ಅಜೇಯ್ಗೆ ಸುಮಲತಾ ತಾಯಿ
Team Udayavani, Nov 7, 2017, 6:25 PM IST
ನಿರ್ದೇಶಕ ಶಶಾಂಕ್ “ತಾಯಿಗೆ ತಕ್ಕ ಮಗ’ ಎಂಬ ಸಿನಿಮಾ ನಿರ್ಮಿಸುತ್ತಿರೋದು ನಿಮಗೆ ಗೊತ್ತೇ ಇದೆ. ಈ ಚಿತ್ರದಲ್ಲಿ ಅಜೇಯ್ ರಾವ್ ನಾಯಕ. ಇದು ಅಜೇಯ್ ಅವರ 25ನೇ ಸಿನಿಮಾ ಎಂಬುದು ಮತ್ತೂಂದು ವಿಶೇಷ. ಹೆಸರಿಗೆ ತಕ್ಕಂತೆ ಈ ಸಿನಿಮಾದಲ್ಲಿ ತಾಯಿ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ.
ಹಾಗಾಗಿ, ನಿರ್ಮಾಪಕ ಶಶಾಂಕ್ ತಾಯಿ ಪಾತ್ರವನ್ನು ಯಾರಿಂದ ಮಾಡಿಸೋದೆಂದು ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಈಗ ತಾಯಿ ಸಿಕ್ಕಿದ್ದಾರೆ. ಆ ತಾಯಿ ಸುಮಲತಾ ಅಂಬರೀಶ್. ಹೌದು, ಸುಮಲತಾ ಅಂಬರೀಶ್ ಅವರು “ತಾಯಿಗೆ ತಕ್ಕ ಮಗ’ನಲ್ಲಿ ತಾಯಿಯ ಪಾತ್ರ ಮಾಡುತ್ತಿದ್ದಾರೆ.
ಈ ಮೂಲಕ ಅಜೇಯ್ ರಾವ್ ಹಾಗೂ ಸುಮಲತಾ ಅಂಬರೀಶ್ ಮತ್ತೂಮ್ಮೆ ಜೊತೆಯಾಗಿ ನಟಿಸುತ್ತಿದ್ದಾರೆ. ಹೌದು, ಅಜೇಯ್ ರಾವ್ ಅವರ ಮೊದಲ ಚಿತ್ರ “ಎಕ್ಸ್ಕ್ಯೂಸ್ ಮೀ’ ಚಿತ್ರದಲ್ಲಿ ಸುಮಲತಾ ಅಂಬರೀಶ್ ತಾಯಿಯಾಗಿ ನಟಿಸಿದ್ದರು. ಈಗ 25ನೇ ಚಿತ್ರದಲ್ಲೂ ತಾಯಿಯಾಗಿ ನಟಿಸುತ್ತಿದ್ದಾರೆ.
ಚಿತ್ರದುದ್ದಕ್ಕೂ ಸಾಗಿ ಬರುವ ತಾಯಿಯ ಪಾತ್ರ ಪ್ರಮುಖವಾಗಿದ್ದರಿಂದ ಸುಮಲತಾ ಅವರನ್ನು ಚಿತ್ರತಂಡ ಕೇಳಿಕೊಂಡಿದೆ. ಪಾತ್ರ ಕೇಳಿ ಖುಷಿಯಾದ ಅವರು ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಇಲ್ಲಿ ಸುಮಲತಾ ಅವರು ಅಳುಮುಂಜಿ ತಾಯಿಯಲ್ಲ. ಬದಲಾಗಿ ರೆಬೆಲ್ ತಾಯಿ
ಚಿತ್ರಕ್ಕೆ ಡಿಸೆಂಬರ್ ಎರಡನೇ ವಾರ ಚಿತ್ರೀಕರಣ ಆರಂಭವಾಗಲಿದೆ. ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ಶಶಾಂಕ್ ಆಡಿಷನ್ ಮಾಡಿದ್ದು, ಯಾರೂ ಆಯ್ಕೆಯಾಗಿಲ್ಲ. ಹಾಗಾಗಿ, ಸದ್ಯ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ನಟಿಯೊಬ್ಬರು ಅಜೇಯ್ಗೆ ಜೋಡಿಯಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.