“ದಬಾಂಗ್’ನಲ್ಲಿ ಸುದೀಪ್ ಬಲ್ಲಿ ಸಿಂಗ್
ಪೋಸ್ಟರ್ ಹಂಚಿಕೊಂಡ ಸಲ್ಮಾನ್ ಖಾನ್
Team Udayavani, Oct 9, 2019, 3:05 AM IST
ಸಲ್ಮಾನ್ ಖಾನ್ ಅಭಿನಯದ “ದಬಾಂಗ್-3′ ಚಿತ್ರದಲ್ಲಿ ನಟ ಸುದೀಪ್ ವಿಲನ್ ಪಾತ್ರ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ. ಆದರೆ, ಸುದೀಪ್ ಅವರ ಗೆಟಪ್, ಲುಕ್ ಹೇಗಿರುತ್ತದೆ ಎಂಬ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲವಿತ್ತು. ಈಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಕುತೂಹಲಕ್ಕೆ ಉತ್ತರ ನೀಡಿರೋದು ಬೇರಾರು ಅಲ್ಲ, “ದಬಾಂಗ್-3′ ಚಿತ್ರದ ಹೀರೋ ಸಲ್ಮಾನ್ ಖಾನ್! ಹೌದು, ಹೀಗೆಂದರೆ ನಿಮಗೆ ಆಶ್ವರ್ಯವಾಗಬಹುದು.
Villain jitna bada ho, usse bhidne mein utna hi mazaa aata hai.
Introducing Sudeep Kiccha as Balli in ‘Dabangg 3’.#KicchaSudeepInDabangg3@KicchaSudeep @arbaazSkhan @sonakshisinha @saieemmanjrekar @PDdancing @nikhil_dwivedi @SKFilmsOfficial @saffronbrdmedia pic.twitter.com/vvZYvroHYF— Chulbul Pandey (@BeingSalmanKhan) October 8, 2019
ಆದರೂ ಸತ್ಯ. ಚಿತ್ರದ ಸುದೀಪ್ ಪಾತ್ರದ ಪರಿಚಯವನ್ನು ಸ್ವತಃ ಸಲ್ಮಾನ್ ಖಾನ್ ಮಾಡಿದ್ದು, ಪೋಸ್ಟರ್ ಹಂಚಿಕೊಂಡು, ಚಿತ್ರದಲ್ಲಿ ಸುದೀಪ್ ಬಲ್ಲಿ ಸಿಂಗ್ ಎಂಬ ಪಾತ್ರ ಮಾಡುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ವಿಲನ್ ಎಷ್ಟೇ ಬಲಶಾಲಿಯಾಗಿದ್ದರೂ ಆತನನ್ನು ಆಟವಾಡಿಸೋದರಲ್ಲಿ ಇರೋ ಮಜಾನೇ ಬೇರೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಸುದೀಪ್ ಕೂಡಾ ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿ, “ದಬಾಂಗ್-3′ ಸಿನಿಮಾದಲ್ಲಿ ನಟಿಸಿದ ಖುಷಿ ಹಂಚಿಕೊಂಡಿದ್ದಾರೆ. ಜೊತೆಗೆ “ವಿಲನ್‌ಗೆ ಹೀರೋ ಮೇಲೆ ಪ್ರೀತಿಯಾಗಿದೆ’ ಎನ್ನುತ್ತಾ ಸಲ್ಮಾನ್ ಖಾನ್ ಜೊತೆ ನಟಿಸಿದ ಅನುಭವವನ್ನು ಬರೆದುಕೊಂಡಿದ್ದಾರೆ.
This’s one sch moment where BHIDNE ki baath hi nahi aatha hai SIR. Problem yeh hai ki villan ko tho hero se pyaar ho jatha hai.?
Its been Wondeful working n sharing space. All the moments shared are priceless n Wil be Treasured.
Thank u @BeingSalmanKhan sir?????.
BalliSingh. https://t.co/srJ1x1Uo2N— Kichcha Sudeepa (@KicchaSudeep) October 8, 2019
ಅಂದಹಾಗೆ, “ದಬಾಂಗ್-3′ ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದು, ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಈ ಹಿಂದೆ ಸುದೀಪ್, ಸಲ್ಮಾನ್ ಚಿತ್ರದಲ್ಲಿ ನಟಿಸುತ್ತಾರೆಂದು ಸುದ್ದಿಯಾಗಿತ್ತಾದರೂ ಅದು ಆಗಿರಲಿಲ್ಲ. ಈಗ “ದಬಾಂಗ್-3′ ಚಿತ್ರದ ಮೂಲಕ ಅದು ಸಾಧ್ಯವಾಗಿದೆ. ಚಿತ್ರ ಡಿಸೆಂಬರ್ 20ರಂದು ತೆರೆಕಾಣುತ್ತಿದೆ. ಸದ್ಯ ಸುದೀಪ್ ನಟನೆಯ “ಪೈಲ್ವಾನ್’ ಚಿತ್ರ ಪ್ರದರ್ಶನ ಕಾಣುತ್ತಿದ್ದು, “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ಬಿಝಿಯಾಗಿದೆ.
Presenting Balli Singh.#Dabangg3
Christmas 2019 release.
Thank u Prabhu sir n th whole team for ur wonderful hospitality n gestures.
Mch luv n hugs to all. ?????? pic.twitter.com/AI0WJVPjE6— Kichcha Sudeepa (@KicchaSudeep) October 8, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.