ಸ್ನೇಹರ್ಷಿ ನಗು: ಮೊದಲ ಹೆಜ್ಜೆಗೆ ಮಿಲಿಯನ್ ಹಿಟ್ಸ್
Team Udayavani, Sep 24, 2021, 4:05 PM IST
ಯುವ ಪ್ರತಿಭೆ ಕಿರಣ್ ನಾರಾಯಣ್ ನಟಿಸಿ, ನಿರ್ಮಿಸಿ, ನಿರ್ದೇಶಿಸುರುವ ಚೊಚ್ಚಲ ಸಿನಿಮಾ “ಸ್ನೇಹರ್ಷಿ’ ತೆರೆಗೆ ಬರುವ ತಯಾರಿಯಲ್ಲಿದೆ. ಸದ್ಯ ಚಿತ್ರದ ಪ್ರಮೋಶನ್ಸ್ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಚಿತ್ರದ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಚಿತ್ರದಲ್ಲಿ ಬರುವ “ಮೊದಲ ಹೆಜ್ಜೆಗೆ…’ ಎಂಬ ಹೀರೋ ಇಂಟ್ರೊಡಕ್ಷನ್ ಸಾಂಗ್ ಒಂದು ಮಿಲಿಯನ್ ಪ್ಲಸ್ ಹಿಟ್ಸ್ ದಾಖಲಾದ ಬೆನ್ನಲ್ಲೆ, ಚಿತ್ರತಂಡ “ಅರಿವಿಲ್ಲದೆ ಶುರುವಾದಂತಿದೆ…’ ಎಂಬ ಮತ್ತೂಂದು ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಿತ್ತು. ಈಗ ಆ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆ ಹಾಡು ಕೂಡ ಒಂದು ಮಿಲಿಯನ್‌ಗೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ.
ಇನ್ನು ಈ ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡುವ ಕಿರಣ್ ನಾರಾಯಣ್, “ಸಿನಿಮಾದಲ್ಲಿರುವ ಎಲ್ಲ ಹಾಡುಗಳು ಕೂಡ ಕಥೆಗೆ ಪೂರಕವಾಗುವಂತಿವೆ. ಕುದುರೆಮುಖ, ಮಂಗಳೂರು ಸುತ್ತಮುತ್ತ ಹಾಡುಗಳ ಶೂಟಿಂಗ್ ಮಾಡಲಾಗಿದೆ. ನಮ್ಮ ಹಾಡುಗಳಿಗೆ ಡಿಫರೆಂಟ್ ಲೊಕೇಶನ್ಸ್ ಬೇಕಾಗಿತ್ತು. ಅಂಥ ಲೊಕೇಶನ್ಸ್ ಹುಡುಕಿ ಹಾಡನ್ನು ಶೂಟಿಂಗ್ ಮಾಡಿದ್ದೇವೆ. ಸ್ಕ್ರೀನ್ ಮೇಲೆ ನೋಡಿದಾಗ ಫಾರಿನ್ ಲೊಕೇಶನ್ಸ್‌ನಂತೆ ಕಾಣುತ್ತದೆ. ಪ್ರತಿ ಹಾಡು ಕೂಡ ಕೇಳಲು ಎಷ್ಟು ಸುಮಧುರವಾಗಿರುತ್ತದೆಯೋ, ನೋಡಲೂ ಅಷ್ಟೇ ಸುಂದರವಾಗಿರುವಂತೆ ಚಿತ್ರೀಕರಿಸಲಾಗಿದೆ’ ಎನ್ನುತ್ತಾರೆ.
ಇದನ್ನೂ ಓದಿ:ಆರ್ ಸಿಬಿ ವಿರುದ್ಧ ಪಂದ್ಯಕ್ಕೂ ಮುನ್ನ ಧೋನಿ ಪಡೆಗೆ ಗಾಯದ ಬರೆ: ಪ್ರಮುಖ ಆಟಗಾರ ತಂಡದಿಂದ ಔಟ್?
ಆಕಾಶ್ ಅಯ್ಯಪ್ಪ ಸಿನಿಮಾಕ್ಕೆ ಸಂಗೀತ ನೀಡಿರುವ “ಸ್ನೇಹರ್ಷಿ’ ಈ ಹಾಡಿಗೆ ಸುಪ್ರಿಯಾ ರಾಮ್ ಮೊದಲಾದವರು ದನಿಯಾಗಿದ್ದಾರೆ. “ಸ್ನೇಹರ್ಷಿ’ ಚಿತ್ರಕ್ಕೆ ಪ್ರತಿಭಾ ಕಥೆ ಒದಗಿಸಿದ್ದು, ಲವ್, ಕಾಮಿಡಿ, ಆ್ಯಕ್ಷನ್ ಜೊತೆಗೆ ಸಾಮಾಜಿಕ ಕಾಳಜಿಯ ಅನೇಕ ಅಂಶಗಳಿವೆ. ಈಗಿನ ಟ್ರೆಂಡ್‌ಗೆ ತಕ್ಕಂತೆ ಸಿನಿಮಾವನ್ನು ತೆರೆಮೇಲೆ ತರಲಾಗಿದೆ ಅನ್ನೋದು ಚಿತ್ರತಂಡದ ಮಾತು.
ಚಿತ್ರದಲ್ಲಿ ಕಿರಣ್ ನಾರಾಯಣ್ ಅವರೊಂದಿಗೆ ಸುಧಾ ಬೆಳವಾಡಿ, ನಾಗತಿಹಳ್ಳಿ ಜಯಪ್ರಕಾಶ್, ಚಕ್ರವರ್ತಿ, ನವೀನ್, ದೇವಕಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.