ಏಪ್ರಿಲ್‌ನಿಂದ ಸ್ಟಾರ್ಸ್ ದರ್ಬಾರ್
ಏಪ್ರಿಲ್ 23ಕ್ಕೆ ರಾಬರ್ಟ್ ರಿಲೀಸ್ ಮಾಡುತ್ತೇವೆ: ನಿರ್ಮಾಪಕ ಉಮಾಪತಿ ಶ್ರೀನಿವಾಸ್
Team Udayavani, Jan 6, 2021, 11:43 AM IST
ಎಂಟತ್ತು ತಿಂಗಳುಗಳಿಂದ ಯಾವುದೇ ಸ್ಟಾರ್ ಸಿನಿಮಾಗಳನ್ನುಕಣ್ತುಂಬಿಕೊಳ್ಳದೇಬೇಸರದಲ್ಲಿರುವ ಪ್ರೇಕ್ಷಕರಿಗೆ ಏಪ್ರಿಲ್ ತಿಂಗಳುಹಬ್ಬವಾಗುವ ಲಕ್ಷಣಗಳು ಕಾಣುತ್ತಿವೆ. ಅದು ಸಿನಿಹಬ್ಬ. ಅದಕ್ಕೆ ಕಾರಣ ಸ್ಟಾರ್ ಗಳು. ಹೌದು, ಏಪ್ರಿಲ್‌ನಲ್ಲಿ ಬಹುತೇಕ ಸ್ಟಾರ್ ಗಳ ಸಿನಿಮಾಗಳು ಬಿಡುಗಡೆಯಾಗುತ್ತಿದೆ.
ಈಗಾಗಲೇ ಪುನೀತ್ ರಾಜ್‌ಕುಮಾರ್ ಅವರ”ಯುವರತ್ನ’ ಚಿತ್ರ ಏಪ್ರಿಲ್ ರಂದು ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದೆ. ಈ ಮಧ್ಯೆಯೇಸುದೀಪ್ ಅವರ “ಕೋಟಿಗೊಬ್ಬ-3′ ಚಿತ್ರ ಕೂಡಾ ಏಪ್ರಿಲ್ 23ಕ್ಕೆ ತೆರೆಕಾಣಲಿದೆ. ಈ ವಿಷಯವನ್ನು ನಿರ್ಮಾಪಕ ಸೂರಪ್ಪ ಬಾಬು ಅವರೇ ಸ್ಪಷ್ಟಪಡಿಸಿದ್ದಾರೆ. ಇದಲ್ಲದೇ ಏಪ್ರಿಲ್‌ನಲ್ಲಿ “ರಾಬರ್ಟ್’ ಚಿತ್ರ ಕೂಡಾ ತೆರೆಕಾಣಲಿದೆ.
ಏಪ್ರಿಲ್ 23ರಂದು ಚಿತ್ರ ತೆರೆಗೆ ತರುವುದಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ಅವರು, “ಏಪ್ರಿಲ್ 23ಕ್ಕೆ ಚಿತ್ರ ತೆರೆಗೆ ತರಬೇಕೆಂದಿದ್ದೇವೆ. ಆ ಕುರಿತಾದ ತಯಾರಿ ನಡೆಯುತ್ತಿದೆ’ ಎನ್ನುತ್ತಾರೆ. ಇನ್ನು ಅದೇ ದಿನ “ಕೋಟಿಗೊಬ್ಬ-3′ ಚಿತ್ರವೂ ಬಿಡುಗಡೆಯನ್ನು ಘೋಷಿಸಿಕೊಂಡಿದೆ. ಈ ಬಗ್ಗೆ ಮಾತನಾಡುವ ಅವರು, “ನಾವು ಏ.23ಕ್ಕೆ ಬರಲು ನಿರ್ಧರಿಸಿದ್ದೇವೆ.
“ಕೋಟಿಗೊಬ್ಬ-3′ ಕೂಡಾ ಅದೇ ದಿನ ಬರುವುದಾಗಿ ಹೇಳಿಕೊಂಡಿದ್ದಾರೆ. ಒಂದು ವೇಳೆ ಆ ತರಹ ಆದರೆ, ನಾವು ನಿರ್ಮಾಪಕರು ಕುಳಿತುಮಾತನಾಡಿ, ಒಂದು ನಿರ್ಧಾರಕ್ಕೆ ಬರುತ್ತೇವೆ. ಏಕೆಂದರೆ ಎಲ್ಲರೂ ಸ್ನೇಹಿತರೇ’ ಎನ್ನುತ್ತಾರೆ ಶ್ರೀನಿವಾಸ್. ಇದಲ್ಲದೇ, “ಸಲಗ’, “ಭಜರಂಗಿ-2′,”ಮದಗಜ’, “ಕೆಜಿಎಫ್-2′”ಬುದ್ಧಿವಂತ-2′ ಸೇರಿದಂತೆ ಇನ್ನೊಂದಿಷ್ಟು ಸ್ಟಾರ್ ಸಿನಿಮಾಗಳು ಏಪ್ರಿಲ್, ಮೇನಲ್ಲಿ ತೆರೆಕಾಣಲಿವೆ. ಸಾಲುಸಾಲು ಸ್ಟಾರ್ ಸಿನಿಮಾಗಳು ದೊಡ್ಡ ಸಂಖ್ಯೆಯ ಚಿತ್ರಮಂದಿರಗಳನ್ನು ಆವರಿಸಿಕೊಳ್ಳುವುದರಿಂದ ಮುಂದೆ ಥಿಯೇಟರ್ ಸಮಸ್ಯೆ, ಬಿಡುಗಡೆ ಗೊಂದಲ ಎದುರಾಗುವ ಸಾಧ್ಯತೆಯೂ ಇದೆ.
ಆದರೆ, ಸ್ಟಾರ್ ಸಿನಿಮಾಗಳ ನಿರ್ಮಾಪಕರು ಈಗಾಗಲೇ ಸಭೆ ನಡೆಸಿ, ಮೂರು ವಾರಗಳ ಗ್ಯಾಪ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಕುರಿತುಮಾತುಕತೆ ನಡೆಸಿದ್ದಾರೆ. ಇದು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದರೆ ಯಾವುದೇ ಸಮಸ್ಯೆ ಇಲ್ಲದೇ ಸಿನಿಮಾ ಪ್ರದರ್ಶನ ಕಾಣಬಹುದು.
ರಾಬರ್ಟ್ ಚಿತ್ರವನ್ನು ಏ.23ಕ್ಕೆ ಬರಲು ನಿರ್ಧರಿಸಿದ್ದೇವೆ. “ಕೋಟಿಗೊಬ್ಬ-3′ ಕೂಡಾ ಅದೇ ದಿನ ಬರುವುದಾಗಿ ಹೇಳಿಕೊಂಡಿದ್ದಾರೆ. ಒಂದು ವೇಳೆ ಆ ತರಹ ಆದರೆ, ನಾವು ನಿರ್ಮಾಪಕರು ಕುಳಿತು ಮಾತನಾಡಿ, ಒಂದು ನಿರ್ಧಾರಕ್ಕೆ ಬರುತ್ತೇವೆ. ಏಕೆಂದರೆ ಎಲ್ಲರೂ ಸ್ನೇಹಿತರೇ. – ಉಮಾಪತಿ ಶ್ರೀನಿವಾಸ್ ಗೌಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.