‘ರೈಸನ್’ ಚಿತ್ರಕ್ಕೆ 22ರಂದು ಸುದೀಪ್ ಫೋಟೋಶೂಟ್
Team Udayavani, Oct 13, 2017, 8:50 PM IST
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಸುದೀಪ್ ಹಾಲಿವುಡ್ ಚಿತ್ರದಲ್ಲಿ ನಟಿಸುವುದಕ್ಕೆ ಆಸ್ಟ್ರೇಲಿಯಾಗೆ ಹಾರಬೇಕಿತ್ತು. ಆದರೆ, ಸ್ವಲ್ಪ ನಿಧಾನವಾಗಿದೆ. ‘ರೈಸನ್’ ಚಿತ್ರತಂಡದವರು ಇದೇ 22ಕ್ಕೆ ಬೆಂಗಳೂರಿಗೇ ಬರುತ್ತಾರಂತೆ. ಸುದೀಪ್ ಅವರ ಫೋಟೋ ಸೆಷನ್ ಇಲ್ಲೇ ನಡೆಯಲಿದೆಯಂತೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಚಿತ್ರದ ಕುರಿತು ಒಂದು ಪತ್ರಿಕಾಗೋಷ್ಠಿ ನಡೆಯುವ ಸಾಧ್ಯತೆಯೂ ಇದೆಯಂತೆ.
‘ರೈಸನ್’ ಚಿತ್ರಕ್ಕಾಗಿ ಸುದೀಪ್ ಅವರು ಅಕ್ಟೋಬರ್, ನವೆಂಬರ್‌ನಲ್ಲಿ ಡೇಟ್ಸ್ ಕೊಟ್ಟಿದ್ದಾರೆ ಎಂಬ ಸುದ್ದಿ ಈ ಹಿಂದಿತ್ತು. ಆದರೆ, ‘ದಿ ವಿಲನ್’ ಚಿತ್ರದ ಚಿತ್ರೀಕರಣ, ‘ಬಿಗ್ ಬಾಸ್’ನಿಂದಾಗಿ ಸ್ವಲ್ಪ ಮುಂದಕ್ಕೆ ಹೋಗಿದೆ. ಈ ಮಧ್ಯೆ, ಸುದೀಪ್ ಅವರ ಫೋಟೋಶೂಟ್ ಆಗಬೇಕಿತ್ತು. ಸುದೀಪ್‌ಗೆ ಅಲ್ಲಿಗೆ ಹೋಗುವುದಕ್ಕೆ ಸಾಧ್ಯವಾಗದ ಕಾರಣ, ಚಿತ್ರಂಡದವರೇ 22ರಂದು ಬೆಂಗಳೂರಿಗೆ ಬಂದು ಟೆಸ್ಟ್ ಶೂಟ್ ನಡೆಸುತ್ತಾರಂತೆ. ಅಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಮಾಡುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಸುದೀಪ್.
ಹಾಲಿವುಡ್ ಚಿತ್ರದ ಜೊತೆಗೆ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲೂ ಸುದೀಪ್ ಅಭಿನಯಿಸಬೇಕಿತ್ತು. ಆದರೆ, ಅದಿನ್ನೂ ಗೊಂದಲದಲ್ಲಿದೆ. ‘ಸದ್ಯಕ್ಕೆ ತುಂಬಾ ಕಮಿಟ್‌ಮೆಂಟ್‌ಗಳಿವೆ. ಈ ಸಂದರ್ಭದಲ್ಲಿ 50-60 ದಿನಗಳ ಕಾಲ್‌ಶೀಟ್ ಕೊಡುವುದು ಜೋಕ್ ಅಲ್ಲ. ಹಾಗಾಗಿ ಅದಿನ್ನೂ ಕನ್ಫರ್ಮ್ ಆಗಿಲ್ಲ. ಚರ್ಚೆ ನಡೆಯುತ್ತಿದೆ. ಇನ್ನೂ ಪೂರ್ತಿ ಒಪ್ಪಿಲ್ಲ. ಮುಂದಿನ ದಿನಗಳಲ್ಲಿ ನೋಡಬೇಕು’ ಎನ್ನುತ್ತಾರೆ ಸುದೀಪ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.