ಸುವರ್ಣದಲ್ಲೂ ಮಹಾಸಂಚಿಕೆ
Team Udayavani, Jan 12, 2017, 11:16 AM IST
ಸ್ಟಾರ್ ಸುವರ್ಣ ಚಾನಲ್‌ನ ಜನಪ್ರಿಯ ಧಾರಾವಾಹಿಗಳಾದ “ಅಮೃತರ್ವಣಿ’ ಮತ್ತು ‘ಅವನು ಮತ್ತೆ ಶ್ರಾವಣಿ’ ಸಾವಿರಾರು ಕಂತುಗಳನ್ನು ಪೂರ್ಣಗೊಳಿಸಿ, ಜನಮನ ಗೆದ್ದಿವೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಸುವರ್ಣ ಇವೆರಡೂ ಧಾರಾವಾಹಿಗಳನ್ನು ಸೇರಿಸಿ, ಮಹಾಸಂಚಿಕೆ ಮಾಡಲು ನಿರ್ಧರಿಸಿದೆ. ಜನವರಿ 16ರಿಂದ ಈ ಸಂಚಿಕೆಗಳು ಪ್ರಾರಂಭವಾಗುತ್ತವೆ. ಈಗಾಗಲೇ ಈ ಎರಡು ಧಾರವಾಹಿಗಳ ನಾಯಕಿಯರು ಅತ್ಯಂತ ಕಷ್ಟ ಹಾಗೂ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ.
ಹೀಗಾಗಿ ಈ ಎರಡೂ ಕುಟುಂಬದವರು ಪುಣ್ಯಕ್ಷೇತ್ರಕ್ಕೆ ಒಟ್ಟಿಗೆ ಹೋಗುವುದರ ಜೊತೆಗೆ ಅಲ್ಲಿ ಆಂತರಿಕ ಸಮಸ್ಯೆಗಳನ್ನು ಹಂಚಿಕೊಂಡು ಪರಿಹಾರಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಪಡುತ್ತಾರೆ. ಈ ಪಯಣದಲ್ಲಿ ಎರಡು ಧಾರಾವಾಹಿಗಳ ಕುಟುಂಬದ ಸದಸ್ಯರುಗಳೂ ಕೂಡಾ ಭಾಗವಸುತ್ತಾರೆ. ಈ ಪಯಣದಲ್ಲಿ ಸಾಕಷ್ಟು ಕುತೂಹಲಕಾರಿ ಘಟನೆಗಳು, ಒಂದಿಷ್ಟು ಮುಚ್ಚಿಟ್ಟ ಸಂಗತಿಗಳನ್ನು ಬಹಿರಂಗಗೊಳ್ಳಲಿದೆ.
ಇಂಥ ಮಹಾಸಂಚಿಕೆಗೆ ಶ್ರೀನಾಥ್ ಮತ್ತು ಪದ್ಮಾವಾಸಂ ಸಾಥ್ ನೀಡಿರುವುದು ವಿಶೇಷ. ಈ ಸೆಲಬ್ರಿಟಿಗಳ ಆಗಮನದಿಂದ ಇವೆರಡು ಧಾರಾವಾಹಿಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆ. “ಅಮೃತರ್ವಣಿ’ ಮತ್ತು “ಅವನು ಮತ್ತೆ ಶ್ರಾವಣಿ’ ಮಹಾ ಸಂಚಿಕೆಯು ಇದೇ ಸೋಮವಾರದಿಂದ ಸ್ಟಾರ್ ಸುವರ್ಣವಾನಿಯಲ್ಲಿ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.