ಆತ್ಮದಲ್ಲಿ ಹರಸುವುದೇ ಶ್ರೇಷ್ಠ ಪಾರಿತೋಷಕ
ರಾಜ್ಯ ಪ್ರಶಸ್ತಿ ಕುರಿತ ಅಭಿಮಾನಿ ಪ್ರಶ್ನೆಗೆ ಜಗ್ಗೇಶ್ ಉತ್ತರ
Team Udayavani, Jan 27, 2020, 7:01 AM IST
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಪ್ರತಿ ಬಾರಿ ಪ್ರಶಸ್ತಿ ಘೋಷಣೆಯಾದಾಗಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟರಲ್ಲಿ “ನಿಮಗ್ಯಾಕೆ ಪ್ರಶಸ್ತಿ ಬಂದಿಲ್ಲ’ ಎಂದು ಕೇಳುತ್ತಿರುತ್ತಾರೆ. ಈ ಬಾರಿ ಅಭಿಮಾನಿಯೊಬ್ಬರು ಜಗ್ಗೇಶ್ ಅವರಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ. “38 ವರ್ಷ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ನಿಮಗೆ ಸಿಗದ ರಾಜ್ಯ ಪ್ರಶಸ್ತಿ, ಇಂದು ನಿನ್ನೆ- ಮೊನ್ನೆ ಬಂದವರಿಗೆ ಸಿಗುತ್ತಿದೆ.
ತುಂಬಾ ನೋವಿನ ವಿಷಯ, ಜಗ್ಗಣ್ಣ .ಏನೇ ಇರಲಿ ನಮ್ಮ ಕನ್ನಡಿಗರು ನಿಮ್ಮ ಮೇಲೆ ಇಟ್ಟ ಪ್ರೀತಿ ಅಭಿಮಾನ ಅದೇ ನಿಮಗೆ ರಾಷ್ಟ್ರ ಪ್ರಶಸ್ತಿ’ ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ಜಗ್ಗೇಶ್, “ನಾಲ್ಕು ಗೋಡೆ ಮಧ್ಯೆ ನಿರ್ಧರಿಸುವ ಪಾರಿತೋಷಕಕ್ಕಿಂತ ಆತ್ಮದಲ್ಲಿ ಹರಸುವುದೇ ಶ್ರೇಷ್ಠ ಪಾರಿತೋಷಕ’ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ‘ಯಾವ ಮನುಷ್ಯ ತಾನು ಮಾಡಿದ ಕಾರ್ಯಕ್ಕೆ ಪ್ರತಿಫಲ ಅಪೇಕ್ಷೆ ಪಡುತ್ತಾನೆ ಅವನ ಸಾಧನೆ ಶೂನ್ಯವಾಗುತ್ತದೆ!
ಯಾವಮನುಷ್ಯ ತಾನುಮಾಡಿದ ಕಾರ್ಯಕ್ಕೆ ಪ್ರತಿಪಲ ಅಪೇಕ್ಷೆಪಡುತ್ತಾನೆ
ಅವನ ಸಾಧನೆ ಶೂನ್ಯವಾಗುತ್ತದೆ!
ನಾವು ಮಾಡುವಕಾರ್ಯ ಪಲಾಫೇಕ್ಷೆ ಇಲ್ಲದೆ ಮಾಡಿದಾಗ ದೇವರಿಗೆ ಹತ್ತಿರ ಆಗುತ್ತೇವೆ!
ಜನ್ಮಾಂತರಪುಣ್ಯ ಅನೇಕ ಆತ್ಮಗಳ ನಗಿಸುವ ಕಾಯಕಕೊಟ್ಟ ದೇವರಿಗೆ!
ನಾಲ್ಕು ಗೋಡೆಮದ್ಯ ನಿರ್ದರಿಸುವ ಪಾರಿತೋಷಕಕ್ಕಿಂತ ಆತ್ಮದಲ್ಲಿ ಹರಸುವುದೆ ಶ್ರೇಷ್ಟಪಾರಿತೋಷಕ! https://t.co/OFLFcODPBa— ನವರಸನಾಯಕ ಜಗ್ಗೇಶ್ (@Jaggesh2) January 25, 2020
ನಾವು ಮಾಡುವ ಕಾರ್ಯ ಫಲಾಫೇಕ್ಷೆ ಇಲ್ಲದೆ ಮಾಡಿದಾಗ ದೇವರಿಗೆ ಹತ್ತಿರ ಆಗುತ್ತೇವೆ ! ಜನ್ಮಾಂತರ ಪುಣ್ಯ ಅನೇಕ ಆತ್ಮಗಳ ನಗಿಸುವ ಕಾಯಕ ಕೊಟ್ಟ ದೇವರಿಗೆ! ನಾಲ್ಕು ಗೋಡೆ ಮಧ್ಯೆ ನಿರ್ಧರಿಸುವ ಪಾರಿತೋಷಕಕ್ಕಿಂತ ಆತ್ಮದಲ್ಲಿ ಹರಸುವುದೆ ಶ್ರೇಷ್ಠಪಾರಿತೋಷಕ!’ ಎಂದು ಉತ್ತರಿಸಿದ್ದಾರೆ. ಈ ಮೂಲಕ ಪ್ರಶಸ್ತಿಗಿಂತ ಜನರ ಪ್ರೀತಿ, ಬೆಂಬಲ ಮುಖ್ಯ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.