ಪ್ರದೀಪ್‌ಗೆ ಸುದೀಪ್ ಕಿರುಚಿತ್ರ
Team Udayavani, Jun 8, 2017, 3:30 PM IST
ಸದ್ದಿಲ್ಲದೆಯೇ ಸುದೀಪ್ ಅವರೊಂದು ಶಾರ್ಟ್ ಫಿಲ್ಮ್ ನಿರ್ದೇಶಿಸಿದ್ದಾರೆ. ಅವರ ನಿರ್ದೇಶನದಲ್ಲಿ ಪ್ರದೀಪ್ ನಟಿಸಿದ್ದಾರೆ ಕೂಡ. ಹೌದು, ಸುದೀಪ್ ಅವರು ಪ್ರದೀಪ್‌ಗೊಂದು ಶಾರ್ಟ್‌ಫಿಲ್ಮ್ ಮಾಡುವ ಮೂಲಕ ಹೊಸದೊಂದು ಪ್ರಯೋಗ ಮಾಡಿರುವುದುಂಟು. ಆದರೆ, ಆ ಪ್ರಯೋಗ ಮಾಡಿದ್ದು ಈಗಂತೂ ಅಲ್ಲ. ಅದು 2012ರಲ್ಲಿ. ಸುದೀಪ್‌ಗೆ ಹೊಸ ತಂತ್ರಜ್ಞಾನ ಬಂದರೆ ಸಾಕು ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ. ಆಗಷ್ಟೇ ಗೋಪ್ರೋ, ಗೋಪ್ರೋ ವಾಲ್‌ಮಾರ್ಟ್, ಗೋಪ್ರೋ ಹೀರೋ ಹೀಗೆ ತರಹೇವಾರಿ ಕ್ಯಾಮೆರಾಗಳ ಸುದ್ದಿ ಹರಿದಾಡುತ್ತಿತ್ತು.
ಸುದೀಪ್ ಅವರಿಗೆ ಆ ಕ್ಯಾಮೆರಾ ಹಿಡಿದು ಒಂದು ಶಾರ್ಟ್ ಫಿಲ್ಮ್ ಮಾಡಿದರೆ ಹೇಗೆ ಎಂಬ ಯೋಚನೆ ಬಂತು. ಹಾಗೆ ಬಂದಿದ್ದೇ ತಡ, ಅದೊಂದು ದಿನ ತಮ್ಮ ತಂಡದ ಸದಸ್ಯರ ಜತೆ ಚರ್ಚೆ ಮಾಡಿದರು. ಮರುದಿನ ಒಂದಷ್ಟು ಮಂದಿಯನ್ನು ಆಹ್ವಾನಿಸಿ, ಹೆಬ್ಟಾಳ ಫ್ಲೈಓವರ್ ಸಮೀಪದ ಸರ್ವೀಸ್ ರೋಡ್‌ಗೆ ಸಂಜೆ ಟೀಮ್ ಜತೆ ಹೊರಟೇಬಿಟ್ಟರು. ಆಗ ಸಂಜೆ ಏಳರ ಆಸುಪಾಸು. ಎಲ್ಲರೂ ಶಾರ್ಟ್ ಫಿಲ್ಮ್ಗೆ ಅಣಿಯಾಗಿದ್ದರು. ಹಾಗೆ ಮಾಡಿದ ಕೆಲಸ ಮುಂಜಾನೆಯವರೆಗೂ ನಡೆದಿದೆ.
ಸುದೀಪ್ ಮಾಡಿದ್ದು ಮರ್ಡರ್ ಮಿಸ್ಟರಿ ಕಥೆ. ಆ ಶಾರ್ಟ್ ಫಿಲ್ಮ್ಗಾಗಿ ಸಣ್ಣ ಸಣ್ಣ ಕ್ಯಾಮೆರಾಗಳ ಪ್ರಯೋಗ ಮಾಡಿದ್ದರು. ಎರಡು ದಿನಗಳ ಕಾಲ ಆ ಶಾರ್ಟ್‌ಫಿಲ್ಮ್ ಚಿತ್ರೀಕರಿಸಿದ ಸುದೀಪ್, ಯು ಟ್ಯೂಬ್‌ಗ ಅಪ್‌ಲೋಡ್ ಮಾಡಬೇಕು ಅಂತ ಎಲ್ಲವನ್ನೂ ತಯಾರಿ ಮಾಡಿಕೊಂಡಿದ್ದರೂ, ಅದಿನ್ನೂ ಯುಟ್ಯೂಬ್‌ಗ ಅಪ್‌ಲೋಡ್ ಆಗಿಲ್ಲ. ಅಂದಹಾಗೆ, ಆ ಶಾರ್ಟ್‌ಫಿಲ್ಮ್ಗಿನ್ನೂ ಹೆಸರಿಟಿಲ್ಲ.
ಇಷ್ಟಕ್ಕೂ ಇಷ್ಟೆಲ್ಲಾ ಹೇಳ್ಳೋಕೆ ಕಾರಣವೇನು ಗೊತ್ತಾ? ಪ್ರದೀಪ್ ಅಭಿನಯದ “ಟೈಗರ್’. ಚಿತ್ರದ ಟ್ರೇಲರ್ ಲಾಂಚ್ ಮಾಡಿ, ಪ್ರದೀಪ್ ಪ್ರತಿಭೆ ಬಗ್ಗೆ ಸುದೀಪ್ ಮಾತಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.