ಬೀರಬಲ್‌ನ ಮೊಗದಲ್ಲಿ ನಗು
Team Udayavani, Jan 12, 2019, 6:14 AM IST
ಇತ್ತೀಚೆಗೆ ಬಿಡುಗಡೆಯಾದ ಒಂದಷ್ಟು ಸಿನಿಮಾಗಳ ಟ್ರೇಲರ್‌ಗಳು ಹೊಸ ಬಗೆಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದವು. ಹಾಗೆ ಗಮನ ಸೆಳೆದ ಟ್ರೇಲರ್‌ಗಳಲ್ಲಿ “ಬೀರಬಲ್’ ಚಿತ್ರ ಕೂಡಾ ಒಂದು. “ಬೀರಬಲ್’ ಸಿನಿಮಾದ ಟ್ರೇಲರ್ ನೋಡಿದವರು, ಇದೊಂದು ಹೊಸ ಬಗೆಯ ಸಿನಿಮಾವಾಗುವ ಲಕ್ಷಣವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇದೇ ಜ.18 ರಂದು ಬಿಡುಗಡೆಯಾಗುತ್ತಿದೆ. ಚಿತ್ರ ನೋಡಿರುವ ಸೆನ್ಸಾರ್ ಮಂಡಳಿ ಚಿತ್ರಕ್ಕೆ “ಯು’ ಪ್ರಮಾಣ ಪತ್ರ ನೀಡಿದೆ.
ಬಿಡುಗಡೆ ಮೊದಲ ಹಂತವಾಗಿ ಚಿತ್ರದ ಟೈಟಲ್ ಸಾಂಗ್ ಇಂದು ಬಿಡುಗಡೆಯಾಗುತ್ತಿದ್ದು, ನಟ ಶ್ರೀಮುರಳಿ ಹಾಡನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಹಾಡಿನ ವಿಶೇಷವೆಂದರೆ ಇದು “8ಡಿ’ ಸಾಂಗ್. 8 ಡಿ ಸೌಂಡ್ ಸಿಸ್ಟಮ್‌ನಲ್ಲಿ ಅಳವಡಿಸಲಾಗಿದ್ದು, ಈ ಹಿಂದೆ ರಜನಿಕಾಂತ್ ಅವರ “2.0’ಗೆ ಇದೇ ತಂತ್ರಜ್ಞಾನ ಅಳವಡಿಸಲಾಗಿತ್ತು. ಈಗ ಕನ್ನಡದ “ಬೀರಬಲ್’ ಹಾಡು ಕೂಡಾ ಆ ತರಹದ ತಾಂತ್ರಿಕತೆಯೊಂದಿಗೆ ಮೂಡಿಬಂದಿದೆ. ಚಿತ್ರತಂಡ ಹೇಳುವಂತೆ ಇದು ಕನ್ನಡದ ಮೊದಲ “8ಡಿ’ ಸಾಂಗ್.
ಅಂದಹಾಗೆ, ಚಿತ್ರತಂಡ ಖುಷಿಯಾಗಿರಲು ಮತ್ತೂಂದು ಕಾರಣ ರೀಮೇಕ್‌ಗೆ ಬಂದಿರುವ ಬೇಡಿಕೆ. ಹೌದು, ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿರುವಂತೆ ಚಿತ್ರದ ರೀಮೇಕ್‌ಗೂ ಬೇಡಿಕೆ ಬಂದಿದೆ. ಚಿತ್ರತಂಡ ಹೇಳುವಂತೆ ಈಗಾಗಲೇ ಹಿಂದಿ ಹಾಗೂ ತಮಿಳಿನಿಂದ ರೀಮೇಕ್‌ಗೆ ಬೇಡಿಕೆ ಬಂದಿದ್ದು, ಆ ಕುರಿತು ಮಾತುಕತೆ ನಡೆಯುತ್ತಿದೆಯಂತೆ. ಚಿತ್ರದಲ್ಲಿ ಶ್ರೀನಿ, ರುಕ್ಮಿಣಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ನಟಿ ಕವಿತಾ “ಬೀರಬಲ್’ದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಸದ್ಯ ಕವಿತಾ “ಬಿಗ್‌ಬಾಸ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ.
“ಚಮಕ್’, “ಅಯೋಗ್ಯ’ ಚಿತ್ರಗಳನ್ನು ನಿರ್ಮಿಸಿರುವ ಟಿ.ಆರ್.ಚಂದ್ರಶೇಖರ್ “ಬೀರಬಲ್’ ಚಿತ್ರವನ್ನು ನಿರ್ಮಿಸಿದ್ದಾರೆ. “ಬೀರ್‌ಬಲ್ ಚಿತ್ರ ಮೂರು ಹಂತಗಳಲ್ಲಿ ಬರಲಿದೆ. ಈಗ ಮೊದಲ ಹಂತವಾದ “ಫೈಂಡಿಂಗ್ ವಜ್ರಮುನಿ’ ತೆರೆಗೆ ಬರಲಿದೆ. “ಫೈಂಡಿಂಗ್ ವಜ್ರಮುನಿ’ ನಂತರ “ಅವರನ್ ಬಿಟ್ ಇವರನ್ ಬಿಟ್ ಅವರ್ಯಾರು’ ಮತ್ತು “ತುರೇ ಮಣೆ’ ಬಿಡುಗಡೆಯಾಗಲಿವೆ. ನಿರ್ದೇಶಕ ಶ್ರೀನಿ, ಈ ಮೂರು ಭಾಗಗಳಲ್ಲೂ ಬೀರಬಲ್ ಎಂಬ ಲಾಯರ್‌ನ ಕಥೆಯನ್ನು ಹೇಳಲು ಹೊರಟಿದ್ದಾರೆ. ಲಾಯರ್‌ವೊಬ್ಬನ ಸಾಹಸಗಳನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಪ್ರಯತ್ನಕ್ಕೆ ಶ್ರೀನಿ ಕೈ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.