![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 29, 2021, 8:50 PM IST
ಬೆಂಗಳೂರು: ಕೋವಿಡ್ ಬಿಕ್ಕಟ್ಟಿನ ನಂತರ ಚೇತರಿಸಿಕೊಳ್ಳುತ್ತಿರುವ ಚಿತ್ರರಂಗಕ್ಕೆ ಇದೀಗ ಪೈರಸಿಯ ಭಯ ಕಾಡುತ್ತಿದೆ. ಈ ಹಿನ್ನೆಲೆ ಕೋಟಿಗೊಬ್ಬ 3 ಚಿತ್ರತಂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಅಕ್ಟೋಬರ್ 14ಕ್ಕೆ ಬಿಡುಗಡೆಯಾಗುತ್ತಿದೆ. ಬೆಳ್ಳಿ ಪರದೆ ಮೇಲೆ ಸಿನಿಮಾ ತರಲು ಚಿತ್ರತಂಡ ಶ್ರಮ ವಹಿಸುತ್ತಿದೆ. ಅಭಿಮಾನಿಗಳನ್ನು ರಂಜಿಸಲು ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಸಜ್ಜಾಗಿರುವ ಕೋಟಿಗೊಬ್ಬನಿಗೆ ಇದೀಗ ಸಿನಿಮಾ ಚೋರರ ಭಯ ಶುರುವಾಗಿದೆ.
ಈ ಹಿಂದಿನಿಂದಲೂ ಬಿಡುಗಡೆಯಾದ ಮೊದಲ ದಿನವೇ ಬಹುತೇಕ ಸಿನಿಮಾಗಳು ಪೈರಸಿ ಆಗಿವೆ. ಆದರೆ, ಕೋಟಿಗೊಬ್ಬ 3 ಚತ್ರಕ್ಕೆ ಬಿಡುಗಡೆಯ ಮುನ್ನವೇ ಪೈರಸಿ ಕಾಟ ಶುರುವಾಗಿದೆ. ಚಿತ್ರದ ನಿರ್ಮಾಪಕ ಸೂರಪ್ಪಬಾಬುಗೆ ಟೆಲಿಗ್ರಾಂನಲ್ಲಿ ಬೆದರಿಕೆ ಸಂದೇಶಗಳು ಬರುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಸೈಬರ್ ಕ್ರೈಂ ಮೊರೆ ಹೋಗಿದ್ದಾರೆ.
ಬಹು ಕೋಟಿ ವೆಚ್ಚದಲ್ಲಿ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ನಿರ್ಮಾಣವಾಗಿದೆ. ಕೋಟಿಗೊಬ್ಬ-3 ಚಿತ್ರ ಅ.14 ರಂದು ತೆರೆಯ ಮೇಲೆ ಬರಲು ಸಿದ್ಧವಾಗಿದೆ. ಆದ್ರೆ, ಚಿತ್ರದ ನಿರ್ಮಾಪಕ ಸೂರಪ್ಪ ಬಾಬುಗೆ ಸಿನಿಮಾ ಬಿಡುಗಡೆ ಮಾಡಲು ಭಯ ಪಡುತ್ತಿದ್ದಾರೆ. ಕಿಡಿಗೇಡಿಗಳು ಸಿನಿಮಾ ಬಿಡುಗಡೆಯಾದ್ರೆ ಪೈರಸಿ ಮಾಡ್ತೀವಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕರು ಮುನ್ನೆಚ್ಚರಿಕೆ ಕ್ರಮವಾಗಿ ಸೈಬರ್ ಕ್ರೈಂ ಮೊರೆ ಹೋಗಿದ್ದು, ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಅಳಲು ತೊಡಿಕೊಂಡಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.