ಸಿಂಹನಿಗೆ ಅಳಿಯನ ಚಿತ್ರಾರ್ಪಣೆ
Team Udayavani, Jan 26, 2017, 11:28 AM IST
ಡಾ. ವಿಷ್ಣುವರ್ಧನ್ ಮತ್ತೂಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ “ನಾಗರಹಾವು’ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಅವರಿಗೆ ಡಿಜಿಟಲ್ ಹೆಡ್ ಟೆಕ್ನಾಲಜಿ ಮೂಲಕ ಜೀವ ಕೊಡಲಾಗಿತ್ತು. ಈಗ “ರಾಜ ಸಿಂಹ’ ಚಿತ್ರತಂಡದವರು ವಿಷ್ಣುವರ್ಧನ್ ಅವರಿಗೆ ಗ್ರಾಫಿಕ್ಸ್ ಮತ್ತು ಸ್ಟಾಕ್ ಶಾಟ್ ಮೂಲಕ ಜೀವ ಕೊಡುವ ಪ್ರಯತ್ನವಾಗುತ್ತಿದೆ. ಈ ಚಿತ್ರದಲ್ಲೂ ವಿಷ್ಣುವರ್ಧನ್ ಅವರು ನರಸಿಂಹೇಗೌಡರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರವು “ಸಿಂಹಾದ್ರಿಯ ಸಿಂಹ’ ಚಿತ್ರದ ಮುಂದುವರೆದ ಭಾಗವಾಗಿ ಬಿಡುಗಡೆಯಾಗಲಿದೆ.
ಚಿತ್ರದ ಇನ್ನೊಂದು ವಿಶೇಷವೆಂದರೆ, ನಾಯಕ ಅನಿರುದ್ಧ್ ಅವರು ಬಾಡಿ ಬಿಲ್ಡ್ ಮಾಡಿರುವುದು. ಈ ಚಿತ್ರದಲ್ಲಿ ಅವರು ನರಸಿಂಹೇಗೌಡರ ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರಕ್ಕೆ ಸ್ವಲ್ಪ ಜಿಮ್ ಬಾಡಿ ಬೇಕಾಗಿದ್ದ ಕಾರಣ, ಅವರು ಕಳೆದ ಎರಡು ವರ್ಷಗಳಿಂದ ತಮ್ಮ ದೇಹವನ್ನು ಕಟ್ಟುವಲ್ಲಿ ನಿರತರಾಗಿದ್ದಾರೆ. ಅದಕ್ಕಾಗಿಯೇ ಕಳೆದ ಎರಡು ವರ್ಷಗಳಿಂದ ಪ್ರತಿ ದಿನ ಎರಡು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಿದ್ದಾರೆ.
“ನಾನು ಇದುವರೆಗೂ ಹೆಚ್ಚಾಗಿ ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಿದವನು. ಇದೇ ಮೊದಲ ಬಾರಿಗೆ ನಾನು ಪಕ್ಕಾ ಆ್ಯಕ್ಷನ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ನಾಲ್ಕು ಫೈಟ್‌ಗಳಿವೆ. ಎಲ್ಲಾ ಫೈಟ್‌ಗಳನ್ನು ಡಿಫರೆಂಟ್ ಡ್ಯಾನಿ ನಿರ್ದೇಶಿಸಿದ್ದಾರೆ. ಪ್ರತಿ ಫೈಟ್‌ನಲ್ಲಿ ಸಹ ವಿಭಿನ್ನವಾದ ಸಾಹಸ. ತುಂಬಾ ರಿಸ್ಕಿ ಶಾಟ್‌ಗಳಿವೆ’ ಎನ್ನುತ್ತಾರೆ ಅನಿರುದ್ಧ್. “ರಾಜ ಸಿಂಹ’ ಚಿತ್ರದ ಶೇ 90ರಷ್ಟು ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳು ಚಿತ್ರದ ಚಿತ್ರೀಕರಣ ಪೂರ್ತಿಯಾಗಲಿದೆ.
ಈ ಚಿತ್ರದಲ್ಲಿ ಅನಿರುದ್ಧ್ ಅವರು ವಿಷ್ಣುವರ್ಧನ್ ಅವರ ಮಗನಾಗಿ ಕಾಣಿಸಿಕೊಂಡರೆ, ಭಾರತಿ ವಿಷ್ಣವರ್ಧನ್ ಅವರು ವಿಷ್ಣುವರ್ಧನ್ ಅವರ ಪತ್ನಿಯಾಗಿ ನಟಿಸಿದ್ದಾರೆ. ಸುಮಾರು 24 ವರ್ಷಗಳ ಹಿಂದೆ ವಿಷ್ಣುವರ್ಧನ್ ಮತ್ತು ಭಾರತಿ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದರಂತೆ. ಈಗ ಮತ್ತೆ ಈ ಚಿತ್ರದಲ್ಲಿ ದಂಪತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಷ್ಣುವರ್ಧನ್ ಅವರ ಭಾಗವನ್ನು “ಸಿಂಹಾದ್ರಿಯ ಸಿಂಹ’ ಚಿತ್ರದ ಸ್ಟಾಕ್‌ಶಾಕ್‌ಗಳು ಮತ್ತು ಗ್ರಾಫಿಕ್ಸ್ ಬಳಸಿಕೊಂಡು ಸೃಷ್ಠಿಸಲಾಗುತ್ತಿದೆ.
ವಿಷ್ಣುವರ್ಧನ್, ಭಾರತೀ ವಿಷ್ಣುವರ್ಧನ್ ಮತ್ತು ಅನಿರುದ್ಧ ಅಲ್ಲದೆ ನಿಖೀತಾ, ಶರತ್ ಲೋಹಿತಾಶ್ವ, ಬುಲೆಟ್ ಪ್ರಕಾಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಅಂಬರೀಶ್ ಅವರು ಒಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದು ನಿರ್ದೇಶಿಸುತ್ತಿರುವುದು ಅಭಿರಾಮ್. ಇನ್ನು ಸಿ.ಡಿ. ಬಸಪ್ಪ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಅವರ ಸಂಗೀತ ಮತ್ತು ಕೆ.ಎಂ. ವಿಷ್ಣುವರ್ಧನ ಅವರ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.