ಮೆಟ್ರೋ ಸೆಟ್‌ನಲ್ಲಿ ಕೋಟಿಗೊಬ್ಬ-3
Team Udayavani, Mar 14, 2019, 1:02 PM IST
ನಟ ಸುದೀಪ್ ಈಗಾಗಲೇ “ಪೈಲ್ವಾನ್’ ಚಿತ್ರ ಮುಗಿಸಿ ಈಗ “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ಬಿಝಿ. ಈ ಎರಡೂ ಚಿತ್ರಗಳು ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿವೆ. “ಪೈಲ್ವಾನ್’ ಚಿತ್ರದಲ್ಲಿ ಸುದೀಪ್ ಈ ಹಿಂದೆ ಕಾಣಿಸಿಕೊಳ್ಳದಂತಹ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಅದಕ್ಕೆ ಪೂರಕವಾಗಿ “ಪೈಲ್ವಾನ್’ ಚಿತ್ರದ ಟೀಸರ್ ಕೂಡಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಇನ್ನು, “ಕೋಟಿಗೊಬ್ಬ-3′ ಮೇಲೂ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ಕಾರಣ, “ಕೋಟಿಗೊಬ್ಬ-2′ ಚಿತ್ರದ ಯಶಸ್ಸು. “ಕೋಟಿಗೊಬ್ಬ-2′ ಚಿತ್ರ ಅಭಿಮಾನಿಗಳನ್ನು ರಂಜಿಸಿತ್ತು. ಈಗ “ಕೋಟಿಗೊಬ್ಬ-3′ ಚಿತ್ರೀಕರಣ ಕೂಡಾ ಜೋರಾಗಿ ನಡೆಯುತ್ತಿದೆ. ಈ ಚಿತ್ರ ಅಭಿಮಾನಿಗಳಿಗೆ ಮತ್ತಷ್ಟು ಮಜಾ ಕೊಡುತ್ತದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಆ್ಯಕ್ಷನ್ ದೃಶ್ಯಗಳಿಗಾಗಿ ಮೆಟ್ರೋ ರೈಲು ಹಳಿ ಸೆಟ್ ಹಾಕಲಾಗಿದೆ. ಮೆಟ್ರೋ ಸ್ಟೆಷನ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆಯಾ ಎನ್ನುವ ಮಟ್ಟಕ್ಕೆ ಮಿನರ್ವ ಮಿಲ್ ನಲ್ಲಿ ಸೆಟ್ ನಿರ್ಮಿಸಲಾಗಿದೆ. ಇಲ್ಲಿ ಚಿತ್ರದ ಪ್ರಮುಖ ಆ್ಯಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತದೆ.
ಲಾಲ್‌ಗುಡಿ ಇಳಯರಾಜಾ ಕಲಾ ನಿರ್ದೇಶನದಲ್ಲಿ ಈ ಸೆಟ್ ನಿರ್ಮಾಣವಾಗಿದೆ. ಸುದೀಪ್ ಕೂಡಾ “ಕೋಟಿಗೊಬ್ಬ-3′ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ. “ಕೋಟಿಗೊಬ್ಬ’ ಚಿತ್ರದ ಒಂದೊಂದು ಸೀನ್ ಕೂಡ ಖುಷಿಕೊಡುತ್ತದೆ. ಇಡೀ ಚಿತ್ರದಲ್ಲಿ ಮಜಾನೇ ತುಂಬಿದೆ.
ಇದು ಟಿಪಿಕಲ್ “ಕೋಟಿಗೊಬ್ಬ’. ದೊಡ್ಡ ಸೆಟ್‌ಗಳು ಇಲ್ಲಿವೆ. ಯಾರೂ ಇದುವರೆಗೆ ಮೆಟ್ರೋ ಸೆಟ್ ಹಾಕಿಲ್ಲ. ಅದಕ್ಕಾಗಿ ತುಂಬಾ ದಿನ ಶ್ರಮಿಸಲಾಗಿದೆ. ಐರನ್ ಮೋಲ್ಡ್‌ನಲ್ಲೇ ನಿರ್ಮಿಸಲಾಗಿದ್ದು, ತುಂಬ ಖರ್ಚು ಮಾಡಲಾಗಿದೆ. ದೊಡ್ಡ ಫಾರ್ಮೆಟ್‌ನಲ್ಲಿ ಕೆಲಸವಾಗಿದೆ’ ಎಂದು ಖುಷಿಯಿಂದ ಹೇಳುತ್ತಾರೆ ಸುದೀಪ್. ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.