ಸಾಫ್ಟ್ ನಿರ್ದೇಶಕನ ರಗಡ್ ಚಿತ್ರ!
Team Udayavani, Oct 2, 2017, 12:11 PM IST
“ಈ ಟ್ಯಾಗ್ ನನಗೆ ಹೊಂದುತ್ತೋ ಗೊತ್ತಿಲ್ಲ. ಆದರೆ, ಆ ತರಹದ ಒಂದು ಪ್ರಯತ್ನವಂತೂ ಈ ಸಿನಿಮಾದಲ್ಲಿ ಆಗಿದೆ …‘ ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ಪ್ರೇಮ್ ಮುಖ ನೋಡಿದರು ಪ್ರಶಾಂತ್ ರಾಜ್. ಪ್ರೇಮ್ ಒಂದು ಸ್ಮೈಲ್ ಕೊಟ್ಟರು. ಪ್ರಶಾಂತ್ ರಾಜ್ ಹೀಗೆ ಹೇಳಲು ಕಾರಣ “ದಳಪತಿ’. ಇದು ಪ್ರಶಾಂತ್ ರಾಜ್ ನಿರ್ದೇಶನದ ಐದನೇ ಸಿನಿಮಾ. ಪ್ರೇಮ್ ಈ ಸಿನಿಮಾದ ನಾಯಕ. ಪ್ರಶಾಂತ್ ಇಲ್ಲಿ “ಟ್ಯಾಗ್’ ಎಂದಿದ್ದು ಕಮರ್ಷಿಯಲ್ ಡೈರೆಕ್ಟರ್ ಎಂಬುದಕ್ಕೆ. ಪ್ರಶಾಂತ್ ರಾಜ್ ಅವರ ಈ ಹಿಂದಿನ ಸಿನಿಮಾಗಳಿಗೆ ಈ ಸಿನಿಮಾಕ್ಕೂ ಸಾಕಷ್ಟು ವ್ಯತ್ಯಾಸವಿದೆಯಂತೆ.
“”ದಳಪತಿ’ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ನನಗೆ ಹೊಸ ಅನುಭವ ಕೊಟ್ಟ ಚಿತ್ರ. ಕಮರ್ಷಿಯಲ್ ಡೈರೆಕ್ಟರ್ ಎಂಬ ಟ್ಯಾಗ್ ನನಗೆ ಎಷ್ಟು ಹೊಂದುತ್ತೋ ಗೊತ್ತಿಲ್ಲ. ಆದರೆ, ಕಥೆ ಆ ತರಹದ ಒಂದು ಮೇಕಿಂಗ್ ಬಯಸಿತ್ತು. ಇದು ತುಂಬಾ ಸೀರಿಯಸ್ ಕಥೆ ಇರುವ ಸಿನಿಮಾ. ಅದನ್ನು ಅಷ್ಟೇ ಕಮರ್ಷಿಯಲ್ ಆಗಿ ತೋರಿಸಿದ್ದೇನೆ’ ಎಂದು ತಮ್ಮ “ದಳಪತಿ’ ಬಗ್ಗೆ ಹೇಳಿಕೊಂಡರು ಪ್ರಶಾಂತ್ ರಾಜ್. “ದಳಪತಿ’ ಎರಡು ವರ್ಷಗಳ ಹಿಂದೆ ಆರಂಭವಾದ ಚಿತ್ರ. ಆದರೆ, ತಡವಾಗಿದೆ.
ಅದಕ್ಕೆ ಕಾರಣ ಪ್ರಶಾಂತ್ ರಾಜ್ ಮೊದಲು “ಜೂಮ್’ ಚಿತ್ರವನ್ನು ಮುಗಿಸಿದ್ದು. “ಮೊದಲು ನಾನು “ಜೂಮ್’ ಚಿತ್ರವನ್ನು ಮುಗಿಸಬೇಕಿತ್ತು. ಹಾಗಾಗಿ, “ದಳಪತಿ’ ಸ್ವಲ್ಪ ತಡವಾಗಿದೆ. ಆದರೂ ನಾಯಕ ಪ್ರೇಮ್‌ರಿಂದ ಹಿಡಿದು ಪ್ರತಿಯೊಬ್ಬರು ಸಹಕಾರ ನೀಡಿದರು. ಜ್ವರದ ನಡುವೆಯೂ ಬಂದು ಪ್ರೇಮ್ ಫೈಟಿಂಗ್ ಸೀನ್‌ನಲ್ಲಿ ಭಾಗವಹಿಸಿದರು. ಅವರು ಈ ಸಿನಿಮಾಕ್ಕೆ ದೊಡ್ಡ ಶಕ್ತಿ. ಚಿತ್ರದಲ್ಲಿ ಅವರು ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ತಂಡದ ಬಗ್ಗೆ ಹೇಳುತ್ತಾರೆ ಪ್ರಶಾಂತ್‌ರಾಜ್.
ಅಂದಹಾಗೆ, ಪ್ರಶಾಂತ್ ರಾಜ್ ಮಾತಿಗೆ ವೇದಿಕೆಯಾಗಿದ್ದು “ದಳಪತಿ’ ಚಿತ್ರದ ಆಡಿಯೋ ಬಿಡುಗಡೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಆನಂದ್ ಆಡಿಯೋ ಮೂಲಕ ಹಾಡುಗಳು ಹೊರಬಂದಿವೆ. ನಾಯಕ ಪ್ರೇಮ್‌ಗೆ ಪ್ರಶಾಂತ್ ರಾಜ್ ಅವರ ಸಿನಿಮಾ ಪ್ರೀತಿ ಕಂಡು ಖುಷಿಯಾಯಿತಂತೆ. “ಚಿತ್ರದ ಹಾಡುಗಳನ್ನು ಸುಲಭವಾಗಿ ತೆಗೆಯಬಹುದಿತ್ತು. ಆದರೆ ಪ್ರಶಾಂತ್ ರಾಜ್ ಅವರಿಗೆ ಅವರದೇ ಆದ ಕಲ್ಪನೆ ಇತ್ತು. ಒಂದು ಲಾಂಬೋರ್ಗಿನಿ ಕಾರು ತಂದರು,
ಮತ್ತೂಂದು ದಿನ 25 ಲಕ್ಷದ ಬೈಕ್ ಸೆಟ್‌ಗೆ ಬಂತು. ಇಷ್ಟೆಲ್ಲಾ ಖರ್ಚು ಯಾಕೆ ಮಾಡ್ತೀರಿ ಎಂದು ಕೇಳಿದರೆ ಅಲ್ಲಿ ಅವರ ಕಲ್ಪನೆಯ ಚಿತ್ರ ಸಿಗುತ್ತದೆ. ನಾನು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ತುಂಬಾ ಕೂಲ್ ಆಗಿ ಖುಷಿಯಿಂದ ನಟಿಸಿ ಬಂದ ಸಿನಿಮಾವಿದು. ಅದಕ್ಕೆ ಕಾರಣ ಪ್ರಶಾಂತ್ ರಾಜ್ ಮೇಲಿನ ನಂಬಿಕೆ ಎಂದರು. ಇನ್ನು, ಪ್ರೇಮ್ ಸಿನಿಮಾ ಎಂದರೆ ಹಾಡುಗಳು ಚೆನ್ನಾಗಿರುತ್ತವೆ ಎಂಬ ಮಾತಿದ್ದು, ಅದರಂತೆ ಈ ಚಿತ್ರದ ಹಾಡುಗಳು ಕೂಡಾ ಚೆನ್ನಾಗಿ ಮೂಡಿಬಂದ ಬಗ್ಗೆ ಖುಷಿಪಟ್ಟರು ಪ್ರೇಮ್.
ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಚರಣ್ ಒಪ್ಪಿಕೊಂಡ ಮೊದಲ ಸಿನಿಮಾ ಇದಂತೆ. ಆದರೆ, ಈ ಸಿನಿಮಾ ತಡವಾಗಿರುವುದರಿಂದ ಈಗಾಗಲೇ ಅವರು ಸಂಗೀತ ನೀಡಿರುವ ಬೇರೆ ಸಿನಿಮಾಗಳು ರಿಲೀಸ್ ಆಗಿವೆ. ಹಾಡುಗಳು ಗುಣಮಟ್ಟದಲ್ಲಿರಬೇಕೆಂಬ ಕಾರಣಕ್ಕೆ ವಿದೇಶದಲ್ಲಿ ಮಾಸ್ಟರಿಂಗ್ ಮಾಡಿಸಿದ ಬಗ್ಗೆ ಹೇಳಿಕೊಂಡರು ಚರಣ್ ರಾಜ್. ಚಿತ್ರದ ನಿರ್ಮಾಪಕ ನವೀನ್ ಕೂಡಾ “ದಳಪತಿ’ಯ ಅನುಭವ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.