ಸಸ್ಪೆನ್ಸ್-ಥ್ರಿಲ್ಲರ್ “ಸ್ತಬ್ಧ”: ರಾಘವೇಂದ್ರ ರಾಜಕುಮಾರ್ ನಟನೆ
Team Udayavani, Jan 28, 2022, 10:40 AM IST
ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅಭಿನಯದ ಹೊಸಚಿತ್ರ “ಸ್ತಬ್ಧ’ ಚಿತ್ರಕ್ಕೆ ಇತ್ತೀಚೆಗೆ ಚಾಲನೆ ಸಿಕ್ಕಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಶಾಸಕ ರಾಮಲಿಂಗ ರೆಡ್ಡಿ ಅವರ ಪುತ್ರ ಶ್ರೀರಾಜ್ ರಾಮಲಿಂಗಾರೆಡ್ಡಿ ಕ್ಲಾಪ್ ಮಾಡಿದರೆ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಮಾಡಿದರು. ಶಾಸಕಿ ಸೌಮ್ಯ ರೆಡ್ಡಿ, ಮಮತಾ ದೇವರಾಜ್ ಮುಂತಾದ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು. “ಸಾಯಿ ಸಾಗರ್ ಫಿಲಂ ಫ್ಯಾಕ್ಟರಿ’ ಬ್ಯಾನರ್‌ನಲ್ಲಿ ಡಾ. ಡಿ. ವಿ ವಿದ್ಯಾಸಾಗರ್ ನಿರ್ಮಿಸುತ್ತಿರುವ “ಸ್ತಬ್ಧ’ ಚಿತ್ರಕ್ಕೆ ಲಾಲಿ ರಾಘವ ನಿರ್ದೇಶನ ಮಾಡುತ್ತಿದ್ದಾರೆ.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಲಾಲಿ ರಾಘವ, “ಈಗಾಗಲೇ ತಮಿಳಿನಲ್ಲಿ ಒಂದು ಸಿನಿಮಾ ನಿರ್ದೇಶಿಸಿರುವ ನನಗೆ ಇದು ಎರಡನೇ ಸಿನಿಮಾ. ಮನುಷ್ಯನ ಮನಸ್ಸು, ಸ್ಥಿಮಿತತೆ ಕಳೆದುಕೊಂಡು ಭ್ರಮಾಲೋಕಕ್ಕೆ ಪಯಣಿಸಿದಾಗ, ಆಗುವಂತಹ ಪರಿಣಾಮಗಳು ಮತ್ತು ಅದರಿಂದ ಹೊರಬರಲು ನಾಯಕ ನಡೆಸುವ ಹೋರಾಟದ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ’ ಎಂದು ಕಥಾಹಂದರ ತೆರೆದಿಟ್ಟರು.
“ಈ ಸಿನಿಮಾದಲ್ಲಿ ಕಥೆಯೇ ಹೈಲೈಟ್. ಇದೊಂದು ಸಸ್ಪೆನ್ಸ್ ಸಿನಿಮಾವಾಗಿರುವುದರಿಂದ ಕಥೆಯ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ನನಗೆ ಇಲ್ಲೊಂದು ಒಳ್ಳೆಯ ಪಾತ್ರವಿದೆ. ಒಂದೊಳ್ಳೆ ಸಿನಿಮಾ ಎದುರು ನೋಡುತ್ತಿದ್ದೇವೆ’ ಎನ್ನುವುದು ರಾಘವೇಂದ್ರ ರಾಜಕುಮಾರ್ ಮಾತು.
ಚಿತ್ರದ ಬಗ್ಗೆ ಮಾತನಾಡಿದ ನಟಿ ಹರ್ಷಿಕಾ ಪೂಣಚ್ಛ, “ನನ್ನ ಮೊದಲ ಸಿನಿಮಾದ ನಂತರ ರಾಘಣ್ಣ ಫೋನ್ ಮಾಡಿ, ನಮ್ಮ ಪ್ರೊಡಕ್ಷನ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ “ಜಾಕಿ’ ಸಿನಿಮಾದಲ್ಲಿ ನೀವು ನಟಿಸಬೇಕೆಂದರು. ಆಗ ನನಗಾದ ಖುಷಿ ಅಷ್ಟಿಷ್ಟಲ್ಲ. ಈಗಾಗಲೇ ಶಿವಣ್ಣ, ಪುನೀತ್ ಸರ್ ಜೊತೆ ನಟಿಸಿದ್ದರೆ, ಈ ಸಿನಿಮಾದಲ್ಲಿ ರಾಘಣ್ಣ ಅವರ ಮಗಳಾಗಿ ಅಭಿನಯಿಸುತ್ತಿದ್ದೇನೆ. ಡಾ. ರಾಜಕುಮಾರ್ ಅವರ ಮೂರು ಮಕ್ಕಳ ಜೊತೆ ನಟಿಸುವ ಭಾಗ್ಯ ನನಗೆ ಸಿಕ್ಕಿರುವ ಸಂತೋಷವಿದೆ’ ಎಂದರು.
ಇನ್ನು ಪ್ರತಾಪ್ ಸಿಂಹ, ಹರ್ಷಿಕಾ ಪೂಣತ್ಛ, ಪ್ರಶಾಂತ್ ಸಿದ್ಧಿ, ಶ್ರುತಿ, ಯಶ್ ಶೆಟ್ಟಿ, ಜಯಶ್ರೀ ಆರಾಧ್ಯ, ಬೇಬಿ ಅಂಕಿತಾ, ಮಾ. ಚಿನ್ಮಯ್, ಪ್ರಿಯಾಂಕಾ, ಮಂಜುಳಾ, ಶಿವಕುಮಾರ್ ಆರಾಧ್ಯ, ರತ್ನ ಕುಮಾರಿ, ರಾಜು ನಾಯಕ್, ಕುಮಾರ್ ಎಸ್. ಮೊದಲಾದವರು “ಸ್ತಬ್ಧ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಹಂಸಲೇಖ ಸಾಹಿತ್ಯವಿದ್ದು, ಆರವ್ ರಿಷಿಕ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪಿ.ವಿ. ಆರ್ ಸ್ವಾಮಿ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ.
– ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia vs Pakistan T20: ಪಾಕ್ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.