GST ಹಿಂದೆ ಸೃಜನ್‌ ಲೋಕೇಶ್‌: ನಿರ್ದೇಶನದ ಕಡೆಗೆ ಮುಖ ಮಾಡಿದ ನಟ

Team Udayavani, Aug 22, 2023, 12:18 PM IST

Srujan Lokesh Directed and Acted GST Movie Launched

ಕಿರುತೆರೆಯ ಹಲವು ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಯಶಸ್ವಿಯಾಗಿರುವ ನಟ ಕಂ ನಿರೂಪಕ ಸೃಜನ್‌ ಲೋಕೇಶ್‌ ಈಗ ಡೈರೆಕ್ಟರ್‌ ಕ್ಯಾಪ್‌ ಧರಿಸುತ್ತಿದ್ದಾರೆ. ಹೌದು, ಆಗಾಗ್ಗೆ ಕಿರುತೆರೆಯ ಜೊತೆ ಹಿರಿತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದ ಸೃಜನ್‌ ಲೋಕೇಶ್‌, ಈಗ ಪೂರ್ಣ ಪ್ರಮಾಣದಲ್ಲಿ ನಿರ್ದೇಶನದತ್ತ ಮುಖ ಮಾಡಿದ್ದಾರೆ.

ಸೃಜನ್‌ ಲೋಕೇಶ್‌ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾಕ್ಕೆ “ಜಿಎಸ್‌ಟಿ’ ಎಂದು ಹೆಸರಿಡಲಾಗಿದ್ದು, ಇದೀಗ ಸಿನಿಮಾದ ಮುಹೂರ್ತ ಕೂಡ ಅದ್ಧೂರಿಯಾಗಿ ನೆರವೇರಿದೆ.

“ಸಂದೇಶ್‌ ಪ್ರೊಡಕ್ಷನ್ಸ್‌’ ಬ್ಯಾನರಿನಲ್ಲಿ ಸಂದೇಶ್‌ ಎನ್‌. ನಿರ್ಮಿಸುತ್ತಿರುವ “ಜಿಎಸ್‌ಟಿ’ ಸಿನಿಮಾದಲ್ಲಿ ಸೃಜನ್‌ ಲೋಕೇಶ್‌ ನಿರ್ದೇಶನದ ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ರಜಿನಿ ಭಾರಧ್ವಾಜ್‌ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ.

ಉಳಿದಂತೆ ರವಿಶಂಕರ ಗೌಡ, ಪ್ರಮೋದ್‌ ಶೆಟ್ಟಿ, ಗಿರಿಜಾ ಲೋಕೇಶ್‌, ನಿವೇದಿತ ಗೌಡ, ತಬಲ ನಾಣಿ, ಮಾ. ಸುಕೃತ್‌ ಸೃಜನ್‌ ಲೋಕೇಶ್‌, ಶೋಭರಾಜ್‌, ಅಶೋಕ್‌, ಅರವಿಂದ ರಾವ್‌, ವಿನೋದ್‌, ರಮ್ಯಾ ಮೊದಲಾದವರು “ಜಿಎಸ್‌ಟಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಮುಹೂರ್ತದ ಬಳಿಕ “ಜಿಎಸ್‌ಟಿ’ ಸಿನಿಮಾದ ಬಗ್ಗೆ ಮಾತನಾಡಿದ ನಾಯಕ ನಟ ಕಂ ನಿರ್ದೇಶಕ, “ಇದೊಂದು ಹ್ಯೂಮರಸ್‌ ಹಾರರ್‌ ಕಥಾಹಂದರ ಹೊಂದಿರುವ ಸಿನಿಮಾ. “ಜಿಎಸ್‌ಟಿ’ ಅಂದ್ರೆ “ಘೋಸ್ಟ್ಸ್ ಇನ್‌ ಟ್ರಬಲ್‌’ ಎಂದರ್ಥ. ದೆವ್ವಗಳು ಸಂಕಷ್ಟದಲ್ಲಿ ಸಿಲುಕಿಕೊಂಡರೆ, ಹೇಗಿರುತ್ತದೆ ಎಂಬುದು ಸಿನಿಮಾದ ಕಥೆಯ ಒಂದು ಎಳೆ. ಇದರಲ್ಲಿ ಹಾರರ್‌, ಹಾಮಿಡಿ, ಎಮೊಶನ್ಸ್‌ ಎಲ್ಲವೂ ಇರಲಿದೆ. ನಮ್ಮ “ಜಿಎಸ್‌ಟಿ’ ಟ್ಯಾಕ್ಸ್‌ ಫ್ರೀ ಎಂಟರ್‌ಟೈನ್ಮೆಂಟ್‌ ಸಿನಿಮಾ. ಸುಮಾರು ಒಂದು ಗಂಟೆಗೂ ಹೆಚ್ಚು ಗ್ರಾಫಿಕ್ಸ್‌ ಸಿನಿಮಾದಲ್ಲಿದೆ. ಸುಮಾರು ಐವತ್ತು ದಿನ ಶೂಟಿಂಗ್‌ಗೆ ಪ್ಲಾನ್‌ ಹಾಕಿಕೊಂಡಿದ್ದೇವೆ’ ಎಂದು ಸಿನಿಮಾದ ಬಗ್ಗೆ ವಿವರಣೆ ನೀಡಿದರು.

