ನಟ್ವರ್‌ಲಾಲ್ಗೆ ಸೋನಾಲ್ ಮೊಂತೆರೊ ಜೋಡಿ
Team Udayavani, Aug 10, 2019, 11:18 AM IST
ಕನ್ನಡದಲ್ಲಿ ‘ಮಿಸ್ಟರ್ ನಟ್ವರ್‌ಲಾಲ್’ ಸಿನಿಮಾವೊಂದು ಶುರುವಾಗುತ್ತಿರುವ ಬಗ್ಗೆ ಈ ಹಿಂದೆ ಇದೇ ‘ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರಕ್ಕೆ ‘ಮಡಮಕ್ಕಿ’ ಮೂಲಕ ಗುರುತಿಸಿಕೊಂಡ ಯುವ ನಟ ತನುಷ್ ಹೀರೋ ಎಂಬುದನ್ನೂ ತಿಳಿಸಲಾಗಿತ್ತು. ಆಗ ಆ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿರಲಿಲ್ಲ. ಈಗ ‘ಮಿಸ್ಟರ್ ನಟ್ವರ್‌ಲಾಲ್’ಗೆ ಜೋಡಿಯಾಗಿ ಸೋನಾಲ್ ಮೊಂತೆರೊ ಪಕ್ಕಾ ಆಗಿದ್ದಾರೆ. ‘ಪಂಚತಂತ್ರ’ದಲ್ಲಿ ಕಾಣಿಸಿಕೊಂಡ ಸೋನಾಲ್, ಸದ್ಯಕ್ಕೆ ಉಪೇಂದ್ರ ಜೊತೆಗೆ ‘ಬುದ್ಧಿವಂತ-2’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು, ‘ಮಿಸ್ಟರ್ ನಟ್ವರ್‌ಲಾಲ್’ ಚಿತ್ರದ ಕಥೆ ಹಾಗು ಪಾತ್ರ ಕೇಳಿದ ಸೋನಾಲ್, ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಲವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಅಂದಹಾಗೆ, ಬಾಲಿವುಡ್‌ನಲ್ಲಿ ಅಮಿತಾಭ್ ಬಚ್ಚನ್ ಅಭಿನಯದ ‘ಮಿಸ್ಟರ್ ನಟ್ವರ್‌ಲಾಲ್’ ಚಿತ್ರ 1979 ರಲ್ಲಿ ಬಿಡುಗಡೆಯಾಗಿತ್ತು. ಆ ನಟ್ವರ್‌ಲಾಲ್ಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಚಿತ್ರದ ಕಥೆ ಮತ್ತು ನಾಯಕನ ಪಾತ್ರಕ್ಕೆ ‘ನಟ್ವರ್‌ಲಾಲ್’ ಶೀರ್ಷಿಕೆ ಸೂಕ್ತವೆನಿಸಿದ್ದರಿಂದ ಚಿತ್ರತಂಡ ನಾಮಕರಣ ಮಾಡಿದೆ. ಇದೊಂದು ಥ್ರಿಲ್ಲರ್ ಕಮ್ ಆ್ಯಕ್ಷನ್ ಚಿತ್ರವಾಗಿದ್ದು, ಚಿತ್ರದಲ್ಲಿ ನಾಯಕ ಕೂಡ ಒಂದಷ್ಟು ಜನರಿಗೆ ಮೋಸ ಮಾಡುತ್ತಲೇ ಬದುಕು ಸವೆಸುತ್ತಿರುತ್ತಾನೆ. ಆದರೆ, ಅವನು ಜನರಿಗೆ ಮೋಸ ಮಾಡಿ ಅದರಿಂದ ಬಂದ ಹಣವನ್ನು ಏನು ಮಾಡುತ್ತಾನೆ ಎಂಬುದು ಕಥೆ. ಪಕ್ಕಾ ಆ್ಯಕ್ಷನ್ ಸಿನಿಮಾ ಇದಾಗಿರುವುದರಿಂದ ಇಲ್ಲಿ ಆರು ಭರ್ಜರಿ ಆ್ಯಕ್ಷನ್‌ಗಳಿವೆ. ವಿಕ್ರಮ್‌ಮೋರೆ ಸ್ಟಂಟ್ ಮಾಡಿಸಲಿದ್ದಾರೆ. ಕೆ.ಎಂ.ಪ್ರಕಾಶ್ ಚಿತ್ರಕ್ಕೆ ಸಂಕಲನ ಮಾಡುತ್ತಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣವಿದೆ. ಉಳಿದಂತೆ ಚಿತ್ರದಲ್ಲಿ ರಾಜೇಶ್ ನಟರಂಗ, ‘ಟಗರು’ ಸರೋಜ ಖ್ಯಾತಿಯ ತ್ರಿವೇಣಿ ರಾವ್, ಗಿರಿ, ಪ್ರಶಾಂತ್ ಸಿದ್ದಿ ಸೇರಿದಂತೆ ಇತರರು ಇದ್ದಾರೆ. ಮಳೆ ಕಡಿಮೆಯಾದ ಬಳಿಕ ಚಿತ್ರೀಕರಣಕೆ ಹೊರಡಲು ಚಿತ್ರತಂಡ ಯೋಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
HMPV Virus: ಭಾರತದ ಮೊದಲ ಎಚ್‌ಎಂಪಿವಿ ಸೋಂಕು ಪ್ರಕರಣ ಬೆಂಗಳೂರಿನಲ್ಲಿ ಪತ್ತೆ
Toxic: ಯಶ್ ಬರ್ತ್ ಡೇಗೆ ʼಟಾಕ್ಸಿಕ್ʼನಿಂದ ಸಿಗಲಿದೆ ಬಿಗ್ ಅಪ್ಡೇಟ್; ಫ್ಯಾನ್ಸ್ ಥ್ರಿಲ್
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.