ರಣಹೇಡಿ ಚಿತ್ರಕ್ಕೆ ಶ್ರೀಮುರಳಿ ಸಾಥ್
ವಿಡಿಯೋ ಸಾಂಗ್ ರಿಲೀಸ್ ಮಾಡಿ ಶುಭ ಹಾರೈಕೆ
Team Udayavani, Aug 8, 2019, 3:00 AM IST
ಹೊಸಬರು ಸೇರಿ ಮಾಡಿರುವ “ರಣಹೇಡಿ’ ಚಿತ್ರದ ವಿಡಿಯೋ ಹಾಡೊಂದನ್ನು ಇತ್ತೀಚೆಗೆ ವೀಕ್ಷಿಸಿದ ನಟ ಶ್ರೀಮುರಳಿ, ಆ ಹಾಡನ್ನು ಬಿಡುಗಡೆ ಮಾಡುವ ಮೂಲಕ ಹೊಸಬರ ಪ್ರಯತ್ನಕ್ಕೆ ಶುಭಕೋರಿದ್ದಾರೆ. ಇನ್ನು, ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೆಟ್ ನೀಡಿದ್ದು, ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, “ರಣಹೇಡಿ’ ಸೆಪ್ಟೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರಕ್ಕೆ ಕರ್ಣಕುಮಾರ್ ಹೀರೋ.
ಕಳೆದ ಒಂದು ದಶಕದಿಂದಲೂ ಸುಮಾರು 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಅವರಿಗೆ “ರಣಹೇಡಿ’ ನಾಯಕರಾಗಿ ಮೊದಲ ಚಿತ್ರ.”ಕಬಡ್ಡಿ’ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಯಾದ ಕರ್ಣಕುಮಾರ್, “ಮಫ್ತಿ’,”ಕಬೀರ’,”ಮತ್ತೆ ಮುಂಗಾರು’,”ಭಾರತ್ ಸ್ಟೋರ್’, “ಮಾಸ್ಟರ್ ಪೀಸ್’, “ಚೌಕ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಮೂಲತಃ ರಂಗಭೂಮಿ ಹಿನ್ನೆಲೆಯಿರುವ ಅವರು “ಜನದನಿ’ ಮತ್ತು “ಗೆಳೆಯರ ಬಳಗ’ ರಂಗತಂಡದಲ್ಲಿ ಕೆಲಸ ಮಾಡಿ, ಸುಮಾರು 50 ನಾಟಕಗಳಲ್ಲೂ ನಟಿಸಿದ್ದಾರೆ.
“ರಣಹೇಡಿ’ ಒಂದು ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಾಗುವ ಕಥೆ. ರೈತರ ವೈಯಕ್ತಿಕ ಸಮಸ್ಯೆಯಿಂದ ಆತ್ಮಹತ್ಯೆ ಆಗುವುದು ಮತ್ತು ಬೆಳೆ ನಷ್ಟ, ಸಾಲ ಹಿನ್ನೆಲೆಯಲ್ಲೂ ಆತ್ಮಹತ್ಯೆ ಆಗುವುದರ ಕುರಿತ ಚಿತ್ರಣವಿದೆ. ಸುಮಾರು 35 ದಿನಗಳ ಕಾಲ ಚಿತ್ರೀಕರಿಸಿದ್ದು, ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳ ಜೊತೆ ಯಲ್ಲಿ ಅಚ್ಯುತಕುಮಾರ್, ಗಿರಿ, ಷಫಿ ಇತರರು ನಟಿಸಿದ್ದಾರೆ. ಚಿತ್ರವನ್ನು ಮನು ಕೆ.ಶೆಟ್ಟಿ ಹಳ್ಳಿ, ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ವಿ.ಮನೋಹರ್ ಸಂಗೀತವಿದ್ದು, ಅವರಿಲ್ಲಿ ಆರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕುಮಾರ್ ಗೌಡ ಛಾಯಾಗ್ರಾಹಣವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.