“ಜಿಎಸ್‌ಟಿ’ ಸಿನಿಮಾಕ್ಕೆ ಗುಂಡ್ಲುಪೇಟೆ ಸುರೇಶ್‌ ಛಾಯಾಗ್ರಹಣವಿದ್ದು, ಸಿನಿಮಾದ ಹಾಡುಗಳಿಗೆ ಚಂದನ್‌ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ. ಹಾಡುಗಳಿಗೆ ಕವಿರಾಜ್‌ ಸಾಹಿತ್ಯ ಮತ್ತು ರಾಜಶೇಖರ್‌ ಸಂಭಾಷಣೆ ಬರೆಯುತ್ತಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಹಿರಿಯ ನಿರ್ದೇಶಕ ಟಿ. ಎಸ್‌ ನಾಗಾಭರಣ, ಪಿ.ಶೇಷಾದ್ರಿ, ನಟ ನಿರೂಪ್‌ ಭಂಡಾರಿ, ಹಿರಿಯ ನಟ ಸುಂದರರಾಜ್‌, ನಟಿಯರಾದ ಶ್ರುತಿ, ತಾರಾ ಅನುರಾಧಾ ಮೊದಲಾದವರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.

ಟಾಪ್ ನ್ಯೂಸ್

ಡಾ| ಸಂಧ್ಯಾ ಶೆಣೈಗೆ ಕಲ್ಪನಾ ಚಾವ್ಲಾ ಯುವವಿಜ್ಞಾನಿ ಪ್ರಶಸ್ತಿ

State Govt: ಡಾ| ಸಂಧ್ಯಾ ಶೆಣೈಗೆ ಕಲ್ಪನಾ ಚಾವ್ಲಾ ಯುವವಿಜ್ಞಾನಿ ಪ್ರಶಸ್ತಿ

Kasturirangan Report: ರಾಜ್ಯ, ಕೇಂದ್ರ ಸರಕಾರ ಜನರ ಆತಂಕ ದೂರ ಮಾಡಬೇಕು: ಕೋಟ

Kasturirangan Report: ರಾಜ್ಯ, ಕೇಂದ್ರ ಸರಕಾರ ಜನರ ಆತಂಕ ದೂರ ಮಾಡಬೇಕು: ಕೋಟ

Jigani:ಪೊಲೀಸರಿಂದ ಕಾರ್ಯಾಚರಣೆ: ಹಿಂದೂ ಹೆಸರಲ್ಲಿ ವಾಸವಿದ್ದ ಮತ್ತೆ 3 ಪಾಕ್‌ ಪ್ರಜೆಗಳ ಸೆರೆ

Jigani:ಪೊಲೀಸರಿಂದ ಕಾರ್ಯಾಚರಣೆ: ಹಿಂದೂ ಹೆಸರಲ್ಲಿ ವಾಸವಿದ್ದ ಮತ್ತೆ 3 ಪಾಕ್‌ ಪ್ರಜೆಗಳ ಸೆರೆ

By Election: ಬಿಜೆಪಿ ಉಸ್ತುವಾರಿಯಾಗಿ ಕೋಟ ಶ್ರೀನಿವಾಸ ಪೂಜಾರಿ

By Election: ಬಿಜೆಪಿ ಉಸ್ತುವಾರಿಯಾಗಿ ಕೋಟ ಶ್ರೀನಿವಾಸ ಪೂಜಾರಿ

chalavadi

Mysuru Dasara ವೇದಿಕೆ ರಾಜಕೀಯಕ್ಕೆ ಸಲ್ಲ: ಛಲವಾದಿ ನಾರಾಯಣ ಸ್ವಾಮಿ ಕಿಡಿ

PSI: ಪರೀಕ್ಷೆಗೆ ಶೇ.35.5 ಮಂದಿ ಗೈರು; ಹಾಜರಿ 43,250, ಗೈರು ಹಾಜರಿ 23740

