ಶೂಟಿಂಗ್ ವೇಳೆ ತೀವ್ರ ಹೊಟ್ಟೆ ನೋವು:ಆಸ್ಪತ್ರೆಗೆ ದಾಖಲಾದ ಸನ್ನಿ
Team Udayavani, Jun 23, 2018, 9:57 AM IST
ಉಧಾಮ್‌ಸಿಂಗ್ ನಗರ್ (ಉತ್ತರಾಖಂಡ ): ಎಂಟಿವಿಯ ಜನಪ್ರಿಯ ರಿಯಾಲಿಟಿ ಶೋ ಸ್‌ಪ್ಲಿಟ್ಸ್‌ವಿಲ್ಲೇ ಯ 11 ನೇ ಸರಣಿಯ ಶೂಟಿಂಗ್ ವೇಳೆ ಮಾದಕ ನಟಿ ಸನ್ನಿ ಲಿಯೋನ್ ಹೊಟ್ಟೆ ನೋವಿನಿಂದ ಬಳಲಿದ್ದು , ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಘಟನೆ ನಡೆದಿದ್ದು ಕಾಶಿಪುರ್‌ನ ಬ್ರಿಜೇಶ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ವೈದ್ಯರು ವಿಶೇಷ ಮುತುವರ್ಜಿ ವಹಿಸಿ ಚಿಕಿತ್ಸೆ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಶನಿವಾರ ಸಂಜೆ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಸನ್ನಿ ಕೆಲ ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗಿಯಾಗುವ ಸಾಧ್ಯತೆಗಳಿಲ್ಲ ಎಂದು ಮ್ಯಾನೇಜರ್ ತಿಳಿಸಿದ್ದಾರೆ.
ಸನ್ನಿ ಲಿಯೋನ್ ಕೈಯಲ್ಲಿ ಹಲವು ಚಿತ್ರಗಳಿದ್ದು, ತಮಿಳು ಚಿತ್ರ ವೀರಮಹಾದೇವಿಯಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ಯುದ್ಧ ಭೂಮಿಯ ದಿಟ್ಟ ಸೇನಾನಿಯ ಪಾತ್ರ ನಿರ್ವಹಿಸುತ್ತಿದ್ದಾರೆ.
ತನ್ನಿ ನೀಲಿ ಚಿತ್ರ ರಂಗದಿಂದ ಬಾಲಿವುಡ್ ಪ್ರವೇಶದ ಕುರಿತಾಗಿನ ಜೀವನ ಕಥನವುಳ್ಳ ಕರೆಂಜಿತ್ ಕೌರ್ ಚಿತ್ರದ ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.