![1-dsadsad](https://www.udayavani.com/wp-content/uploads/2024/07/1-dsadsad-415x279.jpg)
ROSY; ಯೋಗಿ ಜೊತೆಯಾದ ಕಿಟ್ಟಿ
Team Udayavani, Dec 5, 2023, 5:47 PM IST
![srinagara kitty in loose mada yogi’s rosy](https://www.udayavani.com/wp-content/uploads/2023/12/rosy-620x342.jpg)
ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ ರೋಜಿಯಲ್ಲಿ ನಟ ಶ್ರೀನಗರ ಕಿಟ್ಟಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಕಿಟ್ಟಿ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಚಿತ್ರತಂಡ ಬಿಡುಗಡೆ ಮಾಡಿದೆ. “ಈ ಪಾತ್ರದ ಕುರಿತು ನಿರ್ದೇಶಕ ಶೂನ್ಯ ಅವರು ಹೇಳಿದಾಗ ಚೆನ್ನಾಗಿದೆ ಅನಿಸಿತು. ಈಗ ಪೋಸ್ಟರ್ ನೋಡಿ ಇನ್ನು ಹೆಚ್ಚು ಖುಷಿಯಾಗಿದೆ. ಕ್ರಿಸ್ಟೋಪರ್ ನನ್ನ ಪಾತ್ರದ ಹೆಸರು’ ಎಂದರು ಕಿಟ್ಟಿ.
ನಟ ಯೋಗಿ ಕೂಡಾ ಮಾತನಾಡಿದರು. “ನಮ್ಮ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ನಟಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ನಾವಿಬ್ಬರು ಹುಡುಗರು ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇವೆ’ ಎಂದರು.
ನಿರ್ದೇಶಕ ಶೂನ್ಯ, ನಿರ್ಮಾಪಕ ಡಿ.ವೈ ರಾಜೇಶ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಚಿತ್ರದ ಕುರಿತು ಮಾತನಾಡಿದರು.
ಟಾಪ್ ನ್ಯೂಸ್
![1-dsadsad](https://www.udayavani.com/wp-content/uploads/2024/07/1-dsadsad-415x279.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.