ಮತ್ತೆ ಕೋಟಿಗೊಬ್ಬನತ್ತ ಸುದೀಪ್: ಡಬ್ಬಿಂಗ್ ಶುರು ಮಾಡಿದ ಕಿಚ್ಚ
Team Udayavani, Jul 22, 2021, 8:50 AM IST
ಸದ್ಯ ನಟ ಕಿಚ್ಚ ಸುದೀಪ್ ಅಭಿನಯದ “ಕೋಟಿಗೊಬ್ಬ-3′ ಮತ್ತು “ವಿಕ್ರಾಂತ್ ರೋಣ’ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್‌ಗೆ ರೆಡಿಯಾಗುತ್ತಿವೆ. ಇತ್ತೀಚೆಗಷ್ಟೇ “ವಿಕ್ರಾಂತ್ ರೋಣ’ ಚಿತ್ರದ ಹೈ ವೋಲ್ಟೇಜ್ ಹಾಡಿನಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದ ಸುದೀಪ್ ಈಗ ಮತ್ತೆ “ಕೋಟಿಗೊಬ್ಬ-3′ ಚಿತ್ರದ ಕೆಲಸಗಳ ಕಡೆಗೆ ಮುಖ ಮಾಡಿದ್ದಾರೆ.
ಹೌದು, ಸದ್ಯ “ಕೋಟಿಗೊಬ್ಬ-3′ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ಕೆಲಸಗಳು ಭರದಿಂದ ನಡೆಯುತ್ತಿದ್ದು, ಸುದೀಪ್ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಶುರು ಮಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ಸುದೀಪ್, “ಈ ಬಾರಿ “ಕೋಟಿಗೊಬ್ಬ-3′ ಡಬ್ಬಿಂಗ್‌ಗಾಗಿ ಮತ್ತೂಮ್ಮೆ ಮೈಕ್ ಮುಂದೆ ಬಂದಿದ್ದೇನೆ. ಸತ್ಯ ಮತ್ತು ಶಿವನ ಫನ್ ಸಮಯ ಇದಾಗಿದೆ. ಈಗಾಗಲೇ ಪ್ರತಿಯೊಬ್ಬರು ತಮ್ಮ ಭಾಗದ ಡಬ್ಬಿಂಗ್, ಹಿನ್ನೆಲೆ ಸ್ಕೋರ್ ಮುಗಿಸಿದ್ದಾರೆ. ಈಗ ನನ್ನ ಭಾಗದ ಡಬ್ಬಿಂಗ್ ಮುಗಿಯುವುದರ ಮೂಲಕ ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ಕೆಲಸ ಮುಗಿಯುತ್ತದೆ. ಆದಷ್ಟು ಬೇಗ ಸಿನಿಮಾ ಬಿಡುಗಡೆ ಆಗಲಿದೆ’ ಎಂದಿದ್ದಾರೆ.
ಚಿತ್ರತಂಡ ಪ್ಲಾನ್ ಪ್ರಕಾರ ಇಷ್ಟೊತ್ತಿಗಾಗಲೇ “ಕೋಟಿಗೊಬ್ಬ-3′ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಲಾಕ್ ಡೌನ್ ಮತ್ತಿತರ ಕಾರಣಗಳಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದು, ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೊನೆ ಹಂತದಲ್ಲಿದೆ.
“ಕೋಟಿಗೊಬ್ಬ-3′ ಚಿತ್ರಕ್ಕೆ ಶಿವಕಾರ್ತಿಕ್ ನಿರ್ದೇಶನವಿದ್ದು, “ಕೋಟಿಗೊಬ್ಬ-2′ ಚಿತ್ರದಂತೆ, “ಕೋಟಿಗೊಬ್ಬ-3′ ಚಿತ್ರದಲ್ಲೂ ಕಿಚ್ಚ ಸುದೀಪ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಸುದೀಪ್‌ಗೆ ನಾಯಕಿಯಾಗಿ ಮಡೊನ್ನಾ ಸೆಬಾಸ್ಟಿಯನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.