ಅಖಾಡಕ್ಕೆ ಸೌತ್ ಇಂಡಿಯನ್ ಹೀರೋ
Team Udayavani, Feb 8, 2023, 2:27 PM IST
ಕೆಲವು ಸಿನಿಮಾಗಳ ಫಸ್ಟ್‌ಲುಕ್, ಟ್ರೇಲರ್ ನೋಡಿದಾಗ ಈ ಸಿನಿಮಾದೊಳಗೆ ಏನೋ ಇದೆ ಎಂಬ ಭರವಸೆ ಬರುತ್ತದೆ. ಸದ್ಯ ಆ ತರಹದ ಒಂದು ಭರವಸೆ ಮೂಡಿಸಿರುವ ಸಿನಿಮಾ “ಸೌತ್ ಇಂಡಿಯನ್ ಹೀರೋ’.
ಈ ಹಿಂದೆ “ಫಸ್ಟ್ ರ್‍ಯಾಂಕ್ ರಾಜು’, “ರಾಜು ಕನ್ನಡ ಮೀಡಿಯಂ’ನಂತಹ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ನರೇಶ್ ಈ ಚಿತ್ರದ ನಿರ್ದೇಶಕರು. ಈಗ ಸದ್ದಿಲ್ಲದೇ “ಸೌತ್‌ಇಂಡಿಯನ್ ಹೀರೋ’ ಎಂಬ ಸಿನಿಮಾ ಮಾಡಿದ್ದು, ಚಿತ್ರ ಫೆ.24ರಂದು ತೆರೆಕಾಣುತ್ತಿದೆ.
ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ನಟ ಉಪೇಂದ್ರ ಬಿಡುಗಡೆ ಮಾಡಿ, ಸಿನಿಮಾವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
“ಐದೈದು ವರ್ಷ ಸಿನಿಮಾ ಮಾಡಿ ಒಂದು ಹಿಟ್ ಕೊಡೋದು ದೊಡ್ಡ ವಿಚಾರವಲ್ಲ. ಬದಲಿಗೆ ಗ್ಯಾಪಲ್ಲಿ ಬಂದು ಹೊಡ್ಕೊಂಡು ಹೋಗ್ತಾರಲ್ವಾ ಅದು ಕೆಪಾಸಿಟಿ. ನಿರ್ದೇಶಕ ನರೇಶ್ ಆ ತರಹದ ಟ್ಯಾಲೆಂಟ್ ಇರುವ ವ್ಯಕ್ತಿ. ನನ್ನ ಸಿನಿಮಾಗಳ ಸ್ಕ್ರಿಪ್ಟ್ ಡಿಸ್ಕಶನ್ ಇವರ ಜೊತೆ ಮಾಡುತ್ತೇನೆ. ಚೆನ್ನಾಗಿದ್ದರೂ, ಇಲ್ಲದಿದ್ದರೂ ನೇರವಾಗಿ ಹೇಳುತ್ತಾರೆ. ನಾನು “ಸೌತ್ ಇಂಡಿಯನ್ ಹೀರೋ’ ಸಿನಿಮಾ ನೋಡಿದ್ದೇನೆ. ಕೆಲವು ಸಿನಿಮಾಗಳು ಇದು ಶೂರ್ ಶಾಟ್ ಸಿನಿಮಾ ಎಂಬ ಭಾವನೆ ಮೂಡಿಸುತ್ತವೆ. ಇದು ಕೂಡಾ ಆ ತರಹದ ಒಂದು ಸಿನಿಮಾ. ಮೊದಲ ಚಿತ್ರದಲ್ಲೇ ನಾಯಕನಿಗೆ ಎಲ್ಲಾ ರೀತಿಯ ಪಾತ್ರ ಸಿಕ್ಕಿದೆ. ಸಿನಿಮಾ ನೋಡಿದಾಗ ನಾನೇ ಈ ತರಹದ ಪಾತ್ರಗಳನ್ನು ಮಾಡಿಲ್ವಲ್ಲ ಎಂಬ ಭಾವನೆಬಂತು. ಈ ಸಿನಿಮಾವನ್ನು ಬೇರೆ ಭಾಷೆಗಳಿಗೂ ಡಬ್ ಮಾಡಿ ರಿಲೀಸ್ ಮಾಡಿ. ಈಗ ಸಿನಿಮಾದೊಳಗೆ ಹೀರೋ ಸ್ಟಾರ್ ಆಗಿದ್ದಾರೆ. ನಾಳೆ ಸಿನಿಮಾ ಆದ ನಂತರ ಜನ ನಿಮ್ಮನ್ನು ಸ್ಟಾರ್ ಮಾಡುತ್ತಾರೆ’ ಎಂದರು.
