ಹೊಸ ವರ್ಷಕ್ಕೆ ಸುದೀಪ್ ಮೊದಲ ಸಿನ್ಮಾ ಬಿಡುಗಡೆ
Team Udayavani, Dec 31, 2017, 11:00 AM IST
ಇನ್ನೇನು ಹೊಸ ವರ್ಷಕ್ಕೆ ಒಂದೇ ದಿನ ಬಾಕಿ. ಈ ಹೊಸ ವರ್ಷದಲ್ಲಿ ಈಗಾಗಲೇ ತಿಳಿದಿರುವಂತೆ ಸಾಲು ಸಾಲು ಸ್ಟಾರ್ ಚಿತ್ರಗಳು ಬಿಡುಗಡೆಯಾಗುತ್ತಿವೆ. ಸುದೀಪ್ ಅಭಿನಯದ ಚಿತ್ರವೊಂದು ಹೊಸ ವರ್ಷದ ಮೊದಲ ತಿಂಗಳಲ್ಲಿ ತೆರೆಕಾಣುತ್ತಿರುವುದು ವಿಶೇಷ. ಹೌದು. ಸುದೀಪ್, ಗುರುನಂದನ್ ಅಭಿನಯದ “ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ವಿಶೇಷ ಪಾತ್ರದ ಮೂಲಕ ಕಾಣಿಸಿಕೊಂಡಿದ್ದಾರೆ.
ಸುಮಾರು ನಾಲ್ಕು ದಿನಗಳ ಕಾಲ ಆ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸುದೀಪ್ ಅವರದು ಯಾವ ಪಾತ್ರ, ಅದು ಹೇಗೆಲ್ಲಾ ಇರುತ್ತೆ ಎಂಬುದಕ್ಕೆ ಸಿನಿಮಾ ಬರುವವರೆಗೆ ಕಾಯಬೇಕು. ಅಂದಹಾಗೆ, ಈ ಚಿತ್ರವನ್ನು ಜನವರಿ 19 ರಂದು ಬಿಡುಗಡೆ ಮಾಡಲು ನಿರ್ಮಾಪಕ ಕೆ.ಎ.ಸುರೇಶ್ ನಿರ್ಧರಿಸಿದ್ದಾರೆ. ಸುದೀಪ್ ಅವರು “ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ನಟಿಸಿದ್ದೇನೋ ನಿಜ.
ಈಗಲ್‌ಟನ್ ರೆಸಾರ್ಟ್‌ನಲ್ಲಿ ಅವರ ಅಭಿನಯದ ದೃಶ್ಯಗಳನ್ನು ನಿರ್ದೇಶಕ ನರೇಶ್‌ಕುಮಾರ್ ಚಿತ್ರಿಸಿಕೊಂಡಾಗಿದೆ. ಚಿತ್ರದ ದ್ವಿತೀಯಾರ್ಧದಲ್ಲಿ ಸುದೀಪ್ ಅವರ ಹಲವು ಮಹತ್ವದ ದೃಶ್ಯಗಳಿದ್ದು, ಅದೊಂದು ಸ್ಟೈಲಿಶ್ ಆಗಿರುವ ಪಾತ್ರ ಎಂದಷ್ಟೇ ಹೇಳಬಹುದು. ಸುದೀಪ್ ಅವರ ಎಂಟ್ರಿಯಿಂದ “ರಾಜು ಕನ್ನಡ ಮೀಡಿಯಂ’ಗೆ ಸಖತ್ ಮೈಲೇಜ್ ಸಿಕ್ಕಿರುವುದಂತೂ ಹೌದು.
ಈ ಮೂಲಕ ಕೇವಲ ನಿರ್ಮಾಪಕರಷ್ಟೇ ಅಲ್ಲ, ನಾಯಕ ಗುರುನಂದನ್‌ಗೂ ಖುಷಿಯಾಗಿದೆ. ಈಗಾಗಲೇ ಚಿತ್ರಕ್ಕೆ ಬೇಡಿಕೆ ಹೆಚ್ಚಿದ್ದು, ರಾಜ್ಯ ಸೇರಿದಂತೆ ವಿದೇಶಗಳಲ್ಲೂ ಚಿತ್ರ ಬಿಡುಗಡೆಗೆ ವಿತರಕರು ಹಕ್ಕು ಕೇಳಿದ್ದಾರೆ. ಈ ಹಿಂದೆ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಬಿಡುಗಡೆ ಮಾಡಿದ ಟೀಸರ್ ಭರ್ಜರಿ ಹಿಟ್ಸ್ ಆಗಿದ್ದು, ರಿಲೀಸ್ ಆದ ಒಂದೇ ವಾರಕ್ಕೆ ಸುಮಾರು 10 ಲಕ್ಷ ಜನರು ಟೀಸರ್ ವೀಕ್ಷಿಸಿದ್ದರು.
ಹಾಗಾಗಿ, ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆ ಕೂಡ ಜಾಸ್ತಿಯಾಗಿತ್ತು. “ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಗುರುನಂದನ್ ನಾಯಕರಾದರೆ, ಅವರಿಗೆ ಆಶಿಕಾ, ಆವಂತಿಕಾ ಶೆಟ್ಟಿ ನಾಯಕಿಯರು. ಆ್ಯಂಜಲೀನಾ ಎಂಬ ರಷ್ಯದ ಮಾಡೆಲ್ ನಟಿಸಿರುವುದು ಇನ್ನೊಂದು ವಿಶೇಷ. ಜೊತೆಗೆ, ಪ್ರಥಮ್ ಕೂಡಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಣ್ ರವೀಂದ್ರನಾಥ್ ಸಂಗೀತವಿದೆ. ಶೇಖರ್‌ಚಂದ್ರ ಅವರ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.