ಫೇಸ್‍ಬುಕ್ ಖಾತೆಗೆ ಹೊಸ ಫೋಟೋ ಹಾಕಿದ ಸುಮಲತಾ
Team Udayavani, Nov 28, 2018, 5:30 PM IST
ರೆಬೆಲ್ ಸ್ಟಾರ್ ಅಂಬರೀಶ್ ಪಂಚಭೂತಗಳಲ್ಲಿ ಲೀನರಾದ ಬಳಿಕ ಪತ್ನಿ ಸುಮಲತಾ ಅವರು ತಮ್ಮ ಪತಿಯೊಂದಿಗೆ ಕಳೆದ ಸಂತಸದ ಕ್ಷಣಗಳನ್ನು ಮೆಲುಕು ಹಾಕಿದ್ದು, ಇದೀಗ ಅವರ ಫೇಸ್‍ಬುಕ್ ಪ್ರೊಫೈಲ್ ಹಾಗೂ ಕವರ್ ಫೋಟೋ ಬದಲಿಸಿದ್ದಾರೆ. ಹೌದು! ಮಲೇಷಿಯಾದಲ್ಲಿ ನಡೆದ 25ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಸೆರೆ ಹಿಡಿಸಿದ್ದ ಚಿತ್ರವನ್ನು ಮಂಗಳವಾರ ಮಧ್ಯಾಹ್ನ ವೇಳೆಗೆ ತಮ್ಮ ಫೇಸ್ ಬುಕ್ ಕವರ್ ಫೋಟೋ ಆಗಿ, ಅಲ್ಲದೇ ಅಂತಿಮ ವಿಧಿ ವಿಧಾನ ನಡೆಯುವ ವೇಳೆ ಇರಿಸಿದ್ದ ಫೋಟೋವನ್ನು ಪ್ರೊಫೈಲ್ ಫೋಟೋವನ್ನಾಗಿ ಸುಮಲತಾ ಅಂಬರೀಶ್ ಅವರು ಬದಲಿಸಿದ್ದಾರೆ.
ಇತ್ತ ಸುಮಲತಾ ಅವರ ಪ್ರೊಫೈಲ್ ಬದಲಾಗುತ್ತಿದಂತೆ ಕೆಲ ಅಭಿಮಾನಿಗಳು ಫೋಟೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಂಬಿ ಅವರನ್ನು ಕಳೆದುಕೊಂಡ ಬಗ್ಗೆ ಸಂತಾಪ ಸೂಚಿಸಿ, ಸುಮಲತಾ ಅವರಿಗೆ ಸಾಂತ್ವನದ ನುಡಿಗಳನ್ನ ಹೇಳಿದ್ದಾರೆ. ಅಲ್ಲದೇ ಪ್ರೀತಿ, ನೋವುಗಳ ಮಧ್ಯೆ ಅಂಬಿ ಅವರಿಗೆ ಬೆಂಬಲವಾಗಿ ನಿಂತ ನಿಮಗೆ ಧನ್ಯವಾದ ಎಂದು ತಿಳಿಸಿದ್ದಾರೆ.
ಇನ್ನು ಅಂಬರೀಶ್ ಹಾಗೂ ಸುಮಲತಾ ಅವರು 1984ರಲ್ಲಿ ತೆರೆಗೆ ಬಂದ “ಆಹುತಿ’ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಳಿಕ ಸುಮಾರು ಆರೇಳು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿಯ ಸ್ನೇಹ ಪ್ರೀತಿಗೆ ತಿರುಗಿ 1991 ರಲ್ಲಿ ಮದುವೆಯಾಗಿದ್ದರು. 27 ವರ್ಷ ಸಂತಸದ ಸಂಸಾರ ನಡೆಸಿದ್ದ ಈ ಜೋಡಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಮಲೇಷಿಯಾದಲ್ಲಿ ಆಚರಣೆ ಮಾಡಿ ಸಂಭ್ರಮಿಸಿದ್ದರು. ಈ ವೇಳೆ ತೆಗೆದ ಫೋಟೋವನ್ನೇ ಸುಮಲತಾ ಅವರು ತಮ್ಮ ಫೇಸ್‍ಬುಕ್ ಖಾತೆಗೆ ಅಪ್ ಡೇಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.