ಓದಿದ್ದು ಎಸ್ಸೆಸ್ಸೆಲ್ಸಿ ಆಗಿದ್ದು ಡಿಸಿ!

Team Udayavani, Feb 18, 2019, 5:26 AM IST

sathish.jpg

“ನಾನು ಓದಿರೋದು ಎಸ್ಸೆಸ್ಸೆಲ್ಸಿ. ಆದರೆ, ತೆರೆ ಮೇಲೆ ನಾನೊಬ್ಬ ಐಎಎಸ್‌ ಅಧಿಕಾರಿ…’  ಹೀಗೆ ಹೇಳಿದ್ದು ಬೇರಾರೂ ಅಲ್ಲ, ನಟ ನೀನಾಸಂ ಸತೀಶ್‌. ಅಷ್ಟಕ್ಕೂ ಸತೀಶ್‌ ಹೀಗೆ ಹೇಳಿಕೊಳ್ಳಲು ಕಾರಣ, “ಚಂಬಲ್‌’ ಚಿತ್ರ. ಹೌದು, ಈ ಚಿತ್ರದಲ್ಲಿ ಸತೀಶ್‌ ಜಿಲ್ಲಾಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ಅಷ್ಟಕ್ಕೂ ಅವರು ಕಡಿಮೆ ಓದಿದ ಬಗ್ಗೆ ಮಾತೇಕೆ ಬಂತು ಎಂಬ ಪ್ರಶ್ನೆಗೆ, ಅವರು “ಚಂಬಲ್‌’ ಟ್ರೇಲರ್‌ ನೋಡಿದಾಗ, “ಸಿನಿಮಾದಲ್ಲಿ ಡಿಸಿ ಪಾತ್ರಕ್ಕೆ ಸಾಕಷ್ಟು ರಿಸ್ಕ್ ತೆಗೆದುಕೊಂಡಿದ್ದಕ್ಕೂ ಸಾರ್ಥಕ’ ಅನಿಸಿತಂತೆ.

ಆ ಬಗ್ಗೆ ಹೇಳುತ್ತಲೇ, “ಅಣ್ಣಾವ್ರು ಒಂದು ಕಡೆ ಮಾತನಾಡುತ್ತ ಹೇಳಿಕೊಂಡಿದ್ದರು. ನಾನು ಓದಿದ್ದು ಮೂರನೇ ಕ್ಲಾಸು. ಆದರೆ, ನನ್ನನ್ನು ಜೇಮ್ಸ್‌ ಬಾಂಡ್‌ ಆಗಿ, ಪೊಲೀಸ್‌ ಅಧಿಕಾರಿಯಾಗಿ, ಲೆಕ್ಚರರ್‌ ಆಗಿ ತೋರಿಸಿದ್ದಾರೆ’ ಅಂದಿದ್ದರು. ನನಗೆ ಅವರ ಮಾತುಗಳು ಈ ಚಿತ್ರದ ಪಾತ್ರ ಮಾಡಿದಾಗ ನೆನಪಾಗುತ್ತವೆ. ಯಾಕೆಂದರೆ, ನಾನು ಓದಿರೋದು ಎಸ್ಸೆಸ್ಸೆಲ್ಸಿ. ಆದರೆ, ಈ ಚಿತ್ರದಲ್ಲಿ ನಾನು ಐಎಎಸ್‌ ಅಧಿಕಾರಿಯಾಗಿ ನಟಿಸಿದ್ದೇನೆ.

