ವಜ್ರಕಾಯ ಬೆಡಗಿ ಜೊತೆಗೆ ಸೋಡಾಬುಡ್ಡಿ ಹುಡುಗ
Team Udayavani, Feb 22, 2017, 11:24 AM IST
ನಿರ್ದೇಶಕ ಸಿಂಪಲ್ ಸುನಿಯ ಮದುವೆ ಮೊನ್ನೆ ಮೊನ್ನೆ ನಡೆದಿರುವುದು ನಿಮಗೆ ಗೊತ್ತೇ ಇದೆ. ಅರಮನೆ ಮೈದಾನದಲ್ಲಿ ಆರತಕ್ಷತೆ ಕೂಡಾ ಅದ್ಧೂರಿಯಾಗಿ ನಡೆದಿತ್ತು. ಚಿತ್ರರಂಗದ ಸಾಕಷ್ಟು ಮಂದಿ ನವದಂಪತಿಗಳಿಗೆ ಶುಭಕೋರಿದ್ದಾರೆ. ಅದರಲ್ಲಿ ಶುಭ್ರ ಅಯ್ಯಪ್ಪ ಕೂಡಾ ಒಬ್ಬರು. ಶಿವರಾಜಕುಮಾರ್ ಅವರ “ವಜ್ರಕಾಯ’ ಚಿತ್ರದ ನಾಯಕಿಯರಲ್ಲಿ ಒಬ್ಬರಾಗಿದ್ದ ಶುಭ್ರ ಅಯ್ಯಪ್ಪರನ್ನು ಸುನಿ ಆರತಕ್ಷತೆಯಲ್ಲಿ ನೋಡಿದ ಅನೇಕರು ಹುಬ್ಬೇರಿಸಿದ್ದರು.
“ಯಾರ ಕಡೆಯಿಂದ ಶುಭ್ರ ಮದುವೆಗೆ ಬಂದಿದ್ದರು’ ಎಂಬ ಲೆಕ್ಕಾಚಾರವನ್ನೂ ಹಾಕಿದ್ದರು. ಆದರೆ ಅದಕ್ಕೆ ಈಗ ಉತ್ತರ ಸಿಕ್ಕಿದೆ. ಅದು ಸುನಿ ಕಡೆಯಿಂದ. ಅದಕ್ಕೆ ಕಾರಣ ಸುನಿ ಹೊಸ ಸಿನಿಮಾ. ಹೌದು, ಸುನಿ ಈಗ ಹೊಸ ಸಿನಿಮಾವೊಂದನ್ನು ಮಾಡಲಿದ್ದಾರೆ. ಆ ಚಿತ್ರಕ್ಕೆ “ಜಾನ್ ಸೀನ’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಶುಭ್ರ ಅಯ್ಯಪ್ಪ ನಾಯಕಿಯಾಗಿ ನಟಿಸುತ್ತಿದ್ದಾರೆ. ಸ್ವತಃ ಶುಭ್ರ ಅಯ್ಯಪ್ಪ ಇದನ್ನು ಒಪ್ಪಿಕೊಂಡಿದ್ದಾರೆ.
ಅದು ಸುನಿ ಮದುವೆಯಲ್ಲಿ ಎಂದರೆ ನೀವು ನಂಬಲೇಬೇಕು. ಆರತಕ್ಷತೆಯ ಹಾಲ್‌ನಲ್ಲಿ ಶುಭಕೋರಲು ಇಟ್ಟ ಫಲಕದಲ್ಲಿ ಶುಭ್ರ ಅಯ್ಯಪ್ಪ, ಸುನಿಗೆ ಶುಭ ಕೋರುವ ಜೊತೆಗೆ ‘so excited to do ur next fi lm’ ಎಂದು ಬರೆದುಕೊಂಡಿದ್ದಾರೆ. ಅಲ್ಲಿಗೆ ಸುನಿ ಸಿನಿಮಾದಲ್ಲಿ ಶುಭ್ರ ನಟಿಸೋದು ಪಕ್ಕಾ ಆದಂತೆ. ಎಲ್ಲಾ ಓಕೆ, ಈ ಸಿನಿಮಾದಲ್ಲಿ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಉತ್ಪಲ್.
ಯಾವ ಉತ್ಪಲ್ ಎಂದರೆ “ಸೋಡಾಬುಡ್ಡಿ’ ಚಿತ್ರವನ್ನು ತೋರಿಸಬೇಕು. ಆ ಸಿನಿಮಾದಲ್ಲಿ ನಾಯಕರಾಗಿ ನಟಿಸಿರುವ ಉತ್ಪಲ್‌ಗೆ ಈಗ ಸುನಿ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ಸುನಿ ಒಂದು ವಿಭಿನ್ನ ಕಥೆ ಮೂಲಕ ಶುಭ್ರ ಹಾಗೂ ಉತ್ಪಲ್‌ರನ್ನು ತೆರೆಮೇಲೆ ತರಲಿದ್ದಾರಂತೆ. ಈಗಾಗಲೇ ಸುನಿ ನಿರ್ದೇಶನದ “ಆಪರೇಶನ್ ಅಲಮೇಲಮ್ಮ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ.
ಜೊತೆಗೆ ಗಣೇಶ್ ಜೊತೆಗೆ ಸುನಿ “ಚಮಕ್’ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಹಾಗಾದರೆ “ಜಾನ್ ಸೀನ’ ಯಾವತ್ತು ಮಾಡುತ್ತಾರೆಂಬ ಪ್ರಶ್ನೆ ಬರುತ್ತದೆ. “ಚಮಕ್’ ಆರಂಭಕ್ಕೂ ಮುನ್ನ ಸುನಿ “ಜಾನ್ ಸೀನ’ ಚಿತ್ರೀಕರಣ ಮಾಡಲಿದ್ದಾರಂತೆ. ಶಿವರಾತ್ರಿ ದಿನ ಚಿತ್ರದ ಫೋಟೋಶೂಟ್ ಮಾಡುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.