ದರ್ಶನ್ ಮಾತಿಗೆ ಸುದೀಪ್ ಅಭಿಮಾನಿಗಳ ಆಕ್ರೋಶ
ಮತ್ತೆ ಶುರುವಾಗುತ್ತಾ ಫ್ಯಾನ್ಸ್ ವಾರ್?
Team Udayavani, Aug 5, 2019, 3:00 AM IST
ದರ್ಶನ್ ಹೇಳಿದ ಆ ಒಂದು ಮಾತಿಗೆ ಇದೀಗ ಸುದೀಪ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆ ನೀಡುವಲ್ಲಿ ನಿರತರಾಗಿದ್ದಾರೆ. ‘ಇಷ್ಟಾದ ಮೇಲೂ ದರ್ಶನ್ ಅವರ ಬಗ್ಗೆ ಇನ್ನು ಮೇಲೆ ಏನನ್ನೂ ಹೇಳಬೇಡಿ…’ ಎಂದು ಅನೇಕ ಅಭಿಮಾನಿಗಳು ಟ್ವೀಟರ್ ಮೂಲಕ ಸುದೀಪ್ ಅವರಿಗೆ ಹೇಳುತ್ತಿದ್ದಾರೆ. ಸದ್ಯಕ್ಕೆ ಸುದೀಪ್ ಅಭಿಮಾನಿಗಳು ಹಾಕುತ್ತಿರುವ ಕಾಮೆಂಟ್ಸ್ ನೋಡಿದರೆ, ಪುನಃ ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ವಾರ್ ಶುರುವಾಗುತ್ತಾಾ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಮನೆ ಮಾಡಿದೆ.
ಅಷ್ಟಕ್ಕೂ ನಡೆದಿದ್ದೇನು? ‘ಕುರುಕ್ಷೇತ್ರ’ ಚಿತ್ರದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ‘ಅಂಬರೀಶ್ ಹಾಗೂ ವಿಷ್ಣುವರ್ಧನ್ ರೀತಿಯೇ, ಸುದೀಪ್ ಮತ್ತು ದರ್ಶನ್ ಕೂಡ ಇರಬೇಕು ಎಂಬುದು ಇಂಡಸ್ಟ್ರಿಯ ಆಸೆ. ಆದರೆ, ಇಬ್ಬರ ನಡುವೆ ಮುನಿಸಿತ್ತು. ಇತ್ತೀಚೆಗೆ ಸುದೀಪ್ ಅವರು ಕೂಡ ನಿಮ್ಮ ಗೆಳೆತನ ಬಗ್ಗೆ ಮಾತನಾಡಿದ್ದರು. ನೀವು ಅವರ ಸ್ನೇಹದ ಬಗ್ಗೆ ಏನು ಹೇಳ್ತೀರಿ?’ ಎಂಬ ಪ್ರಶ್ನೆಯನ್ನು ದರ್ಶನ್ ಅವರ ಮುಂದಿಡಲಾಗಿತ್ತು. ಆ ಪ್ರಶ್ನೆಗೆ ದರ್ಶನ್ ಉತ್ತರ ಹೀಗಿತ್ತು.
‘ಇನ್ಮೇಲೆ ದರ್ಶನ್ ಬೆಳಗ್ಗೆ ಎಷ್ಟೊತ್ತಿಗೆ ಎದ್ದೇಳಬೇಕು, ಏನೇನು ತಿನ್ನಬೇಕು, ಯಾರ ಫೋನ್ ಎತ್ತಬೇಕು, ಯಾರ ಫೋನ್ ಎತ್ತಬಾರದು, ಯಾರ ಜೊತೆ ಫ್ರೆಂಡ್‌ಶಿಪ್ ಮಾಡಬೇಕು, ಮಾಡಬಾರದು, ರಾತ್ರಿ ಅವನ ಹೆಂಡತಿ ಜೊತೆ ಮಲಗಬೇಕಾ? ಮಲಗಬಾರದಾ ಎನ್ನುವುದನ್ನು ಮಾಧ್ಯಮದವರು ಡಿಸೈಡ್ ಮಾಡ್ತೀರಾ? ಅದು ನನ್ನ ವೈಯಕ್ತಿಕ ವಿಷಯ. ನನಗೆ ಗೊತ್ತು.’ ಎಂದು ಪ್ರತಿಕ್ರಿಯಿಸಿದ್ದರು.
ದರ್ಶನ್ ಅವರ ಈ ಮಾತು ಹೊರಬರುತ್ತಿದ್ದಂತೆಯೇ, ಸಾಮಾಜಿಕ ತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗೋಯ್ತು. ಸಾಕಷ್ಟು ಚರ್ಚೆಗಳು ನಡೆದವು. ಅತ್ತ ಸುದೀಪ್ ಅಭಿಮಾನಿಗಳು ಸಹ, ಮೆಲ್ಲನೆ, ಸೋಶಿಯಲ್ ಮೀಡಿಯಾಗಳಲ್ಲಿ ದರ್ಶನ್ ಮಾತಿಗೆ ಬೇಸರ ವ್ಯಕ್ತಪಡಿಸಿದ್ದಲ್ಲದೆ, ಸುದೀಪ್ ಅವರಿಗೂ, ‘ಅಣ್ಣಾ ಇನ್ನು ಮುಂದೆ ಅವರ ಕುರಿತು ಏನನ್ನೂ ಮಾತನಾಡಬೇಡಿ. ಸ್ನೇಹದ ಬಗ್ಗೆ ಕೇಳಿದರೆ, ಏನೇನೋ ಮಾತಾಡುತ್ತಾರೆ.
ದಯವಿಟ್ಟು, ತೀರಾ ಒಳ್ಳಯರಾಗಬೇಡಿ’ ಎಂದು ಮನವಿ ಮಾಡಿದ್ದಾರೆ. ಅದೇನೆ ಇರಲಿ, ‘ಫ್ರೆಂಡ್‌ಶಿಪ್ ಡೇ’ ಸಂದರ್ಭದಲ್ಲೇ ಪುನಃ ಹೀಗೆಲ್ಲಾ ಆಗೋಯ್ತಾ ಎಂಬ ಪ್ರಶ್ನೆಯೊಂದು ಅನೇಕರಲ್ಲಿ ಗಿರಕಿ ಹೊಡೆಯುತ್ತಿರುವುದಂತೂ ನಿಜ. ಅಷ್ಟಕ್ಕೂ ದರ್ಶನ್ ಮಾತಿನ ಅರ್ಥ ಏನಾಗಿತ್ತು? ಎಂಬುದೇ ಈಗ ಉಳಿದಿರುವ ಪ್ರಶ್ನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.