PSI: ಪರೀಕ್ಷೆಗೆ ಶೇ.35.5 ಮಂದಿ ಗೈರು; ಹಾಜರಿ 43,250, ಗೈರು ಹಾಜರಿ 23740

CM Siddaramaiah ವಿರುದ್ಧ ಇ.ಡಿ.ಗೆ ದಾಖಲೆ ಸಲ್ಲಿಸಿದ ಸ್ನೇಹಮಯಿ ಕೃಷ್ಣ

CM Siddaramaiah ವಿರುದ್ಧ ಇ.ಡಿ.ಗೆ ದಾಖಲೆ ಸಲ್ಲಿಸಿದ ಸ್ನೇಹಮಯಿ ಕೃಷ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಇವತ್ತು ಅಥವಾ ನಾಳೆ ಈ ರಾಜ್ಯದ ಸಿಎಂ ಆಗುವವನು ನಾನು: ಜಗದೀಶ್

BBK11: ಇವತ್ತು ಅಥವಾ ನಾಳೆ ಈ ರಾಜ್ಯದ ಸಿಎಂ ಆಗುವವನು ನಾನು: ಜಗದೀಶ್

Zebra Movie:  ಡಾಲಿ ‘ಜೀಬ್ರಾ’ಗೆ ಶಿವಣ್ಣ ಸಾಥ್‌

Zebra Movie: ಡಾಲಿ ‘ಜೀಬ್ರಾ’ಗೆ ಶಿವಣ್ಣ ಸಾಥ್‌

14

Paru Parvathy Movie: ಇನ್ಫಿನಿಟಿ ರೋಡ್‌ನ‌ಲ್ಲಿ ಪಾರ್ವತಿ!

Bhairadevi Movie: ಇಂದು ಭೈರಾದೇವಿ ತೆರೆಗೆ

Bhairadevi Movie: ಇಂದು ಭೈರಾದೇವಿ ತೆರೆಗೆ

Rachita Ram: ಇಂದು ರಚಿತಾ ರಾಮ್‌ ಬರ್ತ್‌ಡೇ

Rachita Ram: ಇಂದು ರಚಿತಾ ರಾಮ್‌ ಬರ್ತ್‌ಡೇ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-tree

Junior World Shooting: ಖುಷಿಗೆ ಕಂಚು

ಡಾ| ಸಂಧ್ಯಾ ಶೆಣೈಗೆ ಕಲ್ಪನಾ ಚಾವ್ಲಾ ಯುವವಿಜ್ಞಾನಿ ಪ್ರಶಸ್ತಿ

State Govt: ಡಾ| ಸಂಧ್ಯಾ ಶೆಣೈಗೆ ಕಲ್ಪನಾ ಚಾವ್ಲಾ ಯುವವಿಜ್ಞಾನಿ ಪ್ರಶಸ್ತಿ

1-frrr

Irani Cup:ಅಭಿಮನ್ಯು ಅಜೇಯ 151 ರನ್‌: 102 ಡಿಗ್ರಿ ಜ್ವರವಿದ್ದೂ ಶಾರ್ದೂಲ್‌ ಬ್ಯಾಟಿಂಗ್‌

Kasturirangan Report: ರಾಜ್ಯ, ಕೇಂದ್ರ ಸರಕಾರ ಜನರ ಆತಂಕ ದೂರ ಮಾಡಬೇಕು: ಕೋಟ

Kasturirangan Report: ರಾಜ್ಯ, ಕೇಂದ್ರ ಸರಕಾರ ಜನರ ಆತಂಕ ದೂರ ಮಾಡಬೇಕು: ಕೋಟ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.