Sugar factory movie Review: ಪಬ್‌ನೊಳಗೊಂದು ಸುತ್ತು..
Team Udayavani, Nov 25, 2023, 11:03 AM IST
ಯೂಟ್ಯೂಬರ್ ಒಬ್ಬಳು ಗೋವಾದ ವಿಶೇಷವಾದ “ಶುಗರ್ ಫ್ಯಾಕ್ಟರಿ’ ಪಬ್ ಅನ್ನು ತನ್ನ ವೀಕ್ಷಕರಿಗೆ ಪರಿಚಯಿಸಲು ಹೊರಡುತ್ತಾಳೆ. ಪಬ್ ಒಳಗೆ ಕಾಲಿಟ್ಟ ಆ ಯೂ-ಟ್ಯೂಬರ್‌ಗೆ ಆ ಪಬ್‌ಗಿಂತ, ಅದರೊಳಗೆ ತನ್ನದೇ ಆದ ಕಥೆಯೊಂದನ್ನು ಬಚ್ಚಿಟ್ಟುಕೊಂಡು ಕುಳಿ ತಿ ರುವ ಆರ್ಯ ಎಂಬ ವೆಡ್ಡಿಂಗ್ ಪ್ಲಾನರ್‌ನ ಪ್ರೇಮ್ ಕಹಾನಿ ಕಣ್ಣಿಗೆ ಬೀಳುತ್ತದೆ. ಹೀಗೆ “ಶುಗರ್ ಫ್ಯಾಕ್ಟರಿ’ಯೊಳಗೆ ನಿಧಾನವಾಗಿ ರೊಮ್ಯಾಂಟಿಕ್ ಲವ್ ಸ್ಟೋರಿ ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತದೆ.
ಇದು ಈ ವಾರ ಬಿಡುಗಡೆಯಾಗಿರುವ “ಶುಗರ್ ಫ್ಯಾಕ್ಟರಿ’ ಸಿನಿಮಾದ ಆರಂಭದ ಒಂದಷ್ಟು ಸನ್ನಿವೇಶಗಳು. ಇಷ್ಟು ಹೇಳಿದ ಮೇಲೆ “ಶುಗರ್ ಫ್ಯಾಕ್ಟರಿ’ ಒಂದು ಯೂಥ್‌ಫುಲ್ ರೊಮ್ಯಾಂಟಿಕ್ ಲವ್‌ಸ್ಟೋರಿ ಸಿನಿಮಾ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. “ಶುಗರ್ ಫ್ಯಾಕ್ಟರಿ’ ಎಂಬ ಪಬ್ ಒಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಅದರ ಹಿಂದೆ ಲವ್, ಮದುವೆ, ಸಂಸಾರ, ಇಂದಿನ ಜನರೇಶನ್‌ನ ಗೊಂದಲಗಳನ್ನು ಒಂದು ಕಥೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ದೀಪಕ್ ಅರಸ್. ಆದರೆ ಸಿನಿಮಾದ ಕಥೆಗೆ ಕೊಟ್ಟ ಮಹತ್ವ ಚಿತ್ರಕಥೆ, ಸಂಭಾಷಣೆ ಮತ್ತು ನಿರೂಪಣೆಯ ಕಥೆಗೂ ಕೊಟ್ಟಿದ್ದರೆ, “ಶುಗರ್ ಫ್ಯಾಕ್ಟರಿ’ಯಲ್ಲಿ ಆಡಿಯನ್ಸ್ ಇನ್ನಷ್ಟು ತಾಜಾತನವನ್ನು ಸವಿಯಬಹುದಿತ್ತು. ಹಾಡು, ಡ್ಯಾನ್ಸ್, ಮೋಜು-ಮಸ್ತಿ ಹೀಗೆ ಎಲ್ಲ ಥರದ ಅಂಶಗಳನ್ನೂ ಹಿಡಿದಿಟ್ಟುಕೊಂಡು, ಇಡೀ ಸಿನಿಮಾವನ್ನು ಯೂಥ್‌ಫುಲ್ ಆಗಿ ತೆರೆಮೇಲೆ ಕಟ್ಟಿಕೊಡಲು ಚಿತ್ರತಂಡ ಹಾಕಿರುವ ಪರಿಶ್ರಮ ಎದ್ದು ಕಾಣುತ್ತದೆ.
ಇನ್ನು ನಾಯಕ ಡಾರ್ಲಿಂಗ್ ಕೃಷ್ಣ, ನಾಯಕಿಯರಾದ ಸೋನಾಲ್, ಅದ್ವಿತಿ ಶೆಟ್ಟಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ನಟರಾದ ರಂಗಾಯಣ ರಘು, ಶಶಿ, ಗೋವಿಂದೇ ಗೌಡ, ಸೂರಜ್ ಹೀಗೆ ಬೃಹತ್ ಕಲಾವಿದರ ತಾರಾಗಣವೇ ಸಿನಿಮಾದಲ್ಲಿದ್ದು, ಇತರ ಪಾತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ತಾಂತ್ರಿಕವಾಗಿ ಸಿನಿಮಾದ ಒಂದೆರಡು ಹಾಡುಗಳು ಗುನುಗುವಂತಿದ್ದು, ಸಿನಿಮಾದ ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಪೂರಕವಾಗಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಸಿನಿಮಾದ ಪ್ರತಿ ಫ್ರೆàಮ್‌ಗಳನ್ನೂ ಕಲರ್‌ಫುಲ್ ಆಗಿ ಕಾಣುವಂತೆ ಮಾಡಿದೆ.
-ಜಿ.ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.