ವೈಕುಂಠ ಏಕಾದಶಿ ವಿಶೇಷ : ನಟ ಜಗ್ಗೇಶ್ ಗೆ ತಿಮ್ಮಪ್ಪನ ದರ್ಶನ ಮಾಡಿಸಿದ ರಾಯರು!
Team Udayavani, Jan 6, 2020, 9:48 PM IST
ಬೆಂಗಳೂರು: ಇಂದು ವೈಕುಂಠ ಏಕಾದಶಿ. ಹಿಂದೂ ಆಸ್ತಿಕರ ನಂಬಿಕೆಯ ಪ್ರಕಾರ ಇಂದು ಸ್ವರ್ಗದ ಬಾಗಿಲು ತೆರೆಯುವ ದಿನ. ಶ್ರೀನಿವಾಸನ ದರ್ಶನ ಇಂದು ಪುಣ್ಯಪ್ರದವೆಂಬ ನಂಬಿಕೆಯೂ ಇದೆ. ಇದಕ್ಕೆ ಪೂರಕವಾಗಿರುವ ಘಟನೆಯೊಂದು ಕನ್ನಡದ ಖ್ಯಾತ ನಟ ಜಗ್ಗೇಶ್ ಅವರ ಅನುಭವಕ್ಕೆ ಇಂದು ಬಂದಿದ್ದು, ತಮಗಾದ ಅನುಭವವನ್ನು ಜಗ್ಗೇಶ್ ಅವರು ತಮ್ಮ ಫೇಸ್ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜಗ್ಗೇಶ್ ಅವರ ಸಹೋದರ ನಟ ಕೋಮಲ್ ಅವರು ಕರೆಮಾಡಿ ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಗೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಪುಣ್ಯದಿನದಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಲಕ್ಷೋಪಲಕ್ಷ ಭಕ್ತರು ಆಗಮಿಸುವುದರಿಂದ ಕೊನೇ ಕ್ಷಣದಲ್ಲಿ ನಮಗೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿ ಫೋನ್ ಇಟ್ಟರಂತೆ ಜಗ್ಗೇಶ್.
ಬಳಿಕ ಅಲ್ಲೇ ಇದ್ದ ತಮ್ಮ ಆರಾಧ್ಯ ದೈವ ರಾಘವೇಂದ್ರ ಸ್ವಾಮಿಗಳ ಚಿತ್ರವನ್ನು ನೋಡಿ, ‘ತಿಮ್ಮಪ್ಪನ ದರ್ಶನದ ಅವಕಾಶವನ್ನು ಕೊಡಿಸಿ ರಾಯರೇ..’ ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದ್ದಾರೆ. ಇದಾಗಿ ಸ್ವಲ್ಪ ಹೊತ್ತಿನ ಬಳಿಕ ತಿರುಪತಿ ಮಂಡಳಿಯ ಸದಸ್ಯ ಅನಂತು ಅವರು ಜಗ್ಗೇಶ್ ಅವರಿಗೆ ಕರೆಮಾಡಿ ‘ವೈಕುಂಠ ಏಕಾದಶಿಯ ವಿಶೇಷ ದರ್ಶನದ ಎರಡು ಟಿಕೆಟ್ ಇದೆ..’ ಎಂದು ಹೇಳಿದ್ದಾರೆ!
ಆ ಕ್ಷಣದಲ್ಲಿ ಜಗ್ಗೇಶ್ ಅವರಿಗೆ ಗುರು ರಾಯರ ಅನುಗ್ರಹದ ದರ್ಶನವಾಗಿ ಭಕ್ತಿಭಾವದಿಂದ ಕಣ್ಣೀರು ಹರಿಯುತ್ತದೆ. ತಕ್ಷಣವೇ ತಮ್ಮನನ್ನು ಕೂಡಿಕೊಂಡು ತಿರುಪತಿಗೆ ಹೋಗಿ ಅಲ್ಲಿ ತಿಮ್ಮಪ್ಪನ ದರ್ಶನವನ್ನು ಪಡೆದುಕೊಂಡು ವೈಕುಂಠದ ಬಾಗಿಲನ್ನು ಸುತ್ತಿ ಧನ್ಯತಾ ಭಾವದಿಂದ ವಾಪಾಸಾಗಿದ್ದೇವೆ ಎಂದು ಜಗ್ಗೇಶ್ ಅವರು ಬರೆದುಕೊಂಡಿದ್ದಾರೆ.
ಕೋಮಲ್ ಕರೆಮಾಡಿ ಅಣ್ಣ ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಗೆ ಹೋಗಲು ಯತ್ನಿಸುವ ಎಂದ!
ಲಕ್ಷೋಪಲಕ್ಷ ಜನರ ಆಸೆ ಇಂದು ಸಾಧ್ಯವಾ?ಎಂದು
ಫೋನ್ ಇಟ್ಟು!
ನನ್ನ ಇಷ್ಟದ ರಾಯರ ಚಿತ್ರದಕಡೆ ತಿರುಗಿ ಅವಕಾಶ ಕೊಡಿಸಿ ರಾಯರೆ ಎಂದೆ!
ಕೆಲವೆ ಕ್ಷಣದಲ್ಲಿ ತಿರುಪತಿ ಬೋರ್ಡ್… https://t.co/c4UpdVZeC1— ನವರಸನಾಯಕ ಜಗ್ಗೇಶ್ (@Jaggesh2) January 6, 2020
‘ನಂಬಿ ಕೆಟ್ಟವರಿಲ್ಲವೋ ನಮ್ಮ ರಾಯರ..
ಅರ್ಪಣಾಭಾವದಿಂದ ರಾಯರ ನಂಬಿದರೆ ನಮ್ಮ ಬೆನ್ನ
ಹಿಂದೆ ನಮ್ಮ ಕಾಯುವ ಸಿಪಾಯಿಯಂತೆ ನಿಲ್ಲುವರು!
ರಾಯರ ಕೃಪಾದೃಷ್ಟಿಗಿಂತ ಬೇರೆ ಐಶ್ವರ್ಯ ಬೇಕೆ ಈ ಜಗದೊಳು ನನಗೆ!
ಇಂಥಾ ಮಹಾಮಹಿಮ ರಾಯರ ಸ್ಮರಿಣೆಗೆ ಪ್ರೇರಣೆಮಾಡಿ ಬೆಳಸಿದ ಅಮ್ಮನಿಗೆ ಶರಣು ಶರಣಾರ್ಥಿ…
ನಲ್ಮೆಯ ಬಂಧುಗಳಿಗೆ ವೈಕುಂಠ ಏಕಾದಶಿ ಶುಭಕಾಮನೆಗಳು..ಶುಭಮಸ್ತು…
ಶುಭಸಂಜೆ ….’
ಎಂದು ಧನ್ಯತಾಭಾವದಿಂದ ಬರೆದುಕೊಂಡಿದ್ದಾರೆ ನವರಸನಾಯಕ ಜಗ್ಗೇಶ್ ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.