ನಿಜ ಹೇಳುವುದಾದರೆ, ನಿಜ ಬದುಕಲ್ಲಿ ನಾನು ಓದಿರುವುದಕ್ಕೆ ಸರ್ಕಾರಿ ಕಂಡಕ್ಟರ್‌ ಕೆಲಸವೂ ಸಿಗುವುದಿಲ್ಲ. ರೀಲ್‌ ಲೈಫ್ನಲ್ಲಿ ಜಿಲ್ಲಾಧಿಕಾರಿಯಾಗಿದ್ದೇನೆ. ಈ ಚಿತ್ರದಲ್ಲಿ ಡಿಸಿ ಪಾತ್ರ ಮಾಡುವಾಗ, ಅವರು ಎಷ್ಟೊಂದು ಓದಿರುತ್ತಾರೆ, ಏನೆಲ್ಲಾ ವಿಷಯ ತಿಳಿದುಕೊಂಡಿರುತ್ತಾರೆ, ಅವರ ಪವರ್‌ ಎಷ್ಟೆಲ್ಲಾ ಇರುತ್ತೆ ಅನ್ನೋದು ಗೊತ್ತಾಯ್ತು. ಮಿನಿಸ್ಟರ್‌ ಬಿಟ್ಟರೆ, ಐಎಎಸ್‌ ಅಧಿಕಾರಿಗಳಿಗೆ ಏನೇ ಆದೇಶ, ಸೂಚನೆ ನೀಡುವುದಕ್ಕೆ ಪವರ್‌ ಇರುತ್ತೆ.

ನಾನು ಚಿತ್ರದಲ್ಲಿ ಸುಭಾಶ್‌ ಎಂಬ ಪಾತ್ರ ಮಾಡಿದ್ದೇನೆ. ಹಾಗೆ ನೋಡಿದರೆ, “ಚಂಬಲ್‌’ ಶೀರ್ಷಿಕೆಗೂ ಮುನ್ನ, “ಸುಭಾಶ್‌’ ಎಂಬ ಶೀರ್ಷಿಕೆ ಇಡಬೇಕಾಗಿತ್ತು. ಆದರೆ, ಅದು ಸಿಗದ ಕಾರಣ, “ಚಂಬಲ್‌’ ಎಂದು ಇಡಲಾಗಿದೆ’ ಎಂದು ಹೇಳಿಕೊಳ್ಳುತ್ತಾರೆ ಸತೀಶ್‌. ಹಾಗಾದರೆ, ಇದು ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಕುರಿತಾದ ಕಥೆ ಹೊಂದಿದೆಯಾ? ಈ ಪ್ರಶ್ನೆಗೆ, ಅಂಥದ್ದೇನೂ ಇಲ್ಲ. ಎನ್ನುವ ಸತೀಶ್‌, “ಅವರ ಕಥೆಯಲ್ಲ.

ಈ ಚಿತ್ರ ನೋಡಿದವರಿಗೆ ಇದು ಯಾವ ರೀತಿಯ ಚಿತ್ರ ಅನ್ನೋದು ಗೊತ್ತಾಗುತ್ತೆ. ಯಾರಿಗೆಲ್ಲಾ ಗೌರವ ಸಲ್ಲಬೇಕೋ ಅದು ಸಲ್ಲುತ್ತದೆ. ಎಲ್ಲರೂ ಇದನ್ನು ಒಂದು ಸಿನಿಮಾವಾಗಿ ನೋಡಿ. ಆದರೆ, ಇದನ್ನು ವ್ಯಕ್ತಿ ಕುರಿತ ಚಿತ್ರಣ ಅಂತ ದಯವಿಟ್ಟು ಬಿಂಬಿಸಬೇಡಿ’ ಎಂಬ ಮನವಿ ಇಡುತ್ತಾರೆ ಸತೀಶ್‌. “ಚಂಬಲ್‌’ ಫೆಬ್ರವರಿ 22 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಚಿತ್ರವನ್ನು ಗೋಕುಲ್‌ ಫಿಲ್ಮ್ಸ್ ವಿತರಣೆ ಮಾಡುತ್ತಿದೆ. ಗೋಕುಲ್‌ರಾಜ್‌ ಸಹೋದರರು ಈ ಚಿತ್ರ ವೀಕ್ಷಿಸಿ, ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರಂತೆ. “ಚಂಬಲ್‌’ ಚಿತ್ರ ವಿತರಣೆಗೆ ಮುಂದಾಗಲು ಕಾರಣ, ಚಿತ್ರದ ಕೊನೆಯ ಇಪ್ಪತ್ತು ನಿಮಿಷಗಳ ಕ್ಲೈಮ್ಯಾಕ್ಸ್‌ ಎಂಬುದು ಅವರ ಮಾತು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.