ಅಮಿತಾಬ್ ಚಿತ್ರದಲ್ಲಿ ಸುದೀಪ್
Team Udayavani, Dec 4, 2017, 11:08 AM IST
ಸುದೀಪ್ ಈಗಾಗಲೇ ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ವಿಚಾರ ನಿಮಗೆ ಗೊತ್ತೇ ಇದೆ. “ರಣ್’, “ಫೂಂಕ್’, “ರಕ್ತಚರಿತ್ರ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಮತ್ತೆ ಸುದೀಪ್ ಅವರಿಗೆ ಎರಡು ಹಿಂದಿ ಸಿನಿಮಾಗಳಿಂದ ಆಫರ್ ಬಂದಿದೆ. ಅವೆರಡೂ ದೊಡ್ಡ ಪ್ರಾಜೆಕ್ಟ್ಗಳೆಂಬುದು ವಿಶೇಷ. ಅಮಿತಾಬ್ ಬಚ್ಚನ್ ನಟನೆಯ ಒಂದು ಸಿನಿಮಾ ಹಾಗೂ ರೋಹಿತ್ ಶೆಟ್ಟಿ ನಿರ್ದೇಶನದ ಸಿನಿಮಾವೊಂದರಿಂದ ಸುದೀಪ್‌ಗೆ ಆಫರ್ ಬಂದಿದೆ.
ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ಅಂತಿಮವಾಗಲಿದೆ. ಸುದೀಪ್ ಈಗಾಗಲೇ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದಾರೆ. ಈಗ ಮತ್ತೂಮ್ಮೆ ಆಫರ್ ಬಂದಿದೆ. ಈ ಬಾರಿ ಮೂರು ಭಾಷೆಯಲ್ಲಿ ತಯಾರಾಗುತ್ತಿರುವ ಸಿನಿಮಾ ಇದಾಗಿದ್ದು, ಹಿಂದಿ, ತಮಿಳು, ಮಲಯಾಳಂನಲ್ಲಿ ಈ ಚಿತ್ರ ತಯಾರಾಗಲಿದೆ. ಅಂದಹಾಗೆ, ಇದೊಂದು ಪೌರಾಣಿಕ ಸಿನಿಮಾವಾಗಿದ್ದು, ಚಿತ್ರಕ್ಕೆ “ಕರ್ಣ’ ಎಂದು ಟೈಟಲ್ ಇಡಲಾಗಿದೆ.
ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಭೀಷ್ಮನ ಪಾತ್ರ ಮಾಡುತ್ತಿದ್ದು, ದುರ್ಯೋದನ ಅಥವಾ ಕರ್ಣನ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದು ಕೂಡಾ ಮಲ್ಟಿಸ್ಟಾರರ್ ಸಿನಿಮಾವಾಗಿದ್ದು, ಅಮಿತಾಬ್, ಸುದೀಪ್ ಅಲ್ಲದೇ, ತಮಿಳಿನ ವಿಕ್ರಮ್ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಸುದೀಪ್ ಅವರನ್ನು ಸಂಪರ್ಕಿಸಿದ್ದು, ಮಾತುಕತೆಯಲ್ಲಿದೆ.
ಇನ್ನು, ಹಿಂದಿಯಲ್ಲಿ “ಗೋಲ್‌ಮಾಲ್’, “ಸಿಂಗಂ’, “ಚೆನ್ನೈ ಎಕ್ಸ್‌ಪ್ರೆಸ್’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ರೋಹಿತ್ ಶೆಟ್ಟಿ ಹೊಸ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದು, ಆ ಚಿತ್ರದಿಂದಲೂ ಸುದೀಪ್ ಅವರಿಗೆ ಆಫರ್ ಬಂದಿದೆ. ಹಾಗಾದರೆ ಈ ಎರಡೂ ಹಿಂದಿ ಸಿನಿಮಾಗಳನ್ನು ಸುದೀಪ್ ಒಪ್ಪಿಕೊಳ್ಳುತ್ತಾರಾ ಎಂದರೆ ಡೇಟ್ ಮೇಲೆ ಅವಲಂಭಿತ ಎಂಬ ಉತ್ತರ ಬರುತ್ತದೆ.
ಸದ್ಯ ಸುದೀಪ್ “ದಿ ವಿಲನ್’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿಸಿದ್ದು, ಇನ್ನು ಹಾಡು ಹಾಗೂ ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿ ಇದೆ. ಇನ್ನು, “ಪೈಲ್ವಾನ್’ ಹಾಗೂ “ಕೋಟಿಗೊಬ್ಬ-3′ ಚಿತ್ರಗಳು ಚಿತ್ರೀಕರಣಕ್ಕೆ ರೆಡಿಯಾಗಿವೆ. ಈ ಎರಡೂ ಸಿನಿಮಾಗಳಿಗೆ ಸುದೀಪ್ ಹಂಚಿದ್ದಾರೆ. ಆ ಸಿನಿಮಾಗಳ ಚಿತ್ರೀಕರಣಕ್ಕೆ ತೊಂದರೆಯಾಗದಂತಿದ್ದರೆ ಹಿಂದಿ ಸಿನಿಮಾಗಳನ್ನು ಒಪ್ಪಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.