ಲೆಟ್ಸ್ ಬ್ರೇಕಪ್‌ಗೆ ಸ್ಪಂದನಾ ಎಂಟ್ರಿ
Team Udayavani, Feb 12, 2020, 7:02 AM IST
ಯುವ ನಟ ವಿಹಾನ್ “ಪಂಚತಂತ್ರ’ ನಂತರ “ಲೆಟ್ಸ್ ಬ್ರೇಕಪ್’ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಿತ್ತು. ಆ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಎಂಬ ಸುದ್ದಿ ಕೂಡ ಇತ್ತು. ಆದರೆ, ಕೊನೆ ಕ್ಷಣದ ಬದಲಾವಣೆಯಿಂದಾಗಿ, ಆ ಚಿತ್ರಕ್ಕೆ ಹೊಸ ನಾಯಕಿಯ ಆಗಮನವಾಗಿದೆ. ಹೌದು, “ಲೆಟ್ಸ್ ಬ್ರೇಕಪ್’ ಚಿತ್ರಕ್ಕೆ ಈಗ ಸ್ಪಂದನಾ ಎಂಬ ಹೊಸ ಬೆಡಗಿ ಎಂಟ್ರಿಕೊಟ್ಟಿದ್ದಾರೆ. ಬೆಂಗಳೂರಿನ ಈ ಹುಡುಗಿಗೆ ಇದು ಮೊದಲ ಅನುಭವ.
ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜ್‌ನಲ್ಲಿ ಓದಿರುವ ಸ್ಪಂದನಾ, ಸಿನಿಮಾಗೆ ಎಂಟ್ರಿ ಕೊಡುವ ಮುನ್ನ, ನಾಗತಿಹಳ್ಳಿ ಚಂದ್ರಶೇಖರ್ ಅವರ “ಟೆಂಟ್ ಸಿನಿಮಾ ಶಾಲೆ’ ಹಾಗು ಮುಂಬೈನ ಅನುಪಮ್ ಖೇರ್ ಅವರ ಅಭಿನಯ ಶಾಲೆಯಲ್ಲಿ ನಟನೆಯ ತರಬೇತಿ ಪಡೆದು ಬಂದಿದ್ದಾರೆ. ಅಂದಹಾಗೆ, ಸ್ಪಂದನಾ ಈ ಚಿತ್ರದಲ್ಲಿ ಎಂಬಿಎ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಹಾನ್ ಕೂಡ ಅದೇ ಕಾಲೇಜ್‌ನಲ್ಲಿ ಓದುವ ವಿದ್ಯಾರ್ಥಿ ಪಾತ್ರ ಮಾಡುತ್ತಿದ್ದು, ಅಲ್ಲಿಂದ ಶುರುವಾಗುವ ಲವ್‌ಸ್ಟೋರಿಯಲ್ಲಿ ಸಾಕಷ್ಟು ಏರುಪೇರುಗಳಾಗುತ್ತವೆ.
ಆಮೇಲೆ ಅದು ಲವ್ ಕಂಟಿನ್ಯು ಆಗುತ್ತಾ ಅಥವಾ ಲವ್ ಬ್ರೇಕಪ್ ಆಗುತ್ತಾ ಅನ್ನೋದು ಕಥೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು “ಲೆಟ್ಸ್ ಬ್ರೇಕಪ್’ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಲಿದೆ. ಮೇ ವೇಳೆಗೆ ಚಿತ್ರೀಕರಣ ಶುರುವಾಗಲಿದೆ. ಅಂದಹಾಗೆ, ಈ ಚಿತ್ರವನ್ನು ಸ್ವರೂಪ್ ನಿರ್ದೇಶನ ಮಾಡುತ್ತಿದ್ದು, ಜಯಣ್ಣ ಮತ್ತು ಭೋಗೇಂದ್ರ ಅವರು ನಿರ್ಮಾಣ ಮಾಡುತ್ತಿದ್ದಾರೆ.
ನಿರ್ದೇಶಕ ಸ್ವರೂಪ್ ಅವರು ಈ ಹಿಂದೆ ಸ್ವರೂಪ್ ನಿರ್ದೇಶಿಸಿರುವ “ಲಖನೌ ಟು ಬೆಂಗಳೂರು” ಚಿತ್ರ ಬಿಡುಗಡೆ ಆಗಬೇಕಿದೆ. “ಲೆಟ್ಸ್ ಬ್ರೇಕಪ್’ ಶೀರ್ಷಿಕೆಯೇ ಹೇಳುವಂತೆ, ಇದೊಂದು ಪಕ್ಕಾ ರೊಮ್ಯಾಂಟಿಕ್ ಲವ್‌ಸ್ಟೋರಿ ಹೊಂದಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ವಿನೀತ್ ರಾಜ್ ಮೆನನ್ ಸಂಗೀತ ನೀಡಲಿದ್ದಾರೆ. ಮೂರು ಭರ್ಜರಿ ಸ್ಟಂಟ್ಸ್ ಕೂಡ ಇರಲಿದೆ. ಬೆಂಗಳೂರು ಹಾಗು ಮಂಗಳೂರು ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.