ವಿಷ್ಣುದಾದಾ ನೆನಪಿನಲ್ಲಿ ‘ನಾ ತುಂಬಾ ಹೊಸಬ ಬಾಸು’ ಸಾಂಗ್ ರಿಲೀಸ್
Team Udayavani, Feb 5, 2019, 4:50 AM IST
ಸ್ಯಾಂಡಲ್ ವುಡ್ ನ ಗಂಡುಗಲಿ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು ಅವರು ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಲು ರೆಡಿಯಾಗಿದ್ದಾರೆ. ‘ಪಡ್ಡೆ ಹುಲಿ’ ಎಂಬ ಚಿತ್ರದ ಮೂಲಕ ಶ್ರೇಯಸ್ ನಾಯಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ.
ಈ ಚಿತ್ರದ ಹೈಲೈಟ್ ಸಾಂಗ್ ‘ನಾ ತುಂಬಾ ಹೊಸಬ ಬಾಸು…’ ಇದೀಗ ಯೂ ಟ್ಯೂಬ್ ನಲ್ಲಿ ಬಿಡುಗಡೆಗೊಂಡು ಸಖತ್ ಸೌಂಡ್ ಮಾಡುತ್ತಿದೆ. ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಈ ಹಾಡಿನ ಚಿತ್ರೀಕರಣ ಕಲರ್ ಫುಲ್ ಆಗಿ ಚಿತ್ರೀಕರಣಗೊಂಡಿದೆ. ಈ ಹಾಡಿನ ಇನ್ನೊಂದು ವಿಶೇಷವೆಂದರೆ ಸಾಹಸಸಿಂಹ ಅಭಿನವ ಭಾರ್ಗವ ವಿಷ್ಣುವರ್ಧನ್ ಅವರಿಗೆ ಈ ಹಾಡನ್ನು ಸಮರ್ಪಿಸಲಾಗಿದೆ. ಮಾತ್ರವಲ್ಲದೆ ಈ ಹಾಡಿನಲ್ಲಿ ನಾಯಕ ನಟ ಶ್ರೇಯಸ್ ಅವರು ವಿಷ್ಣು ದಾದಾ ಅವರು ನಾಗರ ಹಾವಿನಲ್ಲಿ ನಿರ್ವಹಿಸಿದ್ದ ರಾಮಾಚಾರಿ ಪಾತ್ರದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವುದು.
PRK ಆಡಿಯೋ ಮೂಲಕ ಈ ಹಾಡು ಇದೀಗ ಯೂ ಟ್ಯೂಬ್ ನಲ್ಲಿ ಬಿಡುಗಡೆಗೊಂಡಿದ್ದು ಸಿನಿಪ್ರಿಯರ ಮನಗೆದ್ದಿದೆ. ಸ್ಯಾಂಡಲ್ ವುಡ್ ನ ಘಟಾನುಘಟಿ ನಾಯಕರು ಈ ಹಾಡನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿ ಶ್ರೇಯಸ್ ಗೆ ಶುಭ ಹಾರೈಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ. ಡಾ. ವಿ ನಾಗೇಂದ್ರ ಪ್ರಸಾದ್ ಅವರು ಈ ಹಾಡನ್ನು ಬರೆದಿದ್ದಾರೆ. ಶೇಶಾಂಕ್ ಶೇಷಗಿರಿ ಈ ಹಾಡನ್ನು ಹಾಡಿದ್ದು, ಗುಬ್ಬಿ ಅವರು ರ್ಯಾಪ್ ಧ್ವನಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.