ಪ್ರತಿ ವಾರ ಅಡುಗೆ ಮಾಡ್ತಾರಾ ಸುದೀಪ್?
Team Udayavani, Oct 6, 2017, 11:47 AM IST
“ಬಿಗ್ ಬಾಸ್’ನ ಐದನೇ ಸೀಸನ್‌ನಲ್ಲಿ ಸುದೀಪ್ ಪ್ರತೀ ವಾರ ಅಡುಗೆ ಮಾಡುತ್ತಾರಾ? ಇಂಥದ್ದೊಂದು ಪ್ರಶ್ನೆ ಬರುವುದಕ್ಕೂ ಕಾರಣವಿದೆ. ಈ ಕಾರ್ಯಕ್ರಮದ ಎರಡನೆಯ ಪ್ರೋಮೋ ಇತ್ತೀಚೆಗೆ ಬಿಡುಗಡೆಯಾಗಿದೆ. ಆ ಪ್ರೋಮೋದಲ್ಲಿ ಸುದೀಪ್ ಮಾರುಕಟ್ಟೆಗೆ ಹೋಗಿ ತರಕಾರಿ ತರುವ ದೃಶ್ಯಗಳಿವೆ.
ಎಲ್ಲಾ ಬಿಟ್ಟು, ಸುದೀಪ್ ಯಾಕೆ ಹೋಗಬೇಕು ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೋದರೆ, ಒಂದು ಸರ್‌ಪ್ರೈಸ್ ಕಾದಿದೆ. ಮೂಲಗಳ ಪ್ರಕಾರ, ಈ ಬಾರಿ ಸುದೀಪ್ ಅವರು ಪ್ರತಿ ಭಾನುವಾರ “ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಅಡುಗೆ ಮಾಡುತ್ತಾರಂತೆ. ಅದಕ್ಕೆ ಸರಿಯಾಗಿ, ಸುದೀಪ್ ಅವರಿಗೆಂದೇ, ಒಂದು ಹೊಸ ಕಿಚನ್ ಸೆಟ್ ಸಹ ನಿರ್ಮಾಣವಾಗುತ್ತಿದೆಯಂತೆ. ಅದೇ ಈ ಸೀಸನ್‌ನ ಹೈಲೈಟ್ ಎಂದು ಹೇಳಲಾಗುತ್ತಿದೆ.
ಎಲ್ಲಾ ಸರಿ, ಸುದೀಪ್ ಅವರು ಅಡುಗೆ ಮಾಡುವುದು “ಬಿಗ್ ಬಾಸ್’ನ ಸ್ಪರ್ಧಿಗಳಿಗಾ ಅಥವಾ ಕಾರ್ಯಕ್ರಮಗಳಿಗೆ ಬರುವ ಅತಿಥಿಗಳಿಗಾ ಎಂಬ ಪ್ರಶ್ನೆ ಮೂಡಬಹುದು. ಈ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ, ಕಾರ್ಯಕ್ರಮ ಶುರುವಾಗುವವರೆಗೂ ಕಾಯಲೇಬೇಕು. ಅಂದ ಹಾಗೆ, “ಬಿಗ್ ಬಾಸ್’ನ ಐದನೇ ಸೀಸನ್ ಇದೇ ತಿಂಗಳ 15ರಂದು ಪ್ರಾರಂಭವಾಗಲಿದೆ. ಸಾಮಾನ್ಯವಾಗಿ “ಬಿಗ್ ಬಾಸ್’ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ರಾತ್ರಿ 8ರಿಂದ 9ಕ್ಕೆ ಪ್ರಸಾರವಾಗುತಿತ್ತು.
ಈ ಬಾರಿ ಒಂದು ದೊಡ್ಡ ಬದಲಾವಣೆಯೆಂದರೆ, ಕಾರ್ಯಕ್ರಮ ಕಲರ್ಸ್ ಸೂಪರ್ ಚಾನಲ್‌ನಲ್ಲಿ ರಾತ್ರಿ 8ರಿಂದ 9ರವರೆಗೂ ಪ್ರಸಾರವಾಗಲಿದೆ. ಅದೇ ಕಾರ್ಯಕ್ರಮವು ಕಲರ್ಸ್ ಎಚ್.ಡಿಯಲ್ಲಿ ಪುನಃ ಪ್ರಸಾರವಾಗಲಿದೆ. ಇನ್ನೂ ಒಂದು ವಿಶೇಷತೆಯೆಂದರೆ, ಈ ಬಾರಿ ಸ್ಪರ್ಧಿಗಳ ಪೈಕಿ ಕೆಲವು ಸಾಮಾನ್ಯ ವ್ಯಕ್ತಿಗಳೂ ಇರುತ್ತಾರಂತೆ. ಈಗಾಗಲೇ 40 ಸಾವಿರಕ್ಕೂ ಹೆಚ್ಚು ಜನ ವೀಡಿಯೋ ಅಪ್‌ಲೋಡ್ ಮಾಡಿದ್ದಾರಂತೆ.
ಆ ಪೈಕಿ ಹಲವರನ್ನು ಶಾರ್ಟ್‌ಲಿಸ್ಟ್ ಮಾಡಿ, ಸಂದರ್ಶನ ಮಾಡಿ, ಅದರಲ್ಲಿ ನಾಲ್ಕೈದು ಜನರನ್ನು ಮಾತ್ರ ಆಯ್ಕೆ ಮಾಡಲಾಗುತ್ತದಂತೆ. ಎಲ್ಲಾ ವಯೋಮಾನದ, ವಯಸ್ಸಿನ, ಸಂಸ್ಕೃತಿಯ ಸ್ಪರ್ಧಿಗಳೂ ಇಲ್ಲಿರುತ್ತಾರಂತೆ. ಇನ್ನು ಈ ಬಾರಿ ಮನೆಯನ್ನು ಮರುನವೀಕರಣಗೊಳಿಸಲಾಗಿದೆ. ಮನೆಯ ಇಂಟೀರಿಯರ್ ಡಿಸೈನ್ ಬದಲಾಗುತ್ತಿದೆ. ಈಗಾಗಲೇ ಅದರ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಬಾರಿಯ ವಿಶೇಷತೆಗಳು
ಚಾನಲ್: ಕಲರ್ಸ್ ಸೂಪರ್
ಸಮಯ: 8-9
ಸ್ಪರ್ಧಿಗಳು: ಸೆಲೆಬ್ರಿಟಿಗಳು ಮತ್ತು ಜನ ಸಾಮಾನ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.