ʼಬಘೀರʼನಾಗಿ ನ್ಯಾಯಕ್ಕಾಗಿ ಘರ್ಜಿಸಿದ ರೋರಿಂಗ್ ಸ್ಟಾರ್: ಟೀಸರ್ ನೋಡಿ ಫ್ಯಾನ್ಸ್ ಥ್ರಿಲ್
Team Udayavani, Dec 17, 2023, 11:14 AM IST
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ʼಬಘೀರʼ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಆ ಮೂಲಕ ಫ್ಯಾನ್ಸ್ ಗಳಿಗೆ ಭರ್ಜರಿ ಬರ್ತ್ ಡೇ ಉಡುಗೊರೆಯನ್ನು ಶ್ರೀಮುರಳಿ ಅವರು ನೀಡಿದ್ದಾರೆ.
ಡಾ.ಸೂರಿ ನಿರ್ದೇಶನದ ʼಬಘೀರʼ ಶೂಟಿಂಗ್ ಹಂತದಿಂದಲೇ ಸೌಂಡ್ ಮಾಡುತ್ತಿದೆ. ಶ್ರೀಮುರಳಿ ಅವರು ಭಿನ್ನವಾಗಿ ಸಿನಿಮಾದಲ್ಲಿ ಕಾಣಸಿಕೊಳ್ಳಲಿದ್ದಾರೆ. “ಸಮಾಜವು ಕಾಡಾಗಿ ಬದಲಾದಾಗ ಒಬ್ಬ ಪರಭಕ್ಷಕ ಮಾತ್ರ ನ್ಯಾಯಕ್ಕಾಗಿ ಘರ್ಜಿಸುತ್ತಾನೆ” ಎನ್ನು ಟ್ಯಾಗ್ ಲೈನ್ ನ್ನು ಟೀಸರ್ ಪೋಸ್ಟರ್ ನ ಕೆಳಗೆ ಬರೆಯಲಾಗಿದೆ. ಕರಿಚಿರತೆಯ ಮಾಸ್ಕ್ ಹಾಕಿಕೊಂಡು ಕೈಯಲ್ಲಿ ಆಯುಧ ಹಿಡಿದುಕೊಂಡು ರೋರಿಂಗ್ ಸ್ಟಾರ್ ಕಾಣಿಸಿಕೊಂಡಿದ್ದಾರೆ.
ಶ್ರೀಮುರಳಿ ಸಿನಿಮಾದಲ್ಲಿ ಖಾಕಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ನ್ಯಾಯಕ್ಕಾಗಿ ಹೋರಾಡುವ ಖದರ್ ನಲ್ಲಿ ರೋರಿಂಗ್ ಸ್ಟಾರ್ ಮಿಂಚಿದ್ದಾರೆ. ಟೀಸರ್ ನಲ್ಲಿ ಅದ್ಧೂರಿ ಮೇಕಿಂಗ್ ದೃಶ್ಯಗಳು, ಸಾಹಸ ದೃಶ್ಯಗಳು ಗಮನ ಸೆಳೆಯುತ್ತದೆ. ಟೀಸರ್ ನಲ್ಲಿ ಡೈಲಾಗ್ಸ್ ಗಳಿಲ್ಲದೆ ಬರೀ ಮಾಸ್ ದೃಶ್ಯದಿಂದಲೇ ಕುತೂಹಲವನ್ನು ಹೆಚ್ಚಿಸಿದೆ ʼಬಘೀರʼ ಚಿತ್ರತಂಡ.
ಹುಟ್ಟುಹಬ್ಬದಂದು ʼಬಘೀರʼನ ಟೀಸರ್ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಇನ್ನು ಶ್ರೀಮುರಳಿ ಅವರ 23ನೇ ಸಿನಿಮಾಕ್ಕೆ ʼಪರಾಕ್ ʼಎನ್ನುವ ಟೈಟಲ್ ಇಡಲಾಗಿದೆ. ಇದರ ಪೋಸ್ಟರ್ ರಿಲೀಸ್ ಆಗಿದೆ. ಹಾಲೇಶ್ ಕೋಗುಂಡಿ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಅಭಿಮಾನಿಗಳೊಂದಿಗೆ ಶ್ರೀಮುರಳಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.
𝐖𝐡𝐞𝐧 𝐬𝐨𝐜𝐢𝐞𝐭𝐲 𝐛𝐞𝐜𝐨𝐦𝐞𝐬 𝐚 𝐣𝐮𝐧𝐠𝐥𝐞… 𝐚𝐧𝐝 𝐨𝐧𝐥𝐲 𝐨𝐧𝐞 𝐩𝐫𝐞𝐝𝐚𝐭𝐨𝐫 𝐫𝐨𝐚𝐫𝐬 𝐟𝐨𝐫 𝐣𝐮𝐬𝐭𝐢𝐜𝐞…💥
Presenting #BagheeraTeaser to you all ▶️ https://t.co/U1haHCdWUJ#Bagheera #DrSuri #PrashanthNeel @vkiragandur @rukmini_vasanth @hombalefilms… pic.twitter.com/Zto5dnzMFc
— #SRIIMURALI (@SRIMURALIII) December 17, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.