ಈ ಚಿತ್ರವನ್ನು “ರಿಯನ್ಷಿ ಫಿಲಂಸ್’ನಡಿ ನಿರ್ಮಾಣ ಮಾಡಲಾಗಿದೆ. ನರೇಶ್ ಅವರೇ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
“ಸೌತ್‌ಇಂಡಿಯನ್ ಹೀರೋ’ ಸಿನಿಮಾ ಬಗ್ಗೆಮಾತನಾಡುವ ನಿರ್ದೇಶಕ ನರೇಶ್, “ಇದು ಲಾಕ್‌ಡೌನ್‌ನಲ್ಲಿ ಆರಂಭವಾದ ಕಥೆ. ಒಂದು ಗಟ್ಟಿ ಕಂಟೆಂಟ್ ಇರುವ ಸಿನಿಮಾ ಮಾಡಬೇಕೆಂದು ಯೋಚಿಸಿದ ಹುಟ್ಟಿದ ಕಥೆಯೇ “ಸೌತ್ ಇಂಡಿಯನ್ ಹೀರೋ’. ಸಿನಿಮಾದ ಚಿತ್ರೀಕರಣ ಕೂಡಾ ಲಾಕ್‌ಡೌನ್ ಸಮಯದಲ್ಲೇ ಮುಗಿಸಿದೆವು’ ಎಂದು ಸಿನಿಮಾ ಬಗ್ಗೆ ವಿವರ ನೀಡುತ್ತಾರೆ.
“ಸೌತ್ ಇಂಡಿಯನ್ ಹೀರೋ’ ಸಿನಿಮಾದ ಪ್ರಮುಖ ಹೈಲೈಟ್ ಎಂದರೆ ಲಾಜಿಕ್ ಲಕ್ಷ್ಮಣ್ ರಾವ್ ಪಾತ್ರ. ಎಲ್ಲದರಲ್ಲೂ ಲಾಜಿಕ್ ಹುಡುಕುವ ಲಕ್ಷ್ಮಣ್ ರಾವ್ ಎಂಬ ವ್ಯಕ್ತಿ ಸಿನಿಮಾಕ್ಕೆ ಎಂಟ್ರಿಕೊಟ್ಟರೆ ಏನಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ.
ಈ ಬಗ್ಗೆ ಮಾತನಾಡುವ ನರೇಶ್, “ಮೊದಲು ಹುಟ್ಟಿದ ಪಾತ್ರವೇ ಲಾಜಿಕ್ ಲಕ್ಷ್ಮಣ್ ರಾವ್. ಸಾಮಾನ್ಯವಾಗಿ ಸಿನಿಮಾದವರು ಲಾಜಿಕ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.ಅದರಲ್ಲೂ ಕಮರ್ಷಿಯಲ್ ಸಿನಿಮಾದಲ್ಲಿ ಹೀರೋಏಳೆಂಟು ಜನರಿಗೆ ಹೊಡೆಯುವುದು ಸೇರಿದಂತೆಅನೇಕ ಸಾಹಸಗಳನ್ನು ಮಾಡುತ್ತಾರೆ. ಇವೆಲ್ಲವನ್ನುನಾವು ಲಾಜಿಕ್ ದೃಷ್ಟಿಯಿಂದ ನೋಡಲಾಗುವುದಿಲ್ಲ. ಆದರೆ, ಲಾಜಿಕ್ ಲಕ್ಷ್ಮಣ್ ರಾವ್ ಪಾತ್ರ ಎಲ್ಲದರಲ್ಲೂ ಲಾಜಿಕ್ ಹುಡುಕುವ ವ್ಯಕ್ತಿತ್ವ ಹೊಂದಿರುತ್ತದೆ. ಇಂತಹ ವ್ಯಕ್ತಿ ಸಿನಿಮಾಕ್ಕೆಬರುತ್ತಾನೆ, ಸ್ಟಾರ್ ಆಗುತ್ತಾನೆ, ಸೌತ್‌ಇಂಡಿಯನ್ ಸ್ಟಾರ್ ಆಗಿ ಮೆರೆಯುತ್ತಾ ನೆ. ಆತನ ಈ ಹಾದಿ ಹೇಗಿರುತ್ತದೆ. ಲಾಜಿಕ್ ಹುಡುಕುವ ಆತ ಸಿನಿಮಾದಲ್ಲಿಹೇಗೆ ವರ್ತಿಸುತ್ತಾನೆ ಎಂಬ ಅಂಶ ಸೇರಿದಂತೆ ಅನೇಕ ವಿಚಾರಗಳನ್ನು ಈಸಿನಿಮಾದಲ್ಲಿ ಹೇಳಿದ್ದೇವೆ’ ಎನ್ನುವುದು ನರೇಶ್ ಮಾತು.
ಚಿತ್ರದಲ್ಲಿ ಸಾರ್ಥಕ್ ಎನ್ನುವವರು ಹೀರೋ ಆಗಿ ನಟಿಸಿದ್ದಾರೆ. ನರೇಶ್ ಅವರಿಗೆ ಯಾವುದೇ ಇಮೇಜ್ ಇಲ್ಲದ ಹೊಸ ಮುಖ ಬೇಕಾದ ಕಾರಣ ಸಾರ್ಥಕ್ ಅವರನ್ನು ಆಯ್ಕೆ ಮಾಡಿದ್ದಾರೆ. ಉಳಿದಂತೆ ಊರ್ವಶಿ, ಕಾಶಿಮಾ ನಾಯಕಿಯರು. ಚಿತ್ರದಲ್ಲಿ ಯೋಗರಾಜ್ ಭಟ್ ನಟಿಸಿದ್ದಾರೆ. ಇಡೀ ತಂಡ ಸಿನಿಮಾದ ಬಗ್ಗೆ ಮಾತನಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Suri Loves Sandhya: ಟೀಸರ್‌ನಲ್ಲಿ ಸೂರಿ ಲವ್ ಸ್ಟೋರಿ
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.