ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಆರು ತಿಂಗಳುಗಳೇ ಕಳೆದಿವೆ. ಜಗ್ಗೇಶ್ ಅವರ ಕಾಮಿಡಿ ಮತ್ತು ಮ್ಯಾನರಿಸಂಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೆ ಖುಷಿಯಾಗುವ ಸಂದರ್ಭ ಬಂದೊದಗಿದೆ. ಏಕೆಂದರೆ, ಜಗ್ಗೇಶ್ ಅವರ ಹೊಸ ಚಿತ್ರ “ಮೇಲುಕೋಟೆ ಮಂಜ’, ನಾಳೆ ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಜಗ್ಗೇಶ್ ಮತ್ತೂಮ್ಮೆ ಮಂಜ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಹಾಗಂತ ಇದು “ಎದ್ದೇಳು ಮಂಜುನಾಥ’ದ ಸೋಮಾರಿ ಅಥವಾ “ಮಂಜುನಾಥ ಬಿ.ಎ, ಎಲ್.ಎಲ್.ಬಿ’ಯ ಲಾಯರ್ ಪಾತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಇಲ್ಲಿ ಜಗ್ಗೇಶ್ ಸಾಲ ಮಾಡುವ ಮತ್ತು ಆ ಸಾಲ ಮಾಡುವುದಕ್ಕೆ ನೂರೆಂಟು ಸುಳ್ಳುಗಳನ್ನು ಹೇಳುವ ಮತ್ತು ಸಾಲ ಕೊಡುವ ಸಂದರ್ಭದಲ್ಲಿ ನೂರೆಂಟು ಕಾರಣಗಳನ್ನು ಕೊಟ್ಟು ತಪ್ಪಿಸಿಕೊಳ್ಳುವ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇಂಥವನೊಬ್ಬನ ತಂದೆ-ತಾಯಿ ಅದೆಷ್ಟೆಲ್ಲಾ ನೊಂದುಕೊಳ್ಳುತ್ತಾರೆ, ಮಂಜ ಹೇಗೆ ಪಾಠ ಕಲಿತು ಸರಿದಾರಿಯಲ್ಲಿ ನಡೆಯುತ್ತಾನೆ ಎನ್ನುವುದು ಚಿತ್ರದ ಕಥೆ. ಜಗ್ಗೇಶ್ ಜೊತೆಗೆ ಐಂದ್ರಿತಾ ರೇ ಮತ್ತು ರಂಗಾಯಣ ರಘು ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ಜಗ್ಗೇಶ್ ಮತ್ತೆ ನಿರ್ದೇಶಕರಾಗಿರುವುದು. ಈ ಹಿಂದೆ ತಮ್ಮ ಮಗನ “ಗುರು’ ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದ ಜಗ್ಗೇಶ್, ಈಗ ಮತ್ತೆ ನಿರ್ದೇಶಕರಾಗಿದ್ದಾರೆ.
ಯಾಕೆ ನಿರ್ದೇಶನ ಎಂದರೆ ಅದಕ್ಕೂ ಒಂದು ಕಾರಣವಿದೆ ಮತ್ತು ಆ ಕಾರಣವನ್ನು ಜಗ್ಗೇಶ್ ಹೀಗೆ ವಿವರಿಸುತ್ತಾರೆ. “ನಾನು ಅಭಿನಯಿಸಿರುವ 140 ಚಿತ್ರಗಳಲ್ಲಿ ಅನೇಕ ಚಿತ್ರಗಳಿಗೆ ನಾನು ಘೋಸ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೀನಿ. ಆದರೆ, ಈ ವಿಷಯವನ್ನು ನಾನು ಎಲ್ಲೂ ಹೇಳಿಕೊಂಡಿರಲಿಲ್ಲ. ನನ್ನ ಹತ್ತಿರ ಚಿತ್ರತಂಡದವರು ಸೀನ್ ಮತ್ತು ಸಂಭಾಷಣೆಗಳನ್ನ ಬರೆಸಿಕೊಳ್ಳೋರು. ಕೊನೆಗೆ ಜನರಿಂದ ಚಪ್ಪಾಳೆ ಪಡೆದು ಮೆರೆಯೋರು.
ಆದರೆ, ನಾನು ಮಾತ್ರ ಆ ಕೆಲಸಕ್ಕೆ ಕ್ರೆಡಿಟ್ ಪಡೆಯುತ್ತಿರಲಿಲ್ಲ. ಈಗ ಮಾತ್ರ ಸ್ವಲ್ಪ ಬದಲಾಗಿದ್ದೇನೆ. ನನ್ನ ಕೆಲಸ ನಂದು, ನಿನ್ನ ಕೆಲಸ ನಿಂದು ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಬೇರೆ ಯಾರಿಗೋ ಸಹಾಯ ಮಾಡುವ ಬದಲು, ನನ್ನ ಚಿತ್ರವನ್ನು ನಾನೇ ಏಕೆ ನಿರ್ದೇಶಿಸಬಾರದು ಎಂಬ ಕಾರಣಕ್ಕೆ, ಈ ಚಿತ್ರಕ್ಕೆ ನಾನೇ ಆ್ಯಕ್ಷನ್, ಕಟ್ ಹೇಳಿದ್ದೇನೆ’ ಎನ್ನುತ್ತಾರೆ ಅವರು.
ಈ ಚಿತ್ರದ ಮೂಲಕ ಜಗ್ಗೇಶ್ ಗೀತರಚನೆಕಾರರೂ ಆಗಿದ್ದಾರೆ. “ಕಣ್ಮುಚ್ಚಿ ನಡೆದಾಗ ಯಾಕಿಂಗೆ ಹೇಳು ಬಾ …’ ಎಂಬ ಹಾಡೊಂದನ್ನು ಅವರು ಬರೆದಿದ್ದಾರೆ. ಕಾರ್ತಿಕ್ ಮತ್ತು ಅನುರಾಧಾ ಭಟ್ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಜಯಂತ್ ಕಾಯ್ಕಿಣಿ ಅವರಿಂದ ಸ್ಫೂರ್ತಿ ಪಡೆದು ಈ ಡ್ಯುಯೆಟ್ ಹಾಡನ್ನು ಬರೆದಿದ್ದಾರೆ ಜಗ್ಗೇಶ್. ಇದಲ್ಲದೆ ಯೋಗರಾಜ್ ಭಟ್ ಮುಂತಾದವರು ಸಹ ಹಾಡುಗಳನ್ನು ಬರೆದಿದ್ದಾರೆ.
ಇನ್ನು ಚಿತ್ರಕ್ಕೆ ಪುನೀತ್ ರಾಜಕುಮಾರ್, ಟಿಪ್ಪು, ನಕುಲ್ ಅಭಯಂಕರ್, “ಜೋಗಿ’ ಸುನೀತ ಮುಂತಾದವರು ಹಾಡುಗಳನ್ನು ಹಾಡಿದ್ದಾರೆ. ಇನ್ನು ಈ ಹಾಡುಗಳಿಗೆ ರಾಗ ಸಂಯೋಜಿಸಿರುವುದು ಗಿರಿಧರ್ ದಿವಾನ್. “ಮೇಲುಕೋಟೆ ಮಂಜ’ ಚಿತ್ರದಲ್ಲಿ ಬ್ಯಾಂಕ್ ಜನಾರ್ಧನ್, ಶ್ರೀನಿವಾಸಪ್ರಭು, ಕಿಲ್ಲರ್ ವೆಂಕಟೇಶ್, ಅರಸೀಕೆರೆ ರಾಜು, ಶ್ರೀನಿವಾಸ್ ಗೌಡ, ಕುರಿ ಪ್ರತಾಪ್, ಮಿಮಿಕ್ರಿ ದಯಾನಂದ್ ಸೇರಿದಂತೆ ಹಲವು ಅಭಿನಯಿಸಿದ್ದಾರೆ. ಚಿತ್ರಕ್ಕೆ ದಾಸರಿ ಸೀನು ಅವರ ಛಾಯಾಗ್ರಹಣ ಮತ್ತು ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.