ಸೋನು ನಾಟಕ ಮಾಡ್ತಿದ್ದಾರೆ!
Team Udayavani, Jul 26, 2017, 10:58 AM IST
ರಂಗಭೂಮಿಯಿಂದ ಬಂದ ಕಲಾವಿದರು ಅಥವಾ ರಂಗಭೂಮಿಯ ನಂಟಿರುವ ನಟ-ನಟಿಯರು ಸಿನಿಮಾದಲ್ಲಿ ಎಷ್ಟೇ ಬಿಝಿಯಾದರೂ ಅವರಿಗೆ ರಂಗಭೂಮಿಯ ಮೋಹ ಬಿಡೋದಿಲ್ಲ. ಕೈ ತುಂಬಾ ಸಿನಿಮಾ ಅವಕಾಶ ಇದ್ದರೂ ಗ್ಯಾಪಲ್ಲಿ ರಂಗಭೂಮಿಯಲ್ಲಿ ಬಣ್ಣ ಹಚ್ಚುತ್ತಾರೆ, ಯಾವುದೋ ಒಂದು ಪಾತ್ರವಾಗಿ ರಂಗದ ಮೇಲೆ ಮಿಂಚುತ್ತಾರೆ. ಅದು ವೈಯಕ್ತಿಕ ತೃಪ್ತಿಗಾಗಿ. ಈಗ ಸೋನು ಕೂಡಾ ರಂಗದ ಮೇಲೆ ಬರಲು ರೆಡಿಯಾಗಿದ್ದಾರೆ.
ಹೌದು, ಸೋನು ನಟಿಸುತ್ತಿರುವ ನಾಟಕ ಇಂದು ರಂಗಶಂಕರದಲ್ಲಿ ಸಂಜೆ 7.30ಕ್ಕೆ ಪ್ರದರ್ಶನ ಕಾಣುತ್ತಿದೆ. ಅದು “E=MC2′. ಅಭಿಷೇಕ್ ಅಯ್ಯಂಗಾರ್ ಅವರ ಈ ನಾಟಕದಲ್ಲಿ ಸೋನು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಹಾಗಂತ ಸೋನುಗೆ ರಂಗಭೂಮಿಯಾಗಲಿ, ಇಂದು ಪ್ರದರ್ಶನ ಕಾಣುತ್ತಿರುವ ನಾಟಕವಾಗಲಿ ಹೊಸದಲ್ಲ. ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ಗುರುತಿಸಿಕೊಂಡ ಸೋನು ಆ ನಂತರ ಸಿನಿಮಾದಲ್ಲಿ ಬಿಝಿಯಾಗಿದ್ದು ನಿಮಗೆ ಗೊತ್ತೇ ಇದೆ.
ಸೋನು ಮತ್ತೆ ಬಣ್ಣ ಹಚ್ಚಿದ್ದು, “E=MC2′ ನಾಟಕದಲ್ಲಿ. ಈಗಾಗಲೇ ಈ ನಾಟಕದ ಎಂಟು ಪ್ರದರ್ಶನಗಳಲ್ಲಿ ಸೋನು ನಟಿಸಿದ್ದಾರೆ. ಹಾಗಾಗಿ, ಹೆಚ್ಚೇನೂ ರಿಹರ್ಸಲ್‌ನ ಅಗತ್ಯವಿಲ್ಲ ಎನ್ನುತ್ತಾರೆ ಸೋನು. ಹಾಗಂತ ರಿಹರ್ಸಲ್ ಮಾಡಿಲ್ಲವೆಂದಲ್ಲ, ವಾರಾಂತ್ಯದಲ್ಲಿ ರಿಹರ್ಸಲ್ ಮಾಡಿದ್ದು, ಈಗ ತುಂಬಾ ಗ್ಯಾಪ್‌ನ ನಂತರ ಮತ್ತೆ ಬಣ್ಣ ಹಚ್ಚುತ್ತಿರುವ ಖುಷಿ ಸೋನುಗಿದೆ. “ಈಗಾಗಲೇ ನಾನು ಈ ನಾಟಕದ ಎಂಟು ಶೋಗಳಲ್ಲಿ ಭಾಗಿಯಾಗಿದ್ದೇನೆ.
ತುಂಬಾ ಖುಷಿಕೊಡುವ ನಾಟಕವಿದು. ಎಷ್ಟೇ ಸಿನಿಮಾ ಮಾಡಿದರೂ ರಂಗಭೂಮಿಯಲ್ಲಿ ಕಾಣಿಸಿಕೊಳ್ಳೋದು ಖುಷಿ. ಅದೊಂಥರ ರಿಲ್ಯಾಕ್ಸೇಶನ್ ಕೊಡುತ್ತದೆ. ಸದ್ಯ ಎಕ್ಸೆಟ್ ಆಗಿದ್ದೇನೆ’ ಎನ್ನುವುದು ಸೋನು ಮಾತು. ಸದ್ಯ ಸೋನು ನಟಿಸಿರುವ “ಚಂಬಲ್’, “ಗುಲ್ಟಾ’, “ಶರಾವತಿ ತೀರದಲ್ಲಿ’ ಚಿತ್ರಗಳು ಬಿಡುಗಡೆಯ ಹಂತಕ್ಕೆ ಬಂದಿವೆ. ಈಗ ಸೋನು “ಶಾಲಿ ಐಎಎಸ್’ ಚಿತ್ರದಲ್ಲೂ ನಟಿಸುತ್ತಿದ್ದು, ಮುಂದಿನ ತಿಂಗಳಿನಿಂದ ಆ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.