ಪೈಲ್ವಾನ್ ಅನುಭವಕ್ಕೆ ಅಕ್ಷರ ರೂಪ ಕೊಟ್ಟ ಕಿಚ್ಚ
Team Udayavani, Dec 6, 2018, 11:06 AM IST
ಸುದೀಪ್ ಅಭಿನಯದ “ಪೈಲ್ವಾನ್’ ಚಿತ್ರದ ಚಿತ್ರೀಕರಣ ಅಂತಿಮ ಘಟ್ಟ ತಲುಪಿದೆ. ಇದೇ ವೇಳೆ ಸುದೀಪ್ “ಪೈಲ್ವಾನ್’ ಚಿತ್ರದ ಚಿತ್ರೀಕರಣ ಮತ್ತದರ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದು ಅವರದ್ದೇ ಮಾತುಗಳಲ್ಲಿ …
“ಸುಮಾರು 23 ವರ್ಷಗಳ ಚಿತ್ರ ಬದುಕಿನಲ್ಲಿ ಅದ್ಭುತವೆನಿಸುವ ಹೊಸಥರದ ಅನುಭವವನ್ನು ಫೈಲ್ವಾನ್ ಚಿತ್ರ ಕೊಟ್ಟಿದೆ. ಇಲ್ಲಿಯವರೆಗೆ ಬಾಕ್ಸಿಂಗ್ ಮತ್ತು ಕುಸ್ತಿಗೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ನೋಡಿ ಖುಷಿಪಟ್ಟಿದ್ದೆ. ಆದೆರೆ ನಾನಾಗಿಯೇ ಯಾವತ್ತೂ ಈ ಎರಡೂ ಕ್ರೀಡೆಗಳ ಭಾಗವಾಗಿರಲಿಲ್ಲ.
ಈಗ ಅಂಥದ್ದೊಂದು ಅದೃಷ್ಟವನ್ನು “ಪೈಲ್ವಾನ್’ ಚಿತ್ರ ತಂದುಕೊಟ್ಟಿದೆ. ಸುಮಾರು ಎಂಟು ವಾರಗಳ ಬಾಕ್ಸಿಂಗ್ ಮತ್ತು ಕುಸ್ತಿ ನನ್ನಿಂದ ಅತ್ಯುತ್ತಮವಾದುದನ್ನೇ ನಿರೀಕ್ಷಿಸುತ್ತಿತ್ತು. ಅದಕ್ಕೆ ಬೇಕಾದ ತಯಾರಿ ಕೂಡ ಸಾಕಷ್ಟಿತ್ತು. ಅದೆಲ್ಲದರ ಪ್ರತಿ ಕ್ಷಣವನ್ನು ನಾನು ಖುಷಿಯಿಂದ ಅನುಭವಿಸಿದ್ದೇನೆ.” ಪೈಲ್ವಾನ್’ ಸಾಕಷ್ಟು ಸುಮಧುರ ನೆನಪುಗಳನ್ನು ಕಟ್ಟಿಕೊಟ್ಟಿದೆ.
ಚಿತ್ರ ಮುಗಿಯುತ್ತಿದ್ದಂತೆ ಸಾಕಷ್ಟು ಜನರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕೊನೆಗೂ ಅಂದುಕೊಂಡಂತೆ ಸಾಧಿಸಿರುವುದಕ್ಕೆ ಹೆಮ್ಮೆ ಇದೆ’ಎಂದಿದ್ದಾರೆ ಸುದೀಪ್. ಇದೇ ವೇಳೆ ಇಂಥದ್ದೊಂದು ಅನುಭವ ಕೊಟ್ಟ ನಿರ್ದೇಶಕ ಕೃಷ್ಣ ಮತ್ತು ಚಿತ್ರದ ಸಾಹಸ ನಿರ್ದೇಶಕರು, ಇತರೆ ಕಲಾವಿದರು ಮತ್ತು ತಂತ್ರಜ್ಞರನ್ನು ನೆನೆದಿರರುವ ಸುದೀಪ್ ಪೈಲ್ವಾನ್ ಚಿತ್ರಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.