Somu Sound Engineer; ಸೌಂಡ್ ಮಾಡಲು ಸೋಮು ರೆಡಿ
Team Udayavani, Feb 26, 2024, 3:29 PM IST
ಕನ್ನಡ ಚಿತ್ರರಂಗಕ್ಕೆ ಬರುವ ಒಂದಷ್ಟು ಹೊಸ ನಿರ್ದೇಶಕರು ತಮ್ಮ ಸಿನಿಮಾಗಳ ಟೈಟಲ್ ಅನ್ನು ಭಿನ್ನವಾಗಿ ಇಡುವ ಮೂಲಕ ಆರಂಭದಿಂದಲೇ ಸಿನಿಮಾದ ಕುತೂಹಲಕ್ಕೆ ಕಾರಣವಾಗುತ್ತಾರೆ. ಈಗ ಅದೇ ರೀತಿ ವಿಭಿನ್ನ ಟೈಟಲ್ ಗಮನ ಸೆಳೆಯುತ್ತಿದೆ. ಅದು “ಸೋಮು ಸೌಂಡ್ ಇಂಜಿನಿಯರ್’. ಹೀಗೊಂದು ವಿಭಿನ್ನ ಟೈಟಲ್ ಸಿನಿಮಾ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮಾರ್ಚ್ 15ರಂದು ಚಿತ್ರ ತೆರೆಕಾಣುತ್ತಿದೆ.
ಅಂದಹಾಗೆ, “ಸೋಮು ಸೌಂಡ್ ಇಂಜಿನಿಯರ್’ ಚಿತ್ರದ ಮೂಲಕ ಅಭಿ ನಿರ್ದೇಶಕರಾಗುತ್ತಿದ್ದಾರೆ. ಅಂದಹಾಗೆ, ಇದು ಒಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವಾಗಿದ್ದು, ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಸಾಗುತ್ತದೆ. ಕಥೆಯಲ್ಲಿ ಸಂಬಂಧಗಳಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆಯಂತೆ.
ಈಗಾಗಲೇ ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಟೀಸರ್ ಬಿಡುಗಡೆಯಾಗಿ ಹಿಟ್‌ಲಿಸ್ಟ್ ಸೇರಿದೆ. ಈಗ ಸೋಮು ಅಂಗಳದಿಂದ ಮನಮೋಹಕ ಗೀತೆಯೊಂದು ತೇಲಿ ಬಂದಿದೆ. ಧನಂಜನ್ ರಂಜನ್ ಸಾಹಿತ್ಯದ “ಛಂದಸ್ಸಿನ ಚೆಂದದಲ್ಲಿ… ‘ಎಂಬ ಪ್ರೇಮಗೀತೆ ಬಿಡುಗಡೆಯಾಗಿದೆ.
ಸಿದ್ದಾರ್ಥ್ ಬೆಳ್ಮಣ್ಣು ಹಾಗೂ ಮೇಘನಾ ಭಟ್ ಕಂಠಸಿರಿಯಲ್ಲಿ ಹಾಡು ಮೋಹಕವಾಗಿ ಮೂಡಿ ಬಂದಿದೆ. ಚರಣ್ ರಾಜ್ಯ ಸಂಗೀತ, ಶಿವ ಸೇನಾ ಛಾಯಾ ಗ್ರಹಣ ಛಂದಸ್ಸಿನ ಚೆಂದವಳ್ಳಿ ಗೀತೆಯ ಶ್ರೀಮಂತಿಕೆ ಹೆಚ್ಚಿಸಿದೆ. ಈ ಹಾಡಿನಲ್ಲಿ ನಾಯಕ ಶ್ರೇಷ್ಠ ಹಾಗೂ ನಾಯಕಿ ನಿವಿಷ್ಕಾ ಪಾಟೀಲ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮೆಲುವಾದ ಸಾಹಿತ್ಯ, ಸಂಗೀತದ ಮಿಳಿತದೊಂದಿಗೆ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಿದೆ.
ಕ್ರಿಸ್ಟೋಫರ್ ಕಿಣಿ ಈ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ತಮ್ಮ ವಿಭಿನ್ನ ಸಂಭಾಷಣೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಸಂಭಾಷಣೆಕಾರ ಎನಿಸಿರುವ ಮಾಸ್ತಿ ಅವರು “ಸೋಮು ಸೌಂಡ್ ಇಂಜಿನಿಯರ್’ಗೆ ಡೈಲಾಗ